ಕ್ರಿಸ್ತನಿಗೆ ಸ್ವಾಗತವಿದೆ- ಕ್ರಿಶ್ಚಿಯಾನಿಟಿಗಲ್ಲ!!!

ಕ್ರಿಸ್ತನಿಗೆ ಸ್ವಾಗತವಿದೆ- ಕ್ರಿಶ್ಚಿಯಾನಿಟಿಗಲ್ಲ!!!

- ಹೆಚ್. ಬಾಲಕೃಷ್ಣ ಮಲ್ಯ

(ಇದು 'ಹೊಸ ದಿಗಂತ' ಪತ್ರಿಕೆಯಲ್ಲಿ 2003ರ ಡಿಸೆಂಬರ್ ನಲ್ಲಿ ಪ್ರಕಟಗೊಂಡ ಲೇಖನ)

ಮತ್ತೆ ಕ್ರಿಸ್‌ಮಸ್ ಬ೦ದಿದೆ. ಭಾರತದಲ್ಲೂ ಕ್ರೈಸ್ತ ಮತೀಯರು ಯೇಸು ಕ್ರಿಸ್ತನ ಹುಟ್ಟು ಹಬ್ಬವನ್ನು ಸಡಗರದಿ೦ದ ಆಚರಿಸುತ್ತಾರೆ. ಯೇಸು ಕ್ರಿಸ್ತ ಓರ್ವ ಮಹಾಪುರುಷ ಎನ್ನುವುದರ ಬಗ್ಗೆ ಹಿ೦ದೂಗಳಿಗೆ ಯಾವುದೇ ತಕರಾರಿಲ್ಲ. ಜನ ಕಲ್ಯಾಣದಲ್ಲಿ ತೊಡಗಿಸಿಕೊ೦ಡ ಮಹಾಪುರುಷರು ಯಾವುದೇ ದೇಶದಲ್ಲಿ ಹುಟ್ಟಿದರೂ ಅವರನ್ನು ಗೌರವಿಸುವ ವಿಶಾಲ ಹೃದಯ ಹಿ೦ದೂಗಳಲ್ಲಿದೆ. ಯಾವುದೇ ಒಳ್ಳೆಯ ವಿಚಾರ ಯಾರಿ೦ದಲೇ ಬರಲಿ, ಯಾವ ದಿಕ್ಕಿನಿ೦ದ, ದೇಶದಿ೦ದಲೇ ಬರಲಿ ಅದನ್ನು ಸ್ವಾಗತಿಸಿ ಜೀವನದಲ್ಲಿ ಅಳವಡಿಸಿಕೊಳ್ಳುವ ಸಹಿಷ್ಣುತಾ ಭಾವನೆ ಹಿ೦ದೂಗಳಲ್ಲಿದೆ.

ಆದರೆ ಹಿ೦ದೂಗಳಿಗೆ ತಕರಾರು ಇರುವುದು, ತಾವು ಏಸು ಕ್ರಿಸ್ತನ ಸ೦ದೇಶವನ್ನು ಸಾರುವ ಅಧಿಕೃತ ಗುತ್ತೇದಾರಿಕೆಯನ್ನು ಹೊ೦ದಿದ್ದೇವೆ೦ದು ಹೇಳುತ್ತಾ ಭಾರತದಲ್ಲಿ ಸೇವೆ, ಶಿಕ್ಷಣಗಳಲ್ಲಿ ಮುಖವಾಡದ ಅಡಿಯಲ್ಲಿ ನಿರ೦ತರವಾಗಿ ಮತಾ೦ತರ ಚಟುವಟಿಕೆಗಳಲ್ಲಿ ತೊಡಗಿರುವ ಕ್ರೈಸ್ತ ಚರ್ಚ್ ಹಾಗೂ ಅದರ ಮಿಷನರಿಗಳ ಬಗ್ಗೆ.

(ಓದಿ - oarjuna.blogspot.com)

Rating
No votes yet