ಕೋರಿಕೆ

ಕೋರಿಕೆ

ಚಿತ್ರ

ಕೌಸ್ತುಭವನಿಟ್ಟವಗೆ  ಮಧುವನ್ನು ಮಡುಹಿದಗೆ

ಹೊಳೆವ ನೀಲದ ಮಾಲೆಯ ಹೋಲ್ವ ನೋಟಗಳ

ಕಮಲದಲಿ ನಿಂದಿಹಳೆ ಬಯಸಿದ್ದನೀಯುವಳೆ 

ತುಸು ಬೀರು ಎನ್ನೆಡೆಗೆ ಮಂಗಳವ ತರುತ!   

 

ಸಂಸ್ಕೃತ ಮೂಲ ( ಆದಿ ಶಂಕರರ ಕನಕಧಾರಾ ಸ್ತೋತ್ರ - ೪): 

 

ಬಾಹ್ವಂತರೇ ಮಧುಜಿತಃ ಶ್ರಿತಕೌಸ್ತುಭೇ ಯಾ

ಹಾರಾವಲೀವ ಹರಿ ನೀಲಮಯೀ ವಿಭಾತಿ

ಕಾಮಪ್ರದಾ ಭಗವದೋಪಿ ಕಟಾಕ್ಷ ಮಾಲಾ

ಕಲ್ಯಾಣಮಾವಹತು ಮೇ ಕಮಲಾಲಯಾಯಾಃ

 

-ಹಂಸಾನಂದಿ

 

ಕೊ: ಈ ದಿನ ಶ್ರಾವಣ ಪೂರ್ಣಿಮಾ ಪೂರ್ವೋಕ್ತ ಶುಕ್ರವಾರ , ವರಮಹಾಲಕ್ಷ್ಮಿ ಹಬ್ಬ.  ಹಿಂದಿನ ವರ್ಷಗಳಲ್ಲಿ ಈ ದಿನ ಕೆಲವು ಸ್ತೋತ್ರಗಳನ್ನು ಅನುವಾದಿಸಿದ್ದು ನೆನಪಾಗಿ, ಇವತ್ತೂ ಕೂಡ ಶಂಕರರ ಕನಕಧಾರಾಸ್ತೋತ್ರ ದಿಂದ ಒಂದು ಅನುವಾದ ಮಾಡಿದೆ.

ಕೊ.ಕೊ: ಮೂಲದ ಪ್ರತಿ ಪದವೂ ಅನುವಾದದಲ್ಲಿ ತರಲಾಗಲಿಲ್ಲ. ಮೂಲದಲ್ಲಿ ಪತಿಯಾದ ವಿಷ್ಣುವಿಗೂ ಲಕ್ಷ್ಮಿಯ ದೃಷ್ಟಿಯ ಸಾಲು, ಅವನ ಎದೆಯ ಮೇಲೆ ಹೊಳೆವ ಮಾಲೆಯಂತಿದ್ದು, ಅವನಿಗೂ ಅದು ಮಂಗಳಕಾರಕ ಎಂಬುದು ಧ್ವನಿಸುತ್ತದೆ. ನಾನು ಪಂಚಮಾತ್ರಾಚೌಪದಿಯ ಧಾಟಿಯನ್ನು  ಇಟ್ಟುಕೊಂಡಿದ್ದರಿಂದ, ಆ ಅರ್ಥವನ್ನು  ಪೂರ್ತಿಯಾಗಿ ಧ್ವನಿಸಲಾರದೇ ಹೋದೆ!

ಚಿತ್ರ ಕೃಪೆ: http://www.exoticindiaart.com/product/paintings/lord-vishnu-in-vaikuntha...

Rating
No votes yet