'ಕ್ರಿಕೆಟ್ ಬೆಟ್ಟಿಂಗ್ ಪೆಡಂಭೂತ '

'ಕ್ರಿಕೆಟ್ ಬೆಟ್ಟಿಂಗ್ ಪೆಡಂಭೂತ '

                                    ಮತ್ತೆ ಹೆಡೆಯೆತ್ತಿದ ಕ್ರಿಕೆಟ್ ಬೆಟ್ಟಿಂಗ್ ಪೆಡಂಭೂತ


     ಪ್ರಸ್ತುತ ವರ್ಷದ ಆರನೆ ಐಪಿಎಲ್ ಕ್ರಿಕೆಟ್ ಪಂದ್ಯಗಳು ರೋಚಕ ಘಟ್ಟ ತಲುಪಿವೆ. ನಾಲ್ಕನೆ ಹಂತಕ್ಕೆ ಯಾವ ತಂಡಗಳು ತಲುಪ ಬಹುದು ಎನ್ನುವ ಕುತೂಹಲವಿದೆ. ಇಂತಹ ಕೌತುಕಮಯ ಸನ್ನಿವೇಶದಲ್ಲಿ ಸಮಸ್ತ ಭಾರತೀಯ ಕ್ರಿಕೆಟ್ ಪ್ರಿಯರಿಗೆ ಒಂದು ಆಘಾತಕರ ಸುದ್ದಿ ಎಲ್ಲರನ್ನು ತಲ್ಲಣಗೊಳಿಸಿದೆ. ಕಳೆದ ವರ್ಷದ ಅನೇಕ ಏಳು ಬೀಳುಗಳ ನಡುವೆಯೂ ' ರಾಜಸ್ತಾನ ರಾಯಲ್ಸ್'  ತಂಡ ತನ್ನ ಮಿತಿಗಳ ನಡುವೆಯೂ ಈ ವರ್ಷ ಚೆನ್ನಾಗಿ ಆಡುತ್ತ ಬಂದಿದೆ. ಇಂತಹ ಸಂಧರ್ಭದಲ್ಲಿ ಏನಿದು ಕ್ರಿಕೆಟ್ ಸ್ಪಾಟ್ ಫಿಕ್ಸಿಂಗ್ ಹಗರಣ ?
     
     ಇಂದು ಬೆಳಗಿನ ವೇಳೆ ನಿನ್ನೆಯ ಐಪಿಎಲ್ ಪಂದ್ಯಗಳ ಹೈಲೈಟ್ಸ್ ನೋಡುತ್ತಿರುವಾಗ ಕುತೂಹಲಕರ ಸುದ್ದಿಯ ತುಣುಕೊಂಡು ಮಾಧ್ಯಮದಲ್ಲಿ ಹರಿದು ಬರ ತೊಡಗಿತು. ಗಮನಿಸುತ್ತ ಹೋದಂತೆ 'ರಾಜಸ್ತಾನ ರಾಯಲ್ಸ್'  ತಂಡದ ಮೂವರು ಆಟಗಾರರನ್ನು ದೆಹಲಿ ಪೋಲೀಸರು ಬಂಧಿಸಿದ್ದು ಅವರ ಹೆಸರುಗಳು ಮಾಧ್ಯಮದಲ್ಲಿ ಕೇಳಿ ಬರತೊಡಗಿದವು. ಅವರಲ್ಲಿ ಒಬ್ಬ ಭಾರತೀಯ ತಂಡದ ಎಲ್ಲ ಪ್ರಾಕಾರದ ಕ್ರಿಕೆಟ್ಗಳಲ್ಲಿ ಆಡಿ ಹೆಸರು ಮಾಡಿದ ಸುಕುಮಾರನ್ ಶ್ರೀಶಾಂತನದಾದರೆ ಇನ್ನಿಬ್ಬರು ಅಂಕಿತ್ ಚೌಹಾಣ್ ಮತ್ತು ಅಶೋಕ ಚಾಂಡೀಲಾ ರವರು. ಕಳೆದ ವರ್ಷ ಸಹ ಡೆಕ್ಕನ್ ಚಾರ್ಜರ್ಸ ಆಟಗಾರರಿಬ್ಬರ ಮೇಲೆ ಸಹ ಇಂತಹ ಆರೋಪಗಳು ಕೇಳಿ ಬಂದಿದ್ದವು.


     ಈ ಕ್ರಿಕೆಟ್ ಆಟಗಾರರು ಏಕೆ ಹೀಗೆ ಮಾಡುತ್ತಾರೆ? ಪ್ರಮುಖ ಟೂರ್ನಿಗಳಲ್ಲಿ ಆಡಲು ಅವಕಾಶ ಸಿಕ್ಕರೆ ಸಾಕು ಎಂದು ಕಾಯುವವರು ಅನೇಕ ಸಂಖ್ಯೆಯಲಿರುವಾಗ ಅವಕಾಶ ದೊರಕಿಸಿಕೊಂಡ ಈ ಆಟಗಾರರು ಏಕೆ ಹೀಗೆ ಆಡುತ್ತಾರೆ ? ತಂಡದಲ್ಲಿ ಆಡದೆ ಬರಿ ಬೆಂಚು ಕಾಯ್ದು ಲಕ್ಷಾಂತರ ಹಣ ಮಾಡಿಕೊಂಡು ಹೋಗುವ ಪ್ರಸ್ತುತ ದಿನಮಾನಗಳಲ್ಲಿ ಈ ಆಟಗಾರರು ಏಕೆ ಹೀಗೆ ವರ್ತಿಸುತ್ತಾರೆ ?


     ಈ ಆಟಗಾರರು ಇತಿಹಾಸದಿಂದ ಪಾಠ ಕಲಿಯುವುದಿಲ್ಲವೆ ? ದಕ್ಷಿಣ ಆಫ್ರಿಕಾದ ಹ್ಯಾನ್ಸಿ ಕ್ರೊನಿಯೆ, ಭಾರತದ ಮೊಹಮ್ಮದ್ ಅಜರುದ್ದೀನ್, ಅಜಯ್ ಜಡೆಜಾ, ಪಾಕಿಸ್ತಾನದ ಸಲ್ಮಾನ್ ಬಟ್ ಮತ್ತು ಮಹಮ್ಮದ್ ಆಸೀಫ್ ಮುಂತಾದ ಆಟಗಾರರ ಕ್ರಿಕೆಟ್ ಬದುಕು ಕುಂಠಿತಗೊಂಡದ್ದು ಇವರ ಅರಿವಿಗೆ ಬಂದಿಲ್ಲವೆ? ಸಭ್ಯರ ಕ್ರೀಡೆ ಎನ್ನಿಸಿ ಕೊಂಡ ಕ್ರಿಕೆಟ್ಗೆ ಆ ಹೆಸರು ಉಳಿಯ ಬೇಕಾದಲ್ಲಿ ಇಂತಹ ಪ್ರಕರಣಗಲನ್ನು ಗಂಭೀರವಾಗಿ ಪರಿಗಣಿಸಿ ಆರೋಪ ಸಾಬಿತಾದಲ್ಲಿ ಅಂತಹವರಿ ಆಜನ್ಮ ನಿಷೇಧ ಹೇರಬೇಕು. ಈ ನಿಟ್ಟಿನಲ್ಲಿ ಕ್ರಿಕೆಟ್ ಆಡುವ ದೇಶಗಳ ಕ್ರಿಕೆಟ್ ಕಂಟ್ರೋಲ್ ಬೋರ್ಡಗಳು ಮತ್ತು ಅಂತರ್ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಕಠಿಣ ಕ್ರಮಕ್ಕೆ ಮುಂದಾಗಬೇಕು ಅಂದಾಗ ಮಾತ್ರ ಬೆಟ್ಟಿಂಗ್ ನಿಯಂತ್ರಣ ಸಾಧ್ಯವಾದೀತು.
   


                                             *****
 

Rating
No votes yet

Comments

Submitted by H A Patil Fri, 05/17/2013 - 18:23

ಮಾನ್ಯ ಸಂಪದಿಗರಲ್ಲಿ ವಿನಂತಿ
ಈ ಲೇಖನದಲ್ಲಿ ಅಜಿತ ಚಾಂಡಿಲಾ ಹೆಸರು ಅಶೋಕ ಚಾಂಡಿಲಾ ಎಂದು ನಮೂದಿಸಿದೆ, ದಯವಿಟ್ಟು ಇದನ್ನು ಗಮನಿಸಲು ಕೋರಿಕೆ,

Submitted by makara Fri, 05/17/2013 - 19:49

ಹನುಮಂತ ಪಾಟೀಲರಿಗೆ ವಂದನೆಗಳು,
ಶ್ರೀ ಶಾಂತ್ ಹರಾಜಾದದ್ದು ಬರೋಬ್ಬರಿ ೭.೨೦ಕೋಟಿಗಳಿಗೆ ಮತ್ತು ಇತರಿಬ್ಬರು ಸ್ಥಳೀಯ ಕೋಟಾದಲ್ಲಿ ಹರಜಾದದ್ದು ತಲಾ ೨೦ ಲಕ್ಷಗಳಿಗೆ. ಹೀಗಿದ್ದೂ ಹೊತ್ತಿನ ಕೂಳಿಗಾಗಿ ತುತ್ತಿನ ಕೂಳನ್ನು ಕಳೆದುಕೊಂಡಂತಾಗಿದೆ ಈ ಕ್ರಿಕೆಟಿಗರ ಪರಿಸ್ಥಿತಿ. ತಮ್ಮ ಮಾನದೊಂದಿಗೆ ಈ ಆಟದ ಹಿರಿಮೆಯನ್ನೂ ಕೆಳ ಮಟ್ಟಿಗೆ ತಂದಿದ್ದಾರೆ ಈ ಮಹಾಶಯರುಗಳು, ಇಂಥಹವರಿಗೆ ಛೀಮಾರಿ ಹಾಕಬೇಕಾದದ್ದು ಎಲ್ಲಾ ನಾಗರೀಕರ ಕರ್ತವ್ಯ.

Submitted by ಗಣೇಶ Fri, 05/17/2013 - 23:43

In reply to by makara

ಛೀಮಾರಿ ಹಾಕಿ, ಆಜೀವ ಬಹಿಷ್ಕಾರ ಹಾಕಿ, ಜೈಲಿಗೇ ಹಾಕಿ.. ಎಲ್ಲರೂ ಆತನ ಪ್ರತಿಕೃತಿಯನ್ನು ದಹಿಸಿ..ಏನು ಬೇಕಾದರೂ ಮಾಡಿ. ಈ ಏಳು+ ಕೋಟಿ ಆತನ ಚಟಗಳಿಗೆ ಎಲ್ಲಿ ಸಾಲುತ್ತೆ? ಮುಂದಿನ ಜೀವನದ ಬಗ್ಗೆ ಯೋಚಿಸಬೇಡವೇ? ಶ್ರೀಶಾಂತ್ ಶಾಂತರೀತಿಯಲ್ಲಿ ಎಮ್ ಪಿ ಆಗುವ ಹಾದಿಯಲ್ಲಿದ್ದಾನೆ.:)

Submitted by H A Patil Sun, 05/19/2013 - 19:49

In reply to by ಗಣೇಶ

ಗಣೇಶ ರವರಿಗೆ ವಂದನೆಗಳು
ಈ ಲೇಖನ ಕುರಿತು ತಾವು ಬರೆದ ಪ್ರತಿಕ್ರಿಯೆ ಓದಿದೆ,ತಮ್ಮ ಅನಿಸಿಕೆ ಸರಿ ಆತನಿಗೆ ಏಳು ಕೋಟಯಲ್ಲ ಎಪ್ಪತ್ತು ಕೋಟಿ ಕೊಟ್ಟರೂ ಆತನ ಧನದ ದಾಹ ಹಿಂಗುವಂತಹದಲ್ಲ. ತಮ್ಮ ಅನಿಸಿಕೆ ಸರಿ ಆತನಿಗೆ ವೃತ್ತಿ ರಾಜಕಾರಣಿಯಾಗುವ ಎಲ್ಲ ಅರ್ಹತೆಗಳಿವೆ, ,ಪ್ರತಿಕ್ರಿಯೆಗೆ ಧನ್ಯವಾದಗಳು.

Submitted by H A Patil Sun, 05/19/2013 - 19:45

In reply to by makara

ಶ್ರೀಧರ ಬಡ್ರಿಯವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ ಶ್ರೀಶಾಂತ ಒಬ್ಚ ಮುಂಗೋಪಿ ಜೊತಗೆ ಹೆಣ್ಣುಬಾಕ ಎನ್ನುವುದು ಆತನ ವರ್ತನೆಯಿಂದ ಅರ್ಥವಾಗುತ್ತಿತ್ತುಮ ಆದರೆ ಅಷ್ಟು ದಂಡಿಯಾಗಿ ಹಣ ಪಡೆದರೂ ಇನ್ನೂ ಬೇಕೆಂಬ ಹಣದ ದಾಹ ಹೇಸಿಗೆ ಹುಟ್ಟಿಸುತ್ತದೆ, ಆರೋಪ ಸಾಬೀತಾದರೆ ಆತನನ್ನು ಮತ್ತು ಆತನ ಸಹಚರರನ್ನು ದಂಡಿಸಬೇಕು ಜೊತೆಗೆ ಅವರನ್ನು ಆಜನ್ಮವಾಗಿ ಕ್ರಿಕೆಟ್ ನಿಂದ ದೂರವಿಡಬೇಕು ಅಂದರೆ ಮುಂದೆ ಬರುವ ಕ್ರಿಕೆಟ್ ಆಟಗಾರರು ವಾಮ ಮಾರ್ಗದ ಮೂಲಕ ಹಣ ಪಡೆಯಲು ಅಂಜುತ್ತಾರೆ, ಪ್ರತಿಕ್ರಿಯೆಗೆ ಧನ್ಯವಾದಗಳು.

Submitted by nageshamysore Sat, 05/18/2013 - 08:57

ನಮಸ್ಕಾರ ಹನುಮಂತ ಪಾಟೀಲರೆ,
ಓವರೊಂದಕ್ಕೆ ಐವತ್ತರವತ್ತು ಲಕ್ಷಗಳ ಬೆಲೆ ಎಂತಹ ಮುನಿಯನ್ನು ಚಂಚಲಗೊಳಿಸುವಂತಹ ಆಮಿಷ. ವಿಷಾದವೆಂದರೆ ಯಾರಲ್ಲಿ ತತ್ವ, ನೀತಿ, ನಿಜಾಯತಿ, ನೈತಿಕತೆಯ ಭದ್ರ ಬುನಾದಿಯಿರುತ್ತದೊ, ಅವರಲ್ಲಿ ಇಂತಹ ಪ್ರಲೋಭನೆಗೆ ಪ್ರತಿರೋಧಿಸಿ ಸೆಟೆದು ನಿಂತು ಗೆಲ್ಲುವ ತಾಕತ್ತು ತಾನಾಗೆ ಬರುತ್ತದೆ. ಆದರೀಗೆಲ್ಲ ಯಶಸ್ಸಿನ ಮಾನದಂಡ ನ್ಯಾಯ ನೀತಿಯಲ್ಲ, ಗಳಿಸಿದ ಹಣದ ಮೊತ್ತ. ಇದನ್ನು ಪ್ರತಿಭಟಿಸುವ ಸಮೂಹ ಇನ್ನು ಜೀವಂತವಿರುವುದು ಸದ್ಯಕ್ಕೆ ನಮ್ಮ ಭಾಗ್ಯವೆಂದು ಹೇಳಬೇಕು.
-ನಾಗೇಶ ಮೈಸೂರು, ಸಿಂಗಾಪುರದಿಂದ

Submitted by H A Patil Sun, 05/19/2013 - 20:05

In reply to by nageshamysore

ನಾಗೇಶ ಮೈಸೂರು ರವರಿಗೆ ವಂದನೆಗಳು
ಈ ಬರಹ ಕುರಿತಂತೆ ತಮ್ಮ ಪ್ರತಿಕ್ರಿಯೆ ಓದಿದೆ, ತಮ್ಮ ಅನಿಸಿಕೆ ಸರಿ ಆದರೆ ಈತ ಪ್ರತಿಷ್ಟಿತ ಕುಟುಂಬದಿಂದ ಬಂದವ ಜೊತೆಗೆ ಬೆಂಗಳೂರಿನ ಪ್ರತಿಷ್ಟಿತ ವಿದ್ಯಾ ಸಂಸ್ಥೆಯಲ್ಲಿ ಓದಿದವ ಎಂದು ಈ ಕುರಿತು ಓದಿದಂತಗೆ ನೆನಪು ಹೀಗಾಗಿ ಈತನ ಬಗೆಗೆ ಒಂದು ಬಗೆಯ ಅಭಿಮಾನವಿತ್ತು, ಆತನ ಹುಚ್ಚಾಟಗಳು ಕ್ರಮೇಣ ಕಡಿಮೆಯಾಗ ಬಹುದು, ಆತ ಕ್ರೀಡಾಳುವಾಗಿ ಪರಿಪಕ್ವಗೊಳ್ಳಬಹುದು ಎನ್ನುವ ದೂರದ ಆಶೆಯಿತ್ತು, ಹರಭಜನ್ ಆತನಿಗೆ ಕಪಾಳ ಮೋಕ್ಷ ಮಾಡಿದಾಗ ವ್ಯಥೆಯಾಗಿತ್ತು, ಈಗ ನೋಡಿದರೆ ಈ ವ್ಯಕ್ತಿ ಒಬ್ಬ ಅಯೋಗ್ಯ, ತಮ್ಮ ಅನಿಸಕೆ ಸರಿ ಇನ್ನೂ ನಮ್ಮ ಮಧ್ಯೆ ಇಂತಹವನ್ನು ಪ್ರತಿಭಟಿಸುವ ಜನ ಸಮೂಹವಿದೆ ಅದು ನಮ್ಮ ಸಮಾಜದ ಜೀವಂತಿಕೆಯ ಲಕ್ಷಣ, ಪ್ರತಿಕ್ರಿಯೆಗೆ ಧನ್ಯವಾದಗಳು.

Submitted by partha1059 Sat, 05/18/2013 - 14:23

ಸಿಕ್ಸ್ ! ಸಿಕ್ಸ್ !
ಅನ್ನುತ್ತಿದ್ದವರೆಲ್ಲ
ಈಗ
ಫಿಕ್ಸ್ ! ಫಿಕ್ಸ್ !
ಅನ್ನುತ್ತಿರುವುದು ಮಾತ್ರ ತಮಾಷಿಯಾಗಿದೆ !
(ಪ್ರಜಾವಾಣಿಯ ಇಂದಿನ ಮುಖಪುಟದ ಕಾರ್ಟೂನ್)

Submitted by H A Patil Sun, 05/19/2013 - 20:10

In reply to by partha1059

ಪಾರ್ಥ ಸಾರಥಿ ಯವರಿಗೆ ವಂದನೆಗಳು,
ತಮ್ಮ ಪ್ರತಿಕ್ರಿಯೆ ಓದಿದೆ, ಸಿಕ್ಸ್ ಸಿಕ್ಸ್ ಮತ್ತು ಫಿಕ್ಸ್ ಫಿಕ್ಸ್ ಎನ್ನುವ ಪದಗಳ ಬಳಸಿ ಬರೆದ ಪ್ರತಿಕ್ರಿಯೆ ಇಲ್ಲಿನ ವರೆಗೂ ನೆಡದು ಬಂದ ಫಿಕ್ಸಿಂಗ್ ಹಗರಣಗಳ ಸಂಪೂರ್ಣ ಚಿತ್ರ ಕಣ್ಮುಂ ದೆ ಬಂದಿತು, ಸತ್ವಪೂರ್ಣ ಪ್ರತಿಕ್ರಿಯೆಗೆ ಧನ್ಯವಾದಗಳು.