'ಗಗನಮುಖಿ ವಿಮಾನಗಳು'
ಗಗನಮುಖಿ ವಿಮಾನಗಳು
ನಾವೆಲ್ಲ
ಗಗನಮುಖಿ ವಿಮಾನಗಳು
ಆದಿ ಅಂತ್ಯಗಳಿಲ್ಲದ
ಅನಂತ ಆಕಾಶವನು
ಅಳೆವ ದಿಮಾಕು ನಮಗೆ
ಆದರೆ
ನಮ್ಮೊಳಗಿನದು
ಸೀಮಿತ ಇಂಧನ
ಅದು ಮುಗಿಯಿತೋ
ಮತ್ತೆ
ವಾಸ್ತವದ ಭೂಮಿಗೆ
ಮರಳಲೇ ಬೇಕು
ಇಲ್ಲದಿರೆ
ದುರಂತ ಕಟ್ಟಿಟ್ಟ ಬುತ್ತಿ
ತಪ್ಪು
ಆಕಾಶದ್ದೂ ಅಲ್ಲ
ಭೂಮಿಯದೂ ಅಲ್ಲ
ನಮ್ಮ ಮಿತಿಯ
ಅರಿವಿಲ್ಲದ ನಮ್ಮದು
***
Rating
Comments
ಉ: 'ಗಗನಮುಖಿ ವಿಮಾನಗಳು'
ಪಾಟೀಲರೆ,
ಸರಳ, ಸುಂದರ ಸ್ವಗತ ! ಸರಳದಿಂದ ಗಹನದವರೆಗಿನ ಅರ್ಥವ್ಯಾಪ್ತಿಯನ್ನು ಒಂದೆ ಕವನದಲ್ಲಿ ಬಂಧಿಸಿದ್ದೀರ - ಲೌಕಿಕದಿಂದ ಆಧ್ಯಾತ್ಮದ ವ್ಯಾಪ್ತಿಯವರೆಗೆ, ಅಭಿನಂದನೆಗಳು.
In reply to ಉ: 'ಗಗನಮುಖಿ ವಿಮಾನಗಳು' by nageshamysore
ಉ: 'ಗಗನಮುಖಿ ವಿಮಾನಗಳು'
ನಾಗೇಶ ಮೈಸೂರು ರವರಿಗೆ ವಂಧನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ ಕವನದ ಮೆಚ್ಚುಗೆಗೆ ಧನ್ಯವಾದಗಳು.
ಉ: 'ಗಗನಮುಖಿ ವಿಮಾನಗಳು'
ತಪ್ಪು
ಆಕಾಶದ್ದೂ ಅಲ್ಲ
ಭೂಮಿಯದೂ ಅಲ್ಲ
ನಮ್ಮ ಮಿತಿಯ
ಅರಿವಿಲ್ಲದ ನಮ್ಮದು - ಹಿರಿಯರೇ, ಚನ್ನಾದ ಕವನ. ಮನಷ್ಯನ ಇತಿ ಮಿತಿಗಳ ದರ್ಶನ ಮಾಡುತ್ತದೆ ಕವನ. 'ಯಾಕೋ, ಆಸಮಾಂ ಮೇಂ ಉಡನೇ ವಾಲೆ ಮಿಟ್ಟಿ ಮೇಂ ಮಿಲ್ ಜಾಯೇಂಗೆ ' ಪ್ರಾಣ, ಮನ್ನಾಡೆ ನೆನಪಾದರು. ಕವನದಲ್ಲಿ ಸ್ಪಿರಿಚುವಾಲಿಟಿ ಇದೆ. ಧನ್ಯವಾದಗಳು
In reply to ಉ: 'ಗಗನಮುಖಿ ವಿಮಾನಗಳು' by lpitnal
ಉ: 'ಗಗನಮುಖಿ ವಿಮಾನಗಳು'
ಲಕ್ಷ್ಮೀಕಾಂತ ಇಟ್ನಾಳ ರವರಿಗೆ ವಂದನೆಗಳು
ಈ ಕವನವನ್ನು ನೀವು ಮತ್ತು ನಾಗೇಶ ಮೈಸೂರು ರವರು ಗ್ರಹಿಸಿದ ರೀತಿಯ ಕ್ರಮದಿಂದಾಗಿ ಕವನ ಅರ್ಥ ಪಡೆದಿದೆ, ಕವನಗಳು ಓದುಗರ ಆಶಯಕ್ಕೆ ತಕ್ಕಂತೆ ಬಿಚ್ಚಿಕೊಳ್ಳುವಂತಹವು, ನೀವು ಕವನಗಳನ್ನು ಗ್ರಹಿಸುವ ಕ್ರಮ ಮತ್ತು ಅಭಿವ್ಯಕ್ತಿಸುವ ರೀತಿ ಅನನ್ಯವಾದುದು. ಈ ಸಂಧರ್ಭದಲ್ಲಿ ನೀವು ಮನ್ನಾಡೆ ಪ್ರಾಣಗಾಗಿ 'ಉಪಕಾರ' ಚಿತ್ರಕ್ಕೆ ಹಾಡಿದ ಈ ಗೀತೆ ನೆನಪಿಸಿ ಕೊಂಡಿದ್ದೀರಿ, ಅದು ಆ ಚಿತ್ರದ ಜನ್ ಮೆಚ್ಚಿದ ಗೀತೆಗಳ ಪೈಕಿ ಒಂದಾಗಿತ್ತು, ಮೆಚ್ಚುಗೆಗೆ ಧನ್ಯವಾದಗಳು.
ಉ: 'ಗಗನಮುಖಿ ವಿಮಾನಗಳು'
ಒಳ್ಳೆಯ ಸುಂದರ ಕವನ ಸರ್..! ಹೇಗಿದ್ದಿರಿ?
In reply to ಉ: 'ಗಗನಮುಖಿ ವಿಮಾನಗಳು' by mmshaik
ಉ: 'ಗಗನಮುಖಿ ವಿಮಾನಗಳು'
ಮೇಡಂ ವಂದನೆಗಳು
ಕವನ ಕುರಿತು ತಾವು ಬರೆದ ಮೆಚ್ಚುಗೆಯ ಪ್ರತಿಕ್ರಿಯೆ ಓದಿದೆ. ಬಹಳ ದಿನಗಳಾಯ್ತು ಮೇಡಂ ತಾವು ಸಂಪದದಲ್ಲಿ ಕಾಣಿಸಿ ಕೊಂಡಿಲ್ಲ, ತಮ್ಮ ಮನ ತಟ್ಟುವ ಗಜಲ್ ಗಳಿಲ್ಲದೆ ಸಂಪದ ಬಡವಾಗಿದೆ, ಸಕ್ರಿಯವಾಗಿ ಸಂಪದದಲ್ಲಿ ತೊಡೊಗಿಸಿಕೊಳ್ಳುವಿರೆಂಬ ಆಶಯದೊಂದಿಗೆ, ಧನ್ಯವಾದಗಳು.
ಉ: 'ಗಗನಮುಖಿ ವಿಮಾನಗಳು'
ಸರ್ ನಮಸ್ಕಾರಗಳು
ನಿಮ್ಮ ಕವನ ನನ್ನಗೆ ತುಂಬಾ ಇಷ್ಟವಾಯತು.
ಮನುಷ್ನನು ಷ್ಟಿಸಿದ ವಸ್ತುಗಳು ಕೇವಲ ಕ್ಷೆಣಿಕ ಮಾತ್ರ ,ಭಗವಂತನ ಸ್ರಷ್ಟಿಯಂದ ಆದ ವಸ್ತು ಶಾಶ್ವತ.
In reply to ಉ: 'ಗಗನಮುಖಿ ವಿಮಾನಗಳು' by ravindra n angadi
ಉ: 'ಗಗನಮುಖಿ ವಿಮಾನಗಳು'
ರವೀಂದ್ರ ಎನ್ ಅಂಗಡಿಯವರಿಗೆ ವಂದನೆಗಳು
ತಮ್ಮ ಮೆಚ್ಚುಗೆ ಪ್ರತಿಕ್ರಿಯೆ ಓದಿದೆ ತಾವು ಕವನವನ್ನು ಗ್ರಹಿಸಿದ ರೀತಿ ವಿಶಿಷ್ಟವಾದುದು, ಕವನದ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು.