ಗಂಡನ ಹೆಸರು..

ಗಂಡನ ಹೆಸರು..

  ಕೆಲಸ ಮುಗಿಸಿ ಬಂದು ಊಟ ಮಾಡಿ ರಾತ್ರಿ ಅದೇನೋ ಆಲೋಚನೆ  ಮಾಡುತ್ತಾ ಮಲಗಿದ್ದೆ

ಇದ್ದಕಿದ್ದಂತೆ ನನ್ನ ಹೆಸರು ನನಗೆ ಮರೆತೇ ಹೋಯಿತು ನಂಬಿ ಬಿಡಿ ಮಾರಾಯ್ರೆ ಅದೆಷ್ಟು ಆಲೋಚನೆ ಮಾಡಿದರು

ಹೆಸರು ಹೊಳೆಯುತಲೇ ಇಲ್ಲ .. ತಲೆ ಚಿಟ್ಟು ಹಿಡಿಯುವ ಮುನ್ನ ಅರ್ಧಾಂಗಿಯನ್ನೇ ಕೇಳುವ ಅನಿಸಿತು .

ಮೊಬೈಲ್ ಫೋನ್ ತೆಗೆದು ಮಡದಿಗೆ ಫೋನ್ ಹಾಯ್ಸಿದೆ ....

" ಹಲೋ.. " ಎಂದಳು ನಿದ್ದೆ ಮಂಪರಿನಲ್ಲಿ

"ಲೇ ಮಾರಾಯ್ತಿ ನನ್ನ ಹೆಸರು ಮರೆತೋಯ್ತು ಕಣೇ ಒಮ್ಮೆ ನೆನಪಿಸಿ ಬಿಡೋ"

"ಇದೇನು ಖಾಯಿಲೆ ನಿಮಗೆ ಮಧ್ಯರಾತ್ರಿ ಕರೆದು..."

"ಖಾಯಿಲೆ ಗೀಯಿಲೆ ಏನು ಇಲ್ಲ.., ಅದೇನೋ ಜ್ಞಾಪಕಕ್ಕೆ ಬರುವುದಿಲ್ಲ ಅದಕ್ಕೆ ಕೇಳಿದೆ "

" ಅಯ್ಯೋ ಕೃಷ್ಣಾ ಅದ್ಹೇಗೆ ಹೇಳಲಿ ನಿಮ್ಮ ಹೆಸರು"

"ಅದರಲ್ಲೇನಿದೆ ಒಮ್ಮೆ ಹೇಳಿ ಬಿಡು ಕಾಣೆ "

"ಅಯ್ಯ್ಯೋ ಪರಮೇಶ್ವರಾ ನಿಮಗೇನು ತಲೆ ಸರಿ ಇಲ್ವಾ ನಿಮ್ಮ ಹೆಸರು ನಾನೆಗೆ ಹೇಳಲಿ"

"ಅದೇ ಮಾರಾಯ್ತಿ ಹೇಳಿದನಲ್ವೆ  ಜ್ಞಾಪಕಕ್ಕೆ ಬರುವುದಿಲ್ಲ ಎಂದು" 

"ರಾಮ ರಾಮ ನನಗೆ ನಿಮ್ಮ ಹೆಸರು ಹೇಳಲು ಸಾಧ್ಯವಿಲ್ಲ ...ಮಾರಾಯ್ರೆ "

"ಹೇ.. ತಲೆ ಹರಟೆ ಮಾಡದೆ ಒಮ್ಮೆ ಹೇಳಿಬಿಡು ಕಾಣೇ"

"ಶಿವ ಶಿವ ..ಮಧ್ಯ ರಾತ್ರಿ ಕರೆದು ನನ್ನ ನಿದ್ದೆ ಕೆಡಿಸಿ ಹಾಳಾಗಿ ಹೋಗಲು ನನ್ನ ಕೈಲಿ ಆಗೊಲ್ಲ ನಿಮ್ಮ ಹೆಸರು ಹೇಳಲು"

"...."

..."..."

ಈ ರೀತಿ ನಡೆಯಿತು  ನಮ್ಮ ಮಾತು ರಾತ್ರಿಯೆಲ್ಲ,  ನನಗೆ ಅರ್ಥವಾಗದ ಮಾತು ಏನಂದ್ರೆ....

    ನಾವು ಆರಾಧಿಸುವ , ಪ್ರಾರ್ಥಿಸುವ ದೇವರ ಹೆಸರನ್ನು ಏಕವಚನದಲ್ಲಿ ಕರೆಯುವ;

    ನಿಮಗೆ ತಲೆ ಸರಿಯಿಲ್ಲ.., ಹಾಳಾಗಿ ಹೋಗಿ ಎಂದು ದಿನಾ  ಜಗಳಕಾಯುವ ಈ  ಹೆಂಡತಿಯರಿಗೆ    ಮಾತ್ರ   ಗಂಡನ ಹೆಸರು

    ಯಾಕೆ ಹೇಳೋಕೆ ಆಗೋಲ್ಲ ...?

Rating
No votes yet

Comments