ಕ್ಋಷ್ಣ-ಭಾಮೆಯರ ಸಂವಾದ

ಕ್ಋಷ್ಣ-ಭಾಮೆಯರ ಸಂವಾದ

ಕೆಳದಿ ಆಸ್ಥಾನದ ಕವಿಮನೆತನದ ಸುಬ್ಬಾಭಟ್ಟ ಅಥವಾ ಸುಬ್ಬಕವಿ ವೆಂಕ-ಕವಿ-ದೇವಮ್ಮನ ಮಗನೆಂದು ಕೆಳದಿಯಲ್ಲಿರುವ ಕವಿ ವಂಶಸ್ಥರ ವಂಶಾವಳಿಯಿಂದ ತೋರುತ್ತದೆ. ಈತನ ಕಾಲವನ್ನು
ಕ್ರಿ.ಶ.1770 ಎಂದು ತಿಳಿಯಬಹುದಾಗಿದೆ. ಆದರೂ ಈತನ ಕಾಲದ ಬಗ್ಗೆ ಬಹಳ ಜಿಜ್ಷಾಸೆಯಿದೆ. ಸಾ.ಶಿ.ಮರುಳಯ್ಯನವರು ತಮ್ಮ "ಕೆಳದಿ ಅರಸರು ಮತ್ತು ಕನ್ನಡ ಸಾಹಿತ್ಯ" ಪುಸ್ತಕದಲ್ಲಿ ಈತನ ಕಾಲವನ್ನು 1760 ಎಂದು ಅಭಿಪ್ರಾಯಪಡುತ್ತಾರೆ. ವೆಂಕ ಕವಿಯ ಕಾಲ 1770 ಎಂದಾದರೆ, ಆತನ ಮಗನಾದ ಸುಬ್ಬಾಭಟ್ಟನ ಕಾಲ ಸುಮಾರು 1790 ಎನ್ನಬಹುದಾಗಿದೆ. ರುಕ್ಮಣಿ ಸ್ವಯಂವರ (ಯಕ್ಷಗಾನ) ಮತ್ತು ಪಾರಿಜಾತ (ಯಕ್ಷಗಾನ) ಎಂಬ ಎರಡು ಕ್ಋತಿಗಳ ರಚನೆಕಾರ. ಕೆಳದಿ ಅರಸರಿಂದ ಸನದು ಪಡೆದವರು ಎಂದೂ ಹೇಳಲಾಗಿದೆ. ಪಾರಿಜಾತ ಕ್ಋತಿಯಲ್ಲಿ -

ಮಹಿಯಸುಮನಸ ಕುಲದೊಳುದಿಸಿದ |
ಮಹದಧಿಕಮತಿ ವೆಂಕನಾಯಱನ |
ಮಹಿಳೆ ದೇವಮ್ಮನ ತನೂದ್ಭವ | ಮಹಿತಸುಗುಣ ||
ನೀತಿಯುತ ಚನ್ನಯ್ಯ ವರ ಸಹ |
ಜಾತ ಸುಬ್ಬನು ಪೇಳಿದನು ಶ್ರೀ
ನಾಥನನುಪಮ ಕಥೆಯನಿದನೀ ಭೂತಳದಲಿ - ಎಂದು ಹೇಳಿಕೊಂಡಿರುವುದರಿಂದ ಚನ್ನಯ್ಯ ಈ ಕವಿಯ ಅಣ್ಣನೆಂದು ಸ್ಪಷ್ಟವಾಗುತ್ತದೆ. ಇವರಿಗೆ ವೆಂಕಭಟ್ಟ, ಲಿಂಗಾಭಟ್ಟ, ರಾಮಭಟ್ಟಮ ಸುಬ್ಬಾಭಟ್ಟ, ನಾರಣ ಭಟ್ಟ ಮತ್ತು ಕ್ಋಷ್ಣಭಟ್ಟ ಎಂಬ ಆರು ಜನ ಗಂಡುಮಕ್ಕಳೆಂದು ಕೆಳದಿ ಗುಂಡಾಜೊಯಿಸರ ಮನೆಯಲ್ಲಿ ದೊರೆತ ಬಹಳ ಹಳೆಯ ವಂಶವ್ಋಕ್ಷದಿಂದ ತಿಳಿದುಬರುತ್ತದೆ.

ಈ ಕವಿ ಬರೆದ "ಪಾರಿಜಾತ" ಎಂಬ ಯಕ್ಷಗಾನ ಕ್ಋತಿಯಿಂದ ಆಯ್ದ ಕ್ಋಷ್ಣ-ಭಾಮೆಯರ ಮನೋಜ್ಞವಾದಂತಹ ಸಂಭಾಷಣೆ ಆಸಕ್ತ ಸಂಪದ ಬಳಗಕ್ಕಾಗಿ:

ರಾಗ: ಸೌರಾಷ್ಟ್ರ ಏಕತಾಳ

ಕ್ಋಷ್ಣ: ವಾರಿಜಗಂಧಿನಿ ಕೀರಭಾಷಿಣಿ ಮುದ್ದು
ನೀರೆ ನೀ ಬಾಗಿಲ ತೆರೆಯೆ ||

ಭಾಮೆ : ದ್ವಾರದಿ ದನಿಯನ್ನು ತೋರುವಾತನು ನೀನು
ಯಾರು ಪೇಳ್ಐ ನಿನ್ನ ಹೆಸರು ||

ಕ್ಋಷ್ಣ: ಪ್ರಾಣನಾಯಕ ನಾಗವೇಣಿ ಕೇಳೆಲೆ ನಾನು
ವೇಣುಗೋಪಾಲನು ಕಾಣೆ ||

ಭಾಮೆ : ವೇಣುಗೋಪಾಲ ನೀನಾದರೊಳ್ಳಿತು ನಿನ್ನ
ಠಾಣದಿ ಪಶುವ ಕಾಯಯ್ಯ ||

ಕ್ಋಷ್ಣ: ಕ್ರೂರ ಕಾಳಿಂಗನ ಪಡೆಯ ತುಳಿದು ಬಂದ
ಧೀರ ಕಾಣೆಲೆ ಚಾರುಗಾತ್ರೆ ||

ಭಾಮೆ : ಧೀರ ನೀನಾದರೆ ಪಾವನಾಡಿಸಿಕೊಂಡು
ಗಾರುಡಿಗಾರ ಹೋಗಯ್ಯ ||

ಕ್ಋಷ್ಣ: ಬಲ್ಲಿದರೊಳು ಬಲವಂತರರೆನಿಸುವ
ಮಲ್ಲರ ಗೆಲಿದವ ಕಾಣೆ ||

ಭಾಮೆ: ಮಲ್ಲರ ಗೆಲಿದವನಾದರೆ ಗರುಡಿಗೆ
ನಿಲ್ಲದೆ ಪೋಗು ಪೋಗಯ್ಯ ||

ಕ್ಋಷ್ಣ : ಕಾದಿದ್ದ ಕರಡಿಯ ಗೆಲಿದು ಕಾಮಿನಿಯ ವಿ
ನೋದದಿ ತಂದವ ಕಾಣೆ ||

ಭಾಮೆ : ಆದರೊಳ್ಳಿತು ಘೋರಾರಣ್ಯದೊಳಿಪ್ಪಂತ
ವ್ಯಾಧರ ಕೂಡಿ ಬಾಳಯ್ಯ ||

ಕ್ಋಷ್ಣ : ಕಾಂತೆ ಕೇಳಾದರೇಳು ವ್ಋಷಭವ ಕಟ್ಟಿ ನೀಲ
ಕಾಂತೆಯ ತಂದವ ಕಾಣೆ ||

ಭಾಮೆ : ಅಂತಾದರಳ್ಳಿತು ಹೇರಾಟವನು ಮಾಡಿ
ಸಂತುಷ್ಟನಾಗು ಹೋಗಯ್ಯ ||

ಕ್ಋಷ್ಣ : ಕಮಲಕೋರಕ ಸನ್ನಭಕುಚಯುಗೆ ನಿನ್ನ
ರಮಣ ಕಾಣೆಲೆ ಮಂದಯಾನೆ ||

ಭಾಮೆ : ರಮಣನೆಂಬುದ ಕೇಳಿ ಕದವ ತೆಗೆದು ಮತ್ತೆ
ರಮಣಿಯು ಮಲಗಿದಳಾಗ ||

ವಿಶೇಷವಾಗಿ ನ್ಋತ್ಯ-ರೂಪಕಗಳಲ್ಲಿ ಇದನ್ನು ಬಳಸಿಕೊಳ್ಳಲು ಅತ್ಯಂತ ಸೂಕ್ತವಾಗಿದೆ. ಕ್ರಿಯಾಶೀಲ ನಿದೇಱಶಕರಲ್ಲಿ ಇಂತಹ ಒಂದು ಪ್ರಯತ್ನ ಖಂಡಿತಾ ಯಶಸ್ಸು ಮತ್ತು ಜನಪ್ರಿಯತೆ ಗಳಿಸೀತು.

Rating
No votes yet