ಖುಷಿ!

ಖುಷಿ!

ಯಾರಿಗೆ ಬೇಡ? ಪ್ರತೀಕ್ಷಣವೂ ಸಿಗಬೇಕೆಂದು ಎಲ್ಲರ ಮನಸ್ಸುಗಳೂ ಹತೊರೆಯುತಿರುತ್ತವೆ. ಅನುಭವಿಸಿದರೇನೆ ಚೆನ್ನ. ಎಲ್ಲವನ್ನು ಶಬ್ದಗಳಲ್ಲಿ
ಬಂಧಿಸಿಡಲಾಗುವುದಿಲ್ಲವಲ್ಲ. ಒಬ್ಬಬ್ಬರದು ಒಂದೊದು ರೀತಿ. ಒಬ್ಬರು ಪ್ರಶಾಂತತೆಯಲ್ಲಿ ಹುಡುಕಿದರೆ ಮತ್ತೊಬ್ಬರು ಕಿವಿಗಡಚಿಕ್ಕುವ ಅಬ್ಬರದಲ್ಲಿ
ಕಾಣುತ್ತಾರೆ. ಮತ್ತೆ ಕೆಲವರು ಸವಿರುಚಿಯ ಸವಿಯುವುದರಲ್ಲಿ ಕಾಣುತ್ತಾರೆ. ನಮ್ಮ ಕೆಲ ಪಡ್ಡೆಹುಡುಗರು ಹೆಂಗೆಳೆಯರ ತುಂಟ ನಗೆಯಲ್ಲಿ ಕಂಡರೆ ಮತ್ತೆ
ಕೆಲವರು ಮಾನಿನಿಯರ ಮೈಮಾಟದ ಸೊಗಸಿನಲ್ಲಿ ಕಾಣುತ್ತಾರೆ. ಮದ ಖುಷಿ ಕೊಡುತ್ತದೆ.

ನಮ್ಮೊಳಗೆ ಮತ್ತೆ ಕೆಲವರು. ನಗುವಿನಲ್ಲಿ ನಗು ಕಾಣುವವರು. ಎದುರಿರುವವರು ಖುಷಿಪಟ್ಟರೇನೆ ಇವರಿಗೆ ಖುಷಿ. ನಿಸ್ವಾರ್ಥ ಮನೋಭಾವ.
ಖುಷಿ ಕೊಡುವಷ್ಟು ಮಜಾ ಕಷ್ಟ ಕೊಡುವುದಿಲ್ಲ- ಅಸಂಬದ್ಧವಾದ ಮಾತು. ಕಷ್ಟದ ಅನುಭವವಾಗದೆ ಖುಷಿ ಮುದ ನೀಡದು ಎನ್ನುವುದೂ ಅಲ್ಲಗೆಳೆಯದ ಮಾತು.
ಖುಷಿಯ ಅಳತೆ ಕಷ್ಟದ ಅನುಭವಕ್ಕೆ ಸಮಾನುಪಾತದಲ್ಲಿರುತ್ತದೆ. ಕಷ್ಟ ಪಡದವರು ಖುಷಿಯಾಗಿರುವುದಕ್ಕಾಗುವುದಿಲ್ಲ ಎಂದು ಹೇಳ ಹೊರಟಿಲ್ಲ. ಅದು ವಾಸ್ತವ.

ಎಲ್ಲರೂ ಕನಸು ಕಾಣುವುದು ಸಂತಸದ ಕ್ಷಣಗಳಿಗಾಗಿಯೇ. ನಾನಾ ರೀತಿಯಲ್ಲಿ ಅದನ್ನು ಪಡೆಯಲು ಹವಣಿಸುತ್ತಿರುತ್ತೇವೆ. ಅದು ನಮ್ಮ tendancy ಅಂತೆಯೇ
ನಮ್ಮ ಹಕ್ಕು ಕೂಡ. ಇಲ್ಲದಿದ್ದರೆ ನಾವಿಂದು ಬಯಸುವ modern touch ಬೇಕಿರುತ್ತಲೇ ಇರಲಿಲ್ಲ-ಇರುತ್ತಲೂ ಇರಲಿಲ್ಲ.

ಅರಸುತ್ತ ಹೋದವನೊಬ್ಬ. ಉತ್ತರ ಕಂಡುಕೊಂದವನೊಬ್ಬ. ವ್ಯಾಖ್ಯಾನ ಮಾಡಿದವನು ಮತ್ತೊಬ್ಬ.
'Sex is the ultimate pleasure on this earth' - ರಸಿಕರು ಉದ್ದರಿಸಿದ್ದೂ ಆಯಿತು, ವೈರಾಗ್ಯ ತಾಳಿದ ನಮ್ಮ ಸಾಧು ಸಂತರು ಕಣ್ಣು ಮಿಟಿಕಿಸಿದ್ದೂ ಆಯಿತು.
ನಡೆಯುತ್ತಲೇ ಇರುತ್ತದೆ ಜೀವನ. ಅಂತೆಯೇ ನಮ್ಮ ಸಂಭ್ರಮದ ಗಳಿಗೆಗಳೂ. ಲಕ್ಷ್ಯವೇ ಇರುವುದಿಲ್ಲ. ಎಡವಟ್ಟಾದಾಗ ಎಚ್ಚರ. ಮತ್ತೆ ಸರಿಪಡಿಸುವಿಕೆ - ಮತ್ತೆ ಹುಡುಕಾಟ.
ಹುಡುಕಾಟದಲ್ಲೇ ನಮ್ಮ ಜೀವನ ಅಲೆಮಾರಿಯಂತಾಗಿರುತ್ತದೆ. ಆಶ್ಚರ್ಯವಾದರೂ ಸತ್ಯ. ವಾಸ್ತವ. ಮಿಥ್ಯವಲ್ಲದ್ದು.

ಸುಂದರ ಕನಸು ಆಗತಾನೆ ಹರೆಯಕ್ಕೆ ಕಾಲಿಡುತ್ತಿರುವ ಹುಡುಗನಿಗೆ. ಹುಣ್ಣಿಮೆಯ ರಾತ್ರಿಯ ರಮ್ಯತೆಯ ಅನುಭವ. ಚೆಲುವೆಯ ಆಗಮನ.
ಬೆಳದಿಂಗಳೇ ನಾಚುವಂತಹ ಅವಳ ನಗು. ಚುಂಬನ. ಆಲಿಂಗನ. ಖುಶಿಯ ಅನುಭವ. ಕನಸಲ್ಲೂ ಹುಡುಕಾಟ. ಕಾತುರ.

ತನ್ನ ಸಂಗಾತಿಯ ಚೆಲುವನ್ನು ಪದಗಳಲ್ಲಿ ಬಂದಿಸಿಡಬೇಕೆಂಬ ವ್ಯರ್ಥ ಪ್ರಯತ್ನದಲ್ಲಿ ಚಡಪಡಿಸುತ್ತಿರುವಾಗ, ಅವಳೇ ತನ್ನೆದುರು ಪ್ರತ್ಯಕ್ಷವಾಗಿ ಮಂದಹಾಸದ ನಗೆ ಬೀರಿದಾಗ,
ಮನಸ್ಸಿನಿಂದ ಹೊರಬರುವ ಪದಪುಂಜಗಳು ಖುಷಿಯಲ್ಲಿಯೇ ಮಿಂದು ಬಂದಂತ್ತಿರುತ್ತವೆ. ವರ್ಣಿಸಲಸದಳ.

ಮನಸ್ಸು ಸಂಭ್ರಮದ ಕ್ಷಣಗಳಿಗಾಗಿ ಸದಾ ಹಂಬಲಿಸಲಿ, ಕನಸು ಕಾಣಲಿ. ಖುಷಿ ಅನುಭವಿಸುವಂತಾಗಲಿ ಸದಾ!

Rating
No votes yet