ಖೇಮ್ಚಂದ್ ಪ್ರಕಾಶ್ - ಹಿಂದಿ ಚಿತ್ರರಂಗದ ಮಹಾನ್ ನೃತ್ಯಪಟು ಹಾಗೂ ಗಾಯಕ !

ಖೇಮ್ಚಂದ್ ಪ್ರಕಾಶ್ - ಹಿಂದಿ ಚಿತ್ರರಂಗದ ಮಹಾನ್ ನೃತ್ಯಪಟು ಹಾಗೂ ಗಾಯಕ !

ಚಿತ್ರ

ನಮ್ಮ ನೆಚ್ಚಿನ ಹಿಂದಿ ಚಿತ್ರರಂಗದ ಬಹುಮುಖಿ ಕೌಶಲಗಳ ಗಾಯಕ,  ಕಿಶೋರ್ ಕುಮಾರ್ ಇನ್ನೂ ಹೆಸರುವಾಸಿಯಾಗದ ಗಾಯಕನಾಗಿದ್ದ  ಸಮಯದಲ್ಲಿ ಅವರ ಪ್ರಾವೀಣ್ಯತೆಯನ್ನು ಮೊಟ್ಟಮೊದಲು ಗುರುತಿಸಿ  ಬ್ರೇಕ್ ಕೊಟ್ಟು ಸಹಾಯಮಾಡಿದವರು. ಖೇಮ್ ಚಂದ್ ಪ್ರಕಾಶ್ ರು.  ಲತಾ  ಮಂಗೇಶ್ಕರ್  ಅವರನ್ನು ಮಹಲ್  ಚಿತ್ರದಲ್ಲಿ ಹಾಡಲು ವ್ಯವಸ್ಥೆಮಾಡಿ, ಅವರೊಬ್ಬ  ಮೇರುಗಾಯಕಿಯಾಗಿ ಹೊರಹೊಮ್ಮಲು ನೆರವಾದರು. ದುಖಃದ  ವಿಷಯವೆಂದರೆ ಖೇಮ್ ಚಂದ್ ಪ್ರಕಾಶರ  ಹೆಸರು ಯಾರಿಗೂ ನೆನಪಿನಲ್ಲಿಯೂ ಉಳಿಯದಿರುವುದು. ಅದು ಮೀಡಿಯಾಗಳ ಪ್ರಚಾರದಿಂದಾಗಿ ಎಂದು ಪರಿಗಣಿಸಬಹುದು. ಹಿಂದಿ ಚಲನಚಿತ್ರರಂಗಕ್ಕೆ ಅವರ  ಕೊಡುಗೆ ಅನುಪಮ, ಹಾಗೂ ಮರೆಯಲಾರದ್ದು  !

ಖೇಮ್ ಚಂದ್ ಪ್ರಕಾಶ್,  ೧೯೦೭ ರಲ್ಲಿ ಗೋವರ್ಧನ್ ಪ್ರಕಾಶ್ ಎಂಬ ಒಳ್ಳೆಯ ಕಥಕ್ ನೃತ್ಯ ಪಟು ಹಾಗು ಜೈಪುರ ಘರಾಣದ ಉತ್ಕೃಷ್ಟ ನರ್ತಕನಾಗಿ, ಗಾಯಕನಾಗಿ  ಹೆಸರುಮಾಡಿದ್ದ ಕಲಾವಿದನಿಗೆ ಮಗನಾಗಿ ಜನಿಸಿದರು. ಪ್ರಾರಂಭದ ಬಾಲ್ಯದ ದಿನಗಳಲ್ಲಿ  ಅವರಿಗೆ  ತಂದೆಯವರೇ ಗುರುಗಳಾದರು. ಜಯಪುರ ಘರಾನಾದಲ್ಲಿ  ನೃತ್ಯಮಾಡುತ್ತಿದ್ದಾಗ  ಅವರ ಕಾಲಿನ ಕೆಳಗೆ  ನೃತ್ಯ ರಸಿಕರು ಗುಲಾಬಿ ಹೂವಿನ ದಳಗಳನ್ನು ಹರಡಿರುತ್ತಿದ್ದರು. ನೃತ್ಯ ಮಾಡುತ್ತಿರುವಾಗಲೇ  ಅವರು ಗುಲಾಬಿ ಹೂವಿನ ದಳಗಳನ್ನು ಕಾಲಿನಲ್ಲಿ ಹರಡುತ್ತಾ  ಚಿತ್ರಗಳನ್ನು ಬಿಡಿಸುತ್ತಾ ಸಾಗುತ್ತಿದ್ದರು. ಈ ನೈಪುಣ್ಯತೆ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತು.  ನೇಪಾಳ ದೇಶದ ನರೇಶ್, ರುದ್ರ ಶಂಶೇರ್ ಸಿಂಗ್ ರವರ ದರ್ಬಾರಿನಲ್ಲಿ ಖೇಮ್ ಚಂದ್ ಪ್ರಕಾಶ್ ಅಧಿಕೃತವಾಗಿ ನರ್ತಕರಾಗಿ ನೇಮಿಸಲ್ಪಟ್ಟರು. ಅಲ್ಲಿ ೭ ವರ್ಷಗಳ ಕಾಲ ಕೆಲಸಮಾಡಿ, ಕಲ್ಕತ್ತಾ ನಗರಕ್ಕೆ ಹೆಚ್ಚಿನ ನೌಕರಿ ಸೌಲಭ್ಯಗಳನ್ನು ಗಳಿಸಲು ಹೋದರು.

ಈಗಿನ ಮುಂಬಯಿನ ತರಹ ಆಗಿನ ಕಾಲದಲ್ಲಿ  ಕಲ್ಕತ್ತನಗರದಲ್ಲಿ  ಸಿನಿಮಾ  ವಲಯದಲ್ಲಿ ನೌಕರಿಗಳು  ಸಿಗುವುದೆಂದು ತಿಳಿದವರು ಹೇಳುತ್ತಿದ್ದರು. ಅಲ್ಲಿನ ನ್ಯೂ ಥಿಯೇಟರ್ಸ್ಸ ಎಂಬ ಸಿನಿಮಾ ನಿರ್ಮಾಣ ಸಂಸ್ಥೆಯಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಲು ಹೋದರು. ಆಗ ಕಲ್ಕತ್ತಾದಲ್ಲಿ ಇಂಗ್ಲಿಷರ ಪ್ರಾಬಲ್ಯ ಹೆಚ್ಚಾಗಿತ್ತು. ಸ್ವಲ್ಪ ಕಾಲ ಅವರಿಗೆ ಸಮಾಧಾನಕರವಾದ ಕೆಲಸ ಲಭ್ಯವಾಗಲಿಲ್ಲ. ಕೊನೆಗೆ ಗೆಳೆಯರ ನೆರವಿನಿಂದ ೧೯೩೫ ರಲ್ಲಿ ನ್ಯೂ ಥಿಯೇಟರ್ಸ್ ನಲ್ಲಿಯೇ ಜೂನಿಯರ್ ಸಹಾಯಕನೆಂಬ ನೌಕರಿ ಸಿಕ್ಕಿತು. ನ್ಯೂ ಥಿಯೇಟರ್ ನ ಅತ್ಯಂತ ಹೆಸರುವಾಸಿಯಾದ ದೇವದಾಸ್  ಚಿತ್ರ ದಲ್ಲಿ  ಕೆ. ಎಲ್ ಸೈಗಾಲ್ ರವರು ಅಭಿನಯಿಸಿದ್ದರು.  ಕಲ್ಕತ್ತ ಆಕಾಶವಾಣಿಯಲ್ಲೂ ಅವರಿಗೆ ಶಾಸ್ತ್ರೀಯ ಸಂಗೀತದ ಖಾತೆಯಲ್ಲಿ ನಿರ್ದೇಶಕರಾಗಿ  ಕೆಲಸ ಸಿಕ್ಕಿತು. ಹಾಗೆಯೇ ಪೃಥ್ವಿರಾಜ ಕಪೂರ್, ಕೆ. ಎಲ್ ಸೈಗಲ್ ರ ಪರಿಚಯವಾಯಿತು. ಹೀಗೆ  ೩ ವರ್ಷಗಳ ಕಾಲ ಅಭಿನಯ ಮತ್ತು ಹಾಡುಗಾರಿಕೆಯಿಂದ ಕೆಲಸ ನಿರ್ವಹಿಸಿದರು. ಆ ಸಮಯದಲ್ಲಿ ನಿರ್ಮಾಣವಾದ. ಸಿನಿಮಾಗಳೆಂದರೆ, 'ಸ್ಟ್ರೀಟ್ ಸಿಂಗರ್,' ಮತ್ತು 'ಸಬೇರಾ'. ಇವೆರಡು ಚಿತ್ರಗಳಲ್ಲೂ ಖೇಮ್ ಚಂದರು ಅಭಿನಯವನ್ನೂ ಮಾಡಿದ್ದರು.

೧೯೩೮ ರಲ್ಲಿ ಅವರಿಗೆ ಬೊಂಬಾಯಿಗೆ ಹೋಗಿ ಅಲ್ಲಿ ತಮ್ಮ ಅಭಿನಯ ಮತ್ತು ಸಂಗೀತವನ್ನು ಪ್ರದರ್ಶಿಸಲು ಮನಸ್ಸಾಯಿತು ಅವರ ಜತೆ ಕೆ. ಎಲ್ ಸೈಗಾಲ್ ಮತ್ತು ಕೆ. ಏನ್. ಸಿಂಗ್ (ನ್ಯೂ ಥಿಯೇಟರ್ಸ್ ನಲ್ಲಿ ಹೆಸರು ಮಾಡಿದ ಕಲಾವಿದ)  ಸಹಿತ ಬೊಂಬಾಯಿಗೆ ಹೊರಟರು. ಬೊಂಬಾಯಿಗೆ ಅವರಿಗೆ ಯಾರ ಪರಿಚಯವೂ ಇರಲಿಲ್ಲ. ಕಲ್ಕತ್ತದಲ್ಲಿ ಪರಿಚಿತರಾಗಿದ್ದ ಪೃಥ್ವಿರಾಜ್  ಕಪೂರ್ ರನ್ನು ಭೇಟಿಮಾಡಿ ಅವರ ನೆರವಿನಿಂದ 'ರಣಜಿತ್ ಮೂವಿಟೋನ್' ಎಂಬ ಸಿನಿಮಾ ನಿರ್ಮಾಣ ಕಂಪೆನಿಗೆ ಸೇರಿದರು. ಕಥಕ್ ಡಾನ್ಸ್ ಮತ್ತು ಶಾಸ್ತ್ರೀಯ ಸಂಗೀತದಲ್ಲಿನ ಪ್ರಾವೀಣ್ಯತೆಯನ್ನು ನೋಡಿ ಅವರಿಗೆ ಮ್ಯೂಸಿಕ್ ನಿರ್ದೇಶಕರ ಕೆಲಸ ಕೊಡಲಾಯಿತು. ಅಲ್ಲಿ ನೌಶಾದ್ ಎಂಬ ತರುಣನನ್ನು ಕಂಡು ತಮ್ಮ ಸಹಾಯಕನಾಗಿ ಆರಿಸಿಕೊಂಡರು. ರಣಜಿತ್ ಮೂವಿಟೋನ್ ನಲ್ಲಿ  ತಮ್ಮ ೫ ವರ್ಷಗಳ  ಅವಧಿಯಲ್ಲಿ ೧೯ ಚಿತ್ರಗಳಿಗೆ ಸಂಗೀತವನ್ನು ಒದಗಿಸಿದರು. ೧೯೪೩ ರಲ್ಲಿ ಬಿಡುಗಡೆಯಾದ  ಸೈಗಲ್ ಅಭಿನಯಿಸಿದ 'ತಾನ್ ಸೇನ್ ಫಿಲಂ ಬಹಳ ಹೆಸರು ಕಂಡಿತು.  'ಜಗ್ ಮಗ್ ಜಗ್ ಮಗ್ ದಿಯಾ ಜಲಾ'  ಆಚಿತ್ರದ ನಾಯಕಿ, ಖುರ್ಷಿದ್ ಬಾನು, ತನ್ನಪಾತ್ರದ  ಹಾಡುಗಳನ್ನು ತಾನೇ ಸ್ವಂತವಾಗಿ ಹಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದರು. ಖೇಮ್ ಚಂದ್  ಆಕೆಯ ಕಂಠಕ್ಕೆ ಹೊಂದಿಕೊಳ್ಳುವ ಗೀತೆಗಳನ್ನು ರಚಿಸಿ, ಗಾಯಕಿಯೊಬ್ಬರನ್ನು ಹುಡುಕುತ್ತಿದ್ದರು'. ಆಗ ಕಣ್ಣಿಗೆ ಬಿದ್ದವರು 'ಲತಾ ಮಂಗೇಶ್ಕರ್' ಎಂಬ ಮರಾಠಿ ಭಾಶೀಯ  ಗಾಯಕಿ ; ಲತಾ ಮಂಗೇಶ್ಕರ್ ಕಂಠ ಅವರಿಗೆ ಬಹಳ ಇಷ್ಟವಾಯಿತು. ಮುಂದೆ ತಯಾರಾಗುವ ಹಿಂದಿ ಚಿತ್ರಗಳಲ್ಲಿ ಆಕೆಯ ಕೈಲೇ ಹಾಡುಗಳನ್ನು ಹಾಡಿಸುವ ಆಶೆ ಅವರದಾಗಿತ್ತು. ಹೀಗೆ,  ಆಕೆಯ ಹೆಸರನ್ನು ಶಿಫಾರಿಸ್ ಮಾಡಲು ನಿರ್ಮಾಪಕ, ಚಂದುಲಾಲ್ ಶಾ  ಹತ್ತಿರ ಹೋದರು. ಲತಾದೀದಿ, ಚಂದೂಲಾಲ್ ಶಾ  ರವರ ಮುಂದೆ  ಹಾಡಿದಾಗ, ಆಕೆಯದು ಬಹಳ ಕೀರಲು  ಧ್ವನಿ ಮತ್ತು ನಾಯಕಿಯ ಕಂಠಕ್ಕೆ  ಸರಿಹೋಗುವುದಿಲ್ಲವೆಂದು ಅವರಿಗೆ ಅನ್ನಿಸಿ ಒಪ್ಪಿಗೆ ಕೊಡಲಿಲ್ಲ. ಹೀಗೆ  ಇಬ್ಬರಿಗೂ ಭಿನ್ನಾಭಿಪ್ರಾಯಗಳು ಹೆಚ್ಚಿ, ಬೇಸರದಿಂದ ಖೇಮ್ ಚಂದ್ ಪ್ರಕಾಶ್ ತಮ್ಮ ನೌಕರಿಗೆ  ರಾಜೀನಾಮೆ ನೀಡಿದರು. ಸ್ವಲ್ಪ ಸಮಯ ಸ್ವತಂತ್ರವಾಗಿ (ಫ್ರಿಲಾನ್ಸ್ ) ಕೆಲಸಮಾಡಿದರು. ಕಮಲ್ ಆಮ್ರೋಹಿ ಎಂಬ ಯುವಕನನ್ನು ಬಾಂಬೆ ಟಾಕೀಸ್ ಕಂಪೆನಿಯಲ್ಲಿ ಭೆಟ್ಟಿಮಾಡಿದರು. ಅವರು ಮಹಲ್ ಎಂಬ ಚಿತ್ರ ನಿರ್ಮಿಸಲು  ದುಡಿಯುತ್ತಿದ್ದರು. ಅವರು ಕಥೆಯನ್ನು ಬರೆದು  ಪಟ್ಕತೆನ್ನೂ  ಬರೆದರು. ತಾವು ಲತಾಮಂಗೇಶ್ಕರ್ ಗೆ ಹೇಳಿ ಆಕೆಯ ಸಿರಿ ಕಂಠದಿಂದ  ಒಂದು ಹಾಡನ್ನು ಹಾಡಿಸಿದರು. ಚಿತ್ರದಲ್ಲಿ  ಮಧುಬಾಲ ಪಾತ್ರದ ಹೆಸರು ಕಾಮಿನಿ ಎಂದು.  ೧೯೪೯ ರಲ್ಲಿ ವಿಮೋಚನೆಗೊಂಡ ಚಿತ್ರದಲ್ಲಿ ನಾಯಕನಾಗಿ ಅಶೋಕ್ ಕುಮಾರ್ ನಾಯಕನಾಗಿ ಅಭಿನಯಿಸಿದ್ದರು.  ಚಿತ್ರದ ಹಾಡು ಎಷ್ಟು ಜನಪ್ರಿಯವಾಯಿತೆಂದರೆ, ಸಿನಿಮಾ ಪ್ರಿಯರು,  ಫೋನ್ ಮಾಡಿ  ಆಯೇಗಾ ಆನೇ ವಾಲಾ ಹಾಡಿದ ವ್ಯಕ್ತಿಯಾರು ? ಎಂದು ಕೇಳಿ ತಿಳಿದುಕೊಳ್ಳುತ್ತಿದ್ದರು. ಫಿಲಂ ಸ್ಟುಡಿಯೋದವರು ಈ ವಿಷಯವನ್ನು ರೆಕಾರ್ಡಿಂಗ್ ಕಂಪೆನಿಯವರ ಗಮನಕ್ಕೆ ತಂದಾಗ, ಅವರು ಮೆಚ್ಚಿ  ಮೊದಲ ಬಾರಿಗೆ ಲತಾರವರ ಹೆಸರನ್ನು  ರೆಕಾರ್ಡಿಂಗ್ ಮಡಿದ ಗ್ರಾಮಫೋನ್  ಪ್ಲೇಟ್ ಮೇಲೆ ಮುದ್ರಿಸಿದರು. ಮಹಲ್ ಚಿತ್ರ ಬಿಡುಗಡೆಯಾಗಿ ಒಂದು ವರ್ಷದಲ್ಲೇ ಖೇಮ್ ಚಂದ್ ಪ್ರಕಾಶ್  'ಸಿರೋಸಿಸ್' ಎಂಬ ಕಾಯಿಲೆಗೆ ಬಲಿಯಾಗಿ ೧೦, ಆಗಸ್ಟ್, ೧೯೫೦ ರಲ್ಲಿ ಕೊನೆಯುಸಿರೆಳೆದರು.  (ಇದೇ  ಕಾಯಿಲೆ ಹೆಸರಾಂತ ಚಿತ್ರ ಅಭಿನೇತ್ರಿ, ಮೀನಾಕುಮಾರಿಯವರ (೧, ಆಗಸ್ಟ್, ೧೯೩೩-೩೧,ಮಾರ್ಚ್, ೧೯೭೨) ಜೀವವನ್ನೂ ಬಲಿ  ತೆಗೆದುಕೊಂಡಿತ್ತು.)

-ಸೌಜನ್ಯತೆ : ೭೦ ಎಂ. ಎಂ. ವಿತ್ ರಾಹುಲ್

Rating
Average: 4.3 (3 votes)