ಕೋರಿಕೆ
ಚಿತ್ರ
ಮರು ಜನುಮದಲೂ
ನಿನ್ನ ಕಾಲಿಗೆ ಬಿದ್ದೇನು!
ಓ ಮದನ!
ನನ್ನ ಮೇಲೆ ನೀ ಬಿಟ್ಟ
ಬಾಣಗಳಲೇ
ಅವನನೂ ಹೊಡೆದು
ಗಾಸಿಗೊಳಿಸುವೆಯಾ?
ಪ್ರಾಕೃತ ಮೂಲ (ಹಾಲನ ಗಾಹಾಸತ್ತಸಯಿ, ೫-೪೧)
ಜಮ್ಮಂತರೇ ವಿ ಚಲಣಂ ಜೀಏಣ ಖು ಮಅಣ ತುಜ್ಝ ಅಚ್ಚಿಸ್ಸಮ್|
ಜಇ ತಂ ಪಿ ತೇಣ ಬಾಣೇಣ ವಿಜ್ಝಸೇ ಜೇಣ ಹಂ ವಿಜ್ಝಾ ||
ಸಂಸ್ಕೃತ ಅನುವಾದ (ನಿರ್ಣಯ ಸಾಗರ ಮುದ್ರಣಾಲಯ ಟೀಕೆ):
ಜನ್ಮಾಂತರೇಪಿ ಚರಣೌ ಜೀವೇನ ಖಲು ಮದನ ತವಾರ್ಚಯಿಷ್ಯಾಮಿ
ಯದಿ ತಮಪಿ ತೇನ ಬಾಣೇನ ವಿಧ್ಯಸಿ ಯೇನಾಹಂ ವಿದ್ಧಾ ||
-ಹಂಸಾನಂದಿ
ಚಿತ್ರಕೃಪೆ : ವಿಕಿಮೀಡಿಯಾ , ಕಬ್ಬಿನ ಬಿಲ್ಲನ್ನು ಹಿಡಿದ ಮನ್ಮಥ
Rating
Comments
ಉ: ಕೋರಿಕೆ
ಮದ-ನಾರಿಯ ಬಯಕೆ ಚೆನ್ನಾಗಿ ಮೂಡಿಸಿರುವಿರಿ.