"ಕ್ರಿಸ್ಮಸ್ ಹಬ್ಬದ ಶುಭಾಶಯಗಳು"
"ಕ್ರಿಸ್ಮಸ್ ಹಬ್ಬದ ಶುಭಾಶಯಗಳು"
"ಕ್ರಿಸ್ಮಸ್ ಎಂದರೆ...
...ಜೀಸಸ್......ಯೇಸು"
ಅಂದರೆ "ಬೆಳಕು...
.....ಬೆಳಕಾಗಿಸುವ ದಿವ್ಯತ್ಮ! ದೇವರು ಬೇರೆಯಲ್ಲ ,ಬೆಳಕು ಬೇರೆಯಲ್ಲ. ಅದಕ್ಕೆ ದೇವರಿಗೆ ದೀಪವೆಂದರೆ ಇಷ್ಟ, ಬೆಳಕೆಂದರೆ ಇಷ್ಟ!
ಈ ಬೆಳಕು ಮೊಂಬತ್ತಿಯಿಂದಲೂ ಮೂಡಬಹುದು, ಹಣತೆಯಿಂದಲೂ ಮೂಡಬಹುದು. ನಮ್ಮ ಅಂತರಂಗದಲ್ಲಿ ಬೆಳಕಿದೆಯೆನ್ನುವುದನ್ನು ಮತ್ತೆ ಮತ್ತೆ ನೆನಪಿಸುವುದಕ್ಕೆ ಕ್ರಿಸ್ಮಸ್ ಬರುತ್ತದೆ.
ಯೇಸುವಿನ ಹುಟ್ಟು ಎಂದರೆ ಬೆಳಕಿನ ಹುಟ್ಟು! ಅಲ್ಲಿಯ ತನಕ ಬೆಳಕು ಇರಲಿಲ್ಲವೆಂದು ಇದರ ಅರ್ಥವಲ್ಲ! ಬೆಳಕಿನ ಅರ್ಥ ಸ್ಪೋಟವಾದ ಒಂದು ಪವಿತ್ರ ಗಳಿಗೆ ಆವಾಗಿತ್ತು ಎನ್ನುವುದೇ ನಿಜವಾದ ಅರ್ಥ! ಹುಟ್ಟಿನ ಬೆಳಕನ್ನು ಸೂರ್ಯ, ಚಂದ್ರ, ನಕ್ಷತ್ರಗಳಿಂದ ಹೀರಿ ಬದುಕಿಗೆ ಅದನ್ನೆ ಹಿತವಾಗಿ ಉಣಿಸಿ, ಮನಸ್ಸಿನ ಜಿಜಾÕಸೆಗಳನ್ನು ತಣಿಸಿ, ವಿಪರೀತ ಆಲೋಚನೆಗಳನ್ನು ಮಣಿಸಿ, ಬದುಕನ್ನು ದೈವಾಭಿಮುಖಿಯಾಗಿ ನಿಲ್ಲಿಸಿದ ಬೆಳಕಿನ ರೂಪವೆ .....ಜೀಸಸ್...ಯೇಸು...........
ಅಲ್ಲವೇ.................?
(ಸಂ) ವಾಲ್ಪಾಡಿ, ಪ್ರಸಾದ್ ಬಿ. ಶೆಟ್ಟಿ, ಫುಣೆ.