ಕೋತಿಗಳು ಸಾರ್ ಕೋತಿಗಳು

ಕೋತಿಗಳು ಸಾರ್ ಕೋತಿಗಳು

ಭಾನುವಾರ ಸಂಜೆ ತಾರಾಲಯಕ್ಕೆ ತಡವಾಗಿ ಹೊದದ್ದಕ್ಕೆ ಕಾರಣ ಇದೆ. 

ಇಲ್ಲ ಇಲ್ಲ! ಅದಕ್ಕೂ ಲೇಖನದ ತಲೆ ಬರಹಕ್ಕೂ, ಕೆಳಗೆ ಕಾಣ್ತಿರೋ ಚಿತ್ರಕ್ಕೂ ಏನೇನೋ ಅರ್ಥ ಕಲ್ವಿಸಬೇಡಿ. "ನಗರದಲ್ಲಿ ಕೋತಿಗಳ ಹಾವಳಿ" ಅಂಥ ಸುದ್ದಿ ಮಾಡ್ಲಿಕ್ಕಂತೂ ಹೋಗಿರ್ಲಿಲ್ಲ. ಅದರ ಲೇಖಕರನ್ನ  ಭೇಟಿ ಮಾಡುವ ಸುಸಂದರ್ಭ ಒದಗಿ ಬಂದಿತ್ತು. ಅವರೊಡನೆ ಮಧ್ಯಾನ ಊಟಕ್ಕೆ ಕುಳಿತು ತೇಜಸ್ವಿ,  ಡಿ.ವಿ.ಜಿ, ಬಿ.ಜಿ.ಎಲ್ ಸ್ವಾಮಿ ಇನ್ನೂ ಅನೇಕರ ನೆನಪು ಮಾಡಿಕೊಂಡದ್ದಾಯಿತು. ಹಾಗೇ ಸಾಗಿದ ಮಾತುಕತೆ ಅನೇಕ ವಿಷಯಗಳನ್ನೂ ಕೆದಕಿತು. ಸಂಪದದಲ್ಲಿ ಬರ್ತಿರೋ ಕೆಲ ಬರಹಗಳ ಬಗ್ಗೆಯೂ ಮಾತನಾಡಿದ್ದಾಯಿತು. ಅವರನ್ನು ಬೀಳ್ಕೊಟ್ಟು ತಾರಾಲಯ ಸೇರೋದರ ಒಳಗೆ ತಡವಾಗಿ ಹೋಗಿತ್ತು. ಇರಲಿ ತೊಂದರೆ ಇಲ್ಲ. ಲೇಖಕರ ಜೊತೆ ಕಳೆದ ರಸ ನಿಮಿಷಗಳು ನಕ್ಕು ನಗಿಸುವುದರ ಜೊತೆ, ಅನೇಕ ವಿಷಯಗಳೆಡೆಗೆ ನಮ್ಮ ಮನಸ್ಸನ್ನು ಸೆಳೆಯಿತು. ಅವರಿಗೆ ಟೆಕ್ನಾಲಜಿ ಬಗ್ಗೆ ಇರುವ ಉತ್ಸಾಹದ ಅರಿವೂ ಆಯಿತು. ಅವರೂ ನಮ್ಮ ನಿಮ್ಮಂತೆಯೆ ಅನೇಕ ವರ್ಷಗಳಿಂದ ಒಬ್ಬ ಟೆಕಿ ಕೂಡ.

ಈ ಲೇಖಕರು ತಮ್ಮದೇ ಪ್ರಕಾಶನವನ್ನೂ ಹೊಂದಿದ್ದಾರೆ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇತ್ಯಾದಿಗಳನ್ನೂ ಪಡೆದಿದ್ದಾರೆ, ಕೋತಿಗಳು ಸಾರ್ ಕೋತಿಗಳು ಪುಸ್ತಕದಲ್ಲಿ ಹೇಗೆಲ್ಲ ಚೇಷ್ಟೆಗಳನ್ನ ಕೋತಿಗಳು ಮಾಡ್ತವೆ ಅಂತ ಸುಂದರವಾಗಿ ಪ್ರಬಂಧ ರೂಪದಲ್ಲಿ ಬರೆದಿದ್ದಾರೆ. 

ಅವರು ನೀಡಿದ ಈ ಪುಸ್ತಕ ನನ್ನ ಪುಸ್ತಕ ಭಂಡಾರವನ್ನ ಈಗ ಸೇರಿದೆ. ದಿನಾಲು ಒಂದೊಂದು ಕಥೆ ಓದ್ತಿದೀನಿ. 

ಇವರು ಯಾರು ಅಂಥ ಹೇಳ್ಲಿಕ್ಕಾಗುತ್ತಾ? ಹೇಳಿದವರಿಗೆ ಮುಂದೊಮ್ಮೆ ಭೇಟಿ ಮಾಡಿದಾಗ "ಬಸವನಗುಡಿಯ ವಿಧ್ಯಾರ್ಥಿ ಭವನದಲ್ಲಿ" ಟ್ರೀಟ್. 

 

 

 

Rating
No votes yet

Comments