ಕ್ಷಮಯಾ ಧರಿತ್ರಿ
ಜಗದೆಲ್ಲ ಜಂಜಡದ
ಬಹುಭಾರ ತಾಳದಲೆ
ಬಾಯ್ಬಿಡಲು ಭೂದೇವಿ ಕಾಯುತಿಹಳು|
ಹಸಿರು ಪೈರನು ಹೊತ್ತ
ಹಸಿಯಾದ ಕನಸುಗಳ
ಚೆಲುವ ಬದುಕನು ಮತ್ತೆ ಕರೆಯುತಿಹಳು|
ಬಾನ್ ಬೆಟ್ಟ ಕಡಲೊಳಗೆ
ಭೂದೇವಿ ಮಡಿಲೊಳಗೆ
ಸೃಷ್ಟಿ ವಿಪರೀತಗಳು ತೋರುತಿಹವು|
ತಾನ್ ಹೊತ್ತ ಕಂದಗಳೇ
ತನ್ನೆದೆಯ ಬಗೆದಿರಲು
ಭೂರಮೆಯ ಕಣ್ಣುಗಳು ತೋಯುತಿಹವು|
ಹಲವು ಕಷ್ಟಗಳೆದುರು
ತಾಳ್ಮೆ ಸಹನೆಗಳಿಂದ
ಎಲ್ಲ ತ್ಯಾಗವ ಮಾಡಿ ಇರುವಳವಳು|
ಸೃಷ್ಟಿಗೆದುರಾಗಿರುವ
ಈ ಎಲ್ಲ ಮನುಕುಲಕೆ
ಕ್ಷಮಯಾ ಧರಿತ್ರಿ ತಾ ಕ್ಷಮೆ ನೀಡ್ವಳು|
Rating
Comments
ಉ: ಕ್ಷಮಯಾ ಧರಿತ್ರಿ
In reply to ಉ: ಕ್ಷಮಯಾ ಧರಿತ್ರಿ by rasikathe
ಉ: ಕ್ಷಮಯಾ ಧರಿತ್ರಿ
ಉ: ಕ್ಷಮಯಾ ಧರಿತ್ರಿ
In reply to ಉ: ಕ್ಷಮಯಾ ಧರಿತ್ರಿ by msudan86
ಉ: ಕ್ಷಮಯಾ ಧರಿತ್ರಿ
ಉ: ಕ್ಷಮಯಾ ಧರಿತ್ರಿ
In reply to ಉ: ಕ್ಷಮಯಾ ಧರಿತ್ರಿ by hariharapurasridhar
ಉ: ಕ್ಷಮಯಾ ಧರಿತ್ರಿ
ಉ: ಕ್ಷಮಯಾ ಧರಿತ್ರಿ
In reply to ಉ: ಕ್ಷಮಯಾ ಧರಿತ್ರಿ by asuhegde
ಉ: ಕ್ಷಮಯಾ ಧರಿತ್ರಿ
In reply to ಉ: ಕ್ಷಮಯಾ ಧರಿತ್ರಿ by bhavanilokesh mandya
ಉ: ಕ್ಷಮಯಾ ಧರಿತ್ರಿ
ಉ: ಕ್ಷಮಯಾ ಧರಿತ್ರಿ
In reply to ಉ: ಕ್ಷಮಯಾ ಧರಿತ್ರಿ by manjunath s reddy
ಉ: ಕ್ಷಮಯಾ ಧರಿತ್ರಿ