ಕ್ರಿಕೇಟ್ , ಫುಟ್ಬಾಲ್ ಎಂಬ ಮಾಯಕ

ಕ್ರಿಕೇಟ್ , ಫುಟ್ಬಾಲ್ ಎಂಬ ಮಾಯಕ

ಚಿತ್ರ

 

 
ತೀರ ಈಚೆಗೆ ಅಂದರೆ 15 ನೇ ಮಾರ್ಚ್ ೨೦೧೨ ರಂದು ಬೆಂಗಳೂರಿನಲ್ಲಿ ನಡೆಯುತ್ತಿದ್ದ ಪುಟ್ ಬಾಲ್ ಮ್ಯಾಚಿನಲ್ಲಿ ವೆಂಕಟೇಶ್ ಎಂಬ ಯುವಕನೊಬ್ಬ ಆಟದ ನಡುವೆ ಕುಸಿದು , ಕೊನೆಗೆ ಮರಣ ಹೊಂದಿದ. ಆಟವನ್ನು ನೋಡುತ್ತ ಕಣ್ಣು ಬಿಟ್ಟು ಕುಳಿತವರಲ್ಲಿ ಅವರ ಅಪ್ಪನು ಒಬ್ಬ ಪಾಪ!.  ನಂತರ ಹಲವು ಹೇಳಿಕೆಗಳು ಬಂದವು ಅಲ್ಲಿ ವೈದ್ಯಕೀಯ ಸೌಲಭ್ಯಗಳಿರಲಿಲ್ಲ, ಅನುಕೂಲಗಳಿರಲಿಲ್ಲ ಈ ರೀತಿ ನಂತರ ಯಾರಿಗು ಬೇಡದ ಅ ಯುವಕನ ಸಾವು ಮಾಧ್ಯಮಗಳ ದೃಷ್ಟಿಯಿಂದ ದೂರವಾಯಿತು. ಪದೆ ಪದೆ ಅದನ್ನು ಟೀ.ವಿ ಯಲ್ಲಿ ತೋರಿಸಲು ಅದೇನು ಸದನದಲ್ಲಿ ಸಂಸದರು ಬ್ಲೂಫಿಲಂ ನೋಡುವ ದೃಶ್ಯವೆ!. ಹೋಗಲಿ ಬಿಡಿ.
 
  ಈ ರೀತಿ ಆಟದ ಮೈದಾನದಲ್ಲಿ ಆಟಗಾರ ಸಾಯುವುದು ಇದೇನು ಮೊದಲು ಅಲ್ಲ ಬಿಡಿ ಈ ರೀತಿ ನೂರಾರು ಜನ ತಮ್ಮ ಜೀವ ತೊರೆದಿದ್ದಾರೆ ಅದಕ್ಕೆ ಬೇರೆಯದೆ ನೆಪಗಳೆಲ್ಲ ಕೊಡಲಾಗುತ್ತೆ. ಅ ರೀತಿ ಸತ್ತವರಲ್ಲಿ ಪಾಪ ವೆಂಕಟೇಶನು ಒಬ್ಬ.
 ಆಡುವಾಗ ಜೀವ ಬಿಟ್ಟವರ ವಿವರ ಇಲ್ಲಿದೆ ನೋಡಿ
 ಸತ್ತವರ ವಿವರ :  ಸತ್ತವರ ಪಟ್ಟಿ 
 
    ಮೇಲಿನ ವಿವರ ಗಮನಿಸಿದರೆ ಒಂದು ವಿಚಿತ್ರವಿದೆ ಸತ್ತವರೆಲ್ಲ ವಯಸ್ಸಾದವರಲ್ಲ, ಕೇವಲ ೨೦-೨೨ ವರ್ಷದ ಆಸುಪಾಸಿನವರು, ಅಂದರೆ ಅವರ ಹೃದಯ ಗಟ್ಟಿಯಾಗಿಯೆ ಇರುತ್ತದೆ. ಆದರೆ ಅವರ ಹೃದಯದ ಮೇಲೆ ಅವರು ತಡೆಯುವದಕ್ಕಿಂತ ಹೆಚ್ಚಿನ ಒತ್ತಡ ಹಾಕಲಾಗುತ್ತಿದ್ದೆ. ಆದರೆ ಅದಕ್ಕೆ ಕಾರಣವೇನು? ಎಂದು ಯೋಚಿಸುವಾಗ ಆನಿಸುವುದು ಈಗ ಆಟಗಳೆಲ್ಲ ಕೇವಲ ಆಟಗಳಾಗಿ ಉಳಿದಿಲ್ಲ. ಅದು ಈಗ ವ್ಯಾಪಾರಿಕರಣವಾಗಿಬಿಟ್ಟಿದೆ. 
 
  ಈಗ ಪ್ರತಿಯೊಬ್ಬ  ಯುವ ಪ್ರತಿಬಾನ್ವಿತ (?) ಆಟಗಾರರನ್ನು ಗಮನಿಸಿ ಅವರ ಕಣ್ಣುಗಳಲ್ಲಿ ತಾನು ಅಪ್ರತಿಮ ಆಟಗಾರನಾಗಿ ಮೆರೆಯಬೇಕೆಂಬ ಕನಸಿರುವದಿಲ್ಲ ಬದಲಾಗಿ ತಾನು ಆದಷ್ಟು ಬೇಗ ಸ್ಟಾರ್ ಆಟಗಾರನಾಗಿ ಖ್ಯಾತಿ ಪಡೆದು, ಅಂತರಾಷ್ಟ್ರೀಯ ಮಟ್ಟಕ್ಕೇರಿ ಸಾಕಷ್ಟು ಹಣ ಗಳಿಸಬೇಕು ಎಂಬ ಹಪಾಹಪಿಯೆ ತುಂಬಿರುತ್ತದೆ. ಇಂತ ಆಟಗಾರರನ್ನು ಪ್ರೋತ್ಸಾಹಿಸಲು ಅದೇ ರೀತಿಯ ಕಂಪನಿಗಳು ಸಾಲು ಸಾಲಾಗಿ ಕಾದಿವೆ, ಆಟಗಾರನಿಗೆ ತಾನು ಹೇಗಾದರು ಇಂತಹ ಕಂಪನಿಳಿಗೆ 'ಹರಾಜು' ಆಗಬೇಕೆಂದು ಕಾಯುತ್ತಾನೆ.
 
 "ಹರಾಜು?" , ಹೌದು ಇದು ವಿಚಿತ್ರ ಪದ. ಹಿಂದೊಮ್ಮೆ ಹರಿಶ್ಚಂದ್ರ ಹೆಂಡತಿಯನ್ನು ಹರಾಜು ಹಾಕಿದ ಅಂದರೆ ಅದು ಜನರಲ್ಲಿ ದು:ಖಾಶ್ರುಗಳನ್ನು ತರುತ್ತಿತ್ತು. ಯುರೋಪಿಯನ್ನರಲ್ಲಿ ಕಪ್ಪು ಜನರನ್ನು ಹರಾಜು ಹಾಕಿ ಕೊಂಡುಕೊಳ್ಳುವ ಪದ್ದತಿಯಿತ್ತು ಅದೆಲ್ಲ ಈಗ ಮರೆಯಾಯಿತು, ಆದರೆ ದೊಡ್ಡ ಕಂಪನಿಗಳ ಮಾಲಿಕರು, ಸಿನಿಮಾದ ದಣಿಗಳು ಕುಳಿತು ಕ್ರಿಕೇಟ್ ಆಟಗಾರರನ್ನು ಹರಾಜು ಕೂಗಿ ಕೊಳ್ಳೂವಾಗ, ಪಾಪ 'ಅಯ್ಯೊ ನಾನು ಹರಾಜು ಆಗಲಿಲ್ಲ" ಎಂದು ಕೆಲವರು ಕೊರಗಿದರೆ ಮಾಧ್ಯಮಗಳು ಅದನ್ನು ಬರೆಯುತ್ತವೆ. ಎಂತ ವಿಚಿತ್ರ. ಒಮ್ಮೆ ಹರಾಜಾಗುವ ಬಾಗ್ಯ ಅವನಿಗೆ ಸಿಕ್ಕರೆ ಸಾಕು ಹಣದ ಹೊಳೆ ಅವನ ಜೇಬಿಗೆ ಹರಿಯುತ್ತದೆ. ನಂತರ ಅವನು ಸ್ಟಾರ್ ಕ್ರಿಕೇಟ್ ಪ್ಲೇಯರ್. 
  ಸರಿ ಈ ಸಂದರ್ಭವನ್ನು ಉಪಯೋಗಿಸಲು ಯಾರಾದರು ಮುಂದಾಗುವುದು ಸಹಜ, ಅವರೆ ಟ್ರೈನರ್ ಗಳು ಎಂದರೆ ಕೋಚ್ ಎಂಬ ವಿಚಿತ್ರದವರು. ಅವರು ತಮ್ಮದೆ ಆದ ವಿಚಿತ್ರ ಪದ್ದತಿಗಳನ್ನು ಅನುಸರಿಸುತ್ತಾರೆ. ಕ್ರಿಕೇಟ್ ಆಟಗಾರರ ಕೈಲಿ ಎಂತತದೊ ಆಟ ಆಡಿಸುತ್ತಾರೆ ಅದನ್ನು ಮಾದ್ಯಮಗಳ ಮುಂದು ಹೇಳಿ ತಮ್ಮ ಖ್ಯಾತಿ ಹೆಚ್ಚಿಸಿಕೊಳ್ಳುತ್ತಾರೆ. 
  
  ಈ ಕೋಚ್ ಗಳನ್ನೆಲ್ಲ ನೋಡುವಾಗ ಅವರ ಮೇಲೆ ಕೆಲವೊಮ್ಮೆ ಹಿಂದಿ ಅಥವ ಚೀನಿ ಸಿನಿಮಾ ಪ್ರಭಾವ ಬೀರಿದೆಯೇನೊ ಅನ್ನಿಸುತ್ತೆ. ಅದರಲ್ಲಿ ಗಮನಿಸಿ ಆಕ್ಷನ್ ಸಿನಿಮಾಗಳಲ್ಲಿ ನಾಯಕ ವಿರೋದಿಗಳನ್ನು ಮಟ್ಟಹಾಕಲು ಕಲಿಯುವ ಹೋರಾಟದ ಕಲೆಗಳನ್ನು ಕಲಿಯಲು ವಿಚಿತ್ರ ಪದ್ದತಿಗಳನ್ನೆಲ್ಲ ಬಳಸುತ್ತಾನೆ. ಬೆಂಕಿಯಲ್ಲಿ ಮರಳಿನಲ್ಲಿ ಕೈಯನ್ನು ಅದ್ದುವುದು, ಇಟ್ಟೆಗೆ ಕೈಯಿಂದೆ ಮುರಿಯುವುದು ಇವೆಲ್ಲ ಸರಳವಾಯಿತು ನೀವು ಬೆಚ್ಚಿಬೀಳುವ ಹಲವು ರೀತಿಗಳು ಇದರಿಂದ ಅವನು ಅಸಾದ್ಯವಾದುದ್ದನು ಏನೊ ಸಾದಿಸಿದ ಎಂಬಂತೆ ಬಿಂಬಿಸಲಾಗುತ್ತೆ, ಪಾಪ ನಮ್ಮ ಅಂತರಾಷ್ಟ್ರೀಯ ಕ್ರಿಕೇಟ್ ಕೋಚ್ ಗಳು ಪುಟ್ಬಾಲ್ ಕೋಚ್ ಗಳು ಅದನ್ನೆಲ್ಲ ನಿಜ ಅಂತ ನಂಬಿಕೊಂಡು ಆಟಗಾರರ ಮೇಲೆ ಎನೇನೊ ಪ್ರಯೋಗ ನಡೆಸುತ್ತಾರೆ. ಮತ್ತೊಂದು ತಮಾಷಿ ಎಂದರೆ ಆ ಕೋಚ್ ತಾನು ಆಟಗಾರನಾಗಿರುವಾಗ ಅದನ್ನೆಲ್ಲ ಮಾಡಿದ್ದರೆ ಅವನು ಸಹ 'ಮ್ಯಾಜಿಕ್ ಆಟಗಾರನಾಗಬಹುದಿತ್ತಲ್ಲ'  ಆದರೆ ಅದೇಕೊ ಬಹಳ ಸಂದರ್ಭದಲ್ಲಿ ಕೋಚ್ ಗಳು ಅಂತ ಅಪ್ರತಿಮ ಆಟಗಾರರೇನು ಆಗಿರುವದಿಲ್ಲ. ಹಾಗೆ ನೋಡುವಾಗ ನಾನು ನೀವು ಸಹ ಕೋಚ್ ಆಗಬಹುದು ಆದರೆ ನಮಗೆಲ್ಲ 'ಹೆಸರಿಲ್ಲ' ಅಷ್ಟೆ. 
 
  ಈ ರೀತಿ ಆಟಗಾರರ ಆಟದ ಮೇಲಾಗಲಿ ಅಥವ ಕೋಚ್ ಗಳ ವಿದಿಗಳಲ್ಲಾಗಲಿ ವೈಜ್ಞಾನಿಕವಾದ ಸಂಶೋದನೆಗಳು ಏನಾಗಿಲ್ಲ ಅಲ್ಲಿ ನಡೆಯುತ್ತಿರುವದೆಲ್ಲ ಬರಿ ಹಣದ ಆಟವಷ್ಟೆ. ಇಲ್ಲದಿದ್ದರೆ  ಉರಿಯುವ ಈ ಬಿಸಿಲಿನಲ್ಲಿ ೪೫ ಡಿಗ್ರಿಯಷ್ಟಿರುವ ಉಷ್ಣಾಂಶದಲ್ಲಿ ಪುಟ್ಬಾಲ್ ಆಡಿದರೆ , ಯಾವುದೆ ಆಟಗಾರ ನೀರಿನ ಅಂಶ ಕಡಿಮೆಯಾಗಿ ಕುಸಿದುಬೀಳುವನೆಂದು, ಇಲ್ಲ ಹೃದಯದ ಮೇಲೆ ಪರಿಣಾಮ ಬೀರುವದೆಂದು ಸಾಮಾನ್ಯ ಮನುಷ್ಯನಿಗು ಅರ್ಥವಾಗುವ ಸತ್ಯ  ಆಟಗಳ ಪ್ರಭುಗಳಿಗೆ ಏಕೆ ಆರ್ಥವಾಗುವದಿಲ್ಲ. 
 
  ಒಲಪಿಂಕ್ಸ್ ಹೆಸರಿನಲ್ಲಿ ಚೀನದಲ್ಲಿ ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳನ್ನು ಓದಿನೋಡಿ ಎಂತವರಿಗು ಕಣ್ಣಲ್ಲಿ ನೀರು ಬರುವುದು ನಿಜ. ಹೆತ್ತವರಿಂದ ದೂರವಾಗಿ, ಯಾವುದೋ ಕ್ಯಾಂಪ್ ಗಳಲ್ಲಿ , ಕೋಚ್ ಎಂಬ ರಾಕ್ಷಸರ ಮದ್ಯೆ ಆ ಮಕ್ಕಳು ಕಾಣುವ ನರಕ , ಕಣ್ಣು  ಅಗಲಿಸಿ ಟೀವಿಗಳ ಮುಂದು ಕೂಡುವ ನಮಗೆ ಅರಿವಾಗುವದಿಲ್ಲ. ಮೇಲಿನ    ಚಿತ್ರಗಳನ್ನು ಗಮನಿಸಿ. 
 
 
 
  ಕ್ರಿಕೆಟ್ ಎನ್ನುವ ಆಟದ ಇತಿಹಾಸವನ್ನು ಗಮನಿಸಿ 
ಹಿಂದೊಮ್ಮೆ  ಯುರೋಪ್   ದೇಶಗಳನ್ನು ಶಿಶಿರಮಾಸ ಆಕ್ರಮಿಸಿದಾಗ ಎಲ್ಲೆಲ್ಲಿಯು ತುಂಬಿ ಜನಜೀವನವನ್ನು ತನ್ನ ಹಿಡಿತದಲ್ಲಿ ಹಿಮ ಹಿಡಿದಾಗ, ಚಳಿ ಎಂಬುದು ಮನುಷ್ಯನ ಚರ್ಮ ಮೂಳೆಗಳಿಗೆ ಇಳಿದು ಕೊರೆಯುತ್ತಿರುವಾಗ,
 ಬೆಳಗಿನ ಬಾನಿನಲ್ಲಿ ಕಾಣಿಸಿಕೊಂಡ ಎಳೆ ಸೂರ್ಯನ ಕಿರಣಗಳು ನೆಲದಮೇಲೆಲ್ಲ ಹರಡಿ, ಗಿಡಮರಗಳೆಲ್ಲ ಕೊಡವಿ ನಗುವಾಗ, ತಮ್ಮ ಮೈಯನ್ನು ಬೆಚ್ಚಗೆ ಮಾಡಲು ಮನೆಯಿಂದ ಹೊರಬಂದು ಆಡಲು ಪ್ರಾರಂಬಿಸಿದ ಕ್ರಿಕೇಟ್ ಎಂಬ ಈ ಆಟವನ್ನು  ಯಾವುದಕ್ಕೆ ಹೋಲಿಸಲಿ.
 ಪ್ರತಿ ಯುನಿಟ್ ವಿಧ್ಯುತ್ ಸಹ ಅಮೂಲ್ಯ ಅದನ್ನು ಉಳಿಸಿ ಎಂದು ಬಿಟ್ಟಿ ಉಪದೇಶ ಕೊಡುವ ಈ ನಾಡಿನಲ್ಲಿ, ಅರ್ದರಾತ್ರಿಯಲ್ಲಿ ಸೂರ್ಯನು ನಾಚುವಂತೆ  ದೀಪಗಳನ್ನು ಬೆಳಗಿಸಿ ಅದರ ಅಡಿಯಲ್ಲಿ ಲಕ್ಷ ಲಕ್ಷ ಜನರು ಸೇರಿ ಆಡುವ ಏಕದಿನ , ಅರ್ದ ದಿನದ ಕ್ರಿಕೇಟಿಗೊ
 
 ಇಲ್ಲ ಸೂರ್ಯನು ಉಗ್ರ ಕೋಪದಿಂದ ಸುಡುತ್ತಿರುವಾಗ ಮದ್ರಾಸ್  ಅಥವ ದಿಲ್ಲಿ ನಗರಗಳು ಬೇಸಿಗೆಯ ಉತ್ತುಂಗದಲ್ಲಿ ಸುಡುತ್ತಿರುವಾಗ, ಉಷ್ಣಾಂಶ ಅದಿಕತಮವನ್ನು ತಲುಪಿ ಜನರೆಲ್ಲ ಉಸ್ ಉಸ್ ಅನ್ನುತ್ತಿರುವಾಗ, ಚಂದ್ರಲೋಕಕ್ಕೆ ಹೋಗುವರಂತೆ ಬಟ್ಟೆಗಳನ್ನು ಧರಿಸಿ, ತಲೆಯಿಂದ ಬೆವರನ್ನು ಸುರಿಸುತ್ತ ಟೋಪಿಗಳನ್ನು ಧರಿಸಿ. ಯಾವುದೋ ದೈವವನ್ನು ಮೆಚ್ಚಿಸುವರಂತೆ ಆಡುವ ಈ ಕ್ರಿಕೇಟಿಗೊ ಯಾವುದನ್ನು ನನಗೆ ಅ 'ಕ್ರಿಕೇಟ್ ಎಂಬ ದೈವವೆ" ಹೇಳಬೇಕು.
 
----------------------------------------------------------------------------------------------
ಚಿತ್ರಗಳನ್ನೆಲ್ಲ ಇಂಟರ್ನೆಟ್  ಜಾಲದಿಂದ ಪಡೆದುದ್ದು. 
  
    
Rating
No votes yet

Comments