ಗಣೇಶರ ರಾಗಿ ಮುದ್ದೆ ಚಾಲೇಂಜ್ ಮತ್ತು ತ್ಯಾಂಪನ ಬ್ಯಾಡ್ ಲಕ್ 1
ಗಣೇಶರ ರಾಗಿ ಮುದ್ದೆ ಚಾಲೇಂಜ್ ಮತ್ತು ತ್ಯಾಂಪನ ಬ್ಯಾಡ್ ಲಕ್ 1
ಗಣೇಶರ ರಾಗಿ ಮುದ್ದೆ ಚಾಲೇಂಜನ್ನು ಹೇಗೆ ಸ್ವೀಕರಿಸಬೇಕೆನ್ನುವುದರ ಬಗ್ಗೆ ಯೋಚಿಸುತ್ತಿದ್ದಾಗ ಹಿಲ್ಲೋ ಎಂಬ ಶಬ್ದ ನನ್ನ ಪಕ್ಕದಲ್ಲೇ ಇದ್ದ ಕರವಾಣಿಯಿಂದ. ಇಡೀ ಪ್ರಪಂಚದಲ್ಲೇ ಹಲ್ಲೋ ಅನ್ನ ಹಿಲ್ಲೋ ಅಂತ ಕರೆಯುವವರಾರ್ಯಾದರೂ ಇದ್ದಾರೆಂದರೆ ಅದು ಈ ಶೀನ ಮಾತ್ರ, ಹಂಸಾ ನಂದಿಯವರ ಪುಸ್ತಕ ಬಿಡುಗಡೆಗೆ ಬಂದವ ಊರಿಗೆ ಹೊರಡಲೇ ಇಲ್ಲ ಹಾಗಾದರೆ?
. ಏನಪ್ಪಾ...?
ವಿಷಯ ಗೊತ್ತಾಯ್ತಾ...?
ಇಲ್ಲ ಹೇಳು..?
ತ್ಯಾಂಪನನ್ನ ಪೋಲೀಸರು ಕೊಂಡೊಯ್ದರಂತೆ..!!!
ಯಾಕೆ ಏನಾಯ್ತು..?
ಅಂತಹ ಕೆಲಸ ಏನೂ ಮಾಡಲ್ಲವಲ್ಲ ಆತ, ಏನೋ ಒಂತರಾ ಫಿರ್ಕಿ ಅಷ್ಟೇ, ಆದರೆ ಯಾರಿಗೂ ತೊಂದರೆ ಕೊಡೋ ಪ್ರಾಣಿ ಅಲ್ಲ ಆತ.
ಏನೋ ಅವನ ಹೆಂಡತಿಯೇ ಕಂಪ್ಲೈಂಟ್ ಕೊಟ್ಟಳಂತೆ..
ತ್ಯಾಂಪಿಯಾ..? ತ್ಯಾಂಪನ ಬಗ್ಗೆ ಏನಂತ ಕಂಪ್ಲೈಂಟ್ ಕೊಟ್ಟಾಳು..?
ಬರ್ತೀನಿ ಇರು ಎಲ್ಲಿಗೆ ಬರಬೇಕು ಹೇಳು.. ವಿಳಾಸ ಬರೆದುಕೊಂಡೆ.
ಹೊರಟೆ.
ಆದಿನ ಅವನ ಬ್ಯಾಡ್ ಲಕ್ಕೇ ಖರಾಬ್ ಆಗಿತ್ತಂತೆ ( ತ್ಯಾಂಪನೇ ಹೇಳಿದ್ದಂತೆ)
ಬೆಳಿಗ್ಗೆ ಕಾಫಿ ತಿಂಡಿ ಏನೂ ಇಲ್ಲ ಆದಿನ, ಬೆಳಿಗ್ಗೇನೇ ಹಾಲ್ನಲ್ಲೇ ಕಣ್ಣು ಕೆಂಪು ಮಾಡಿಕೊಂಡು ಮುಖ ಊದಿಸಿಕೊಂಡು ಕುಳಿತಿದ್ದಳು ತ್ಯಾಂಪಿ.
ಏನಯ್ತಮ್ಮಾ...? ಪ್ಯಾರ್ನಲ್ಲಿ ತ್ಯಾಂಪ ಕರೆಯೋದು ಹಾಗೇನೇ.
ಉತ್ತರವಿಲ್ಲ.. ಮುಖದೊಡನೆ ದೇಹವೂ ಇನ್ನೊಂದ್ಕಡೆ ತಿರುಗಿತ್ತು..?
ಒಸಾಮಾ ಪಕ್ಕದಲ್ಲೇ ಇತ್ತು ಇದೇ ಏನಾದರೂ ಕಿತಾಪತಿ ಮಾಡಿರಬಹುದಾ,..? ಏನೋ ಸೀರಿಯಸ್ಸ್ ಕೇಸೇ.
"ಕಲ್ಪನಾ ಯಾರು ಹೇಳಿ, ಅಂಕಲ್.." ಒಸಾಮಾ
ಸಿನೇಮಾ ತಾರೆ ಬೆಳ್ಳಿ ಮೋಡದೋಳು,ಬೆಳ್ಳಗೆ ಅಂದವಾಗಿದ್ದಾಳೆ, ಸ್ವಲ್ಪ ಕುತ್ತಿಗೆ ಉದ್ದ ಆದರೆ ಒಳ್ಳೆಯ ನಟನೆ ಮಾಡ್ತಾಳೆ"
ನೋಡು ನೋಡು ಎಲ್ಲ ವಿಷಯ ತಿಳ್ಕೊಂಡಿದ್ದಾರೆ ಅವಳ ಖಾತೆಗೆ ಈ ನಿನ್ನೆ ಮೂವತ್ತೈದು ಸಾವಿರ ಸೇರಿತು "
ಅಷ್ಟು ಫೇಮಸ್ ಅವಳು . ಅವಳಿಗೆ ಮೂವತೈದು ಯಾವಲೆಕ್ಖ..? ಎಷ್ಟೂ ಸೇರಿಸಬಹುದು....!!!
ಈಗ ಬ್ಯಾಂಕು.... ನಾಳೆ ಮನೆ ಅಲ್ಲವಾ,...?
ಈಗ ಯಾಕೋ ಎಲ್ಲೋ ತ್ಯಾಂಪನಿಗೆ ಎಡವಟ್ಟಾಗಿದೆ ಎಂದನ್ನಿಸಿತು.
ಹೌದು...ಅಲ್ಲಾ.... ಅವಳು...
ಅಯ್ಯೋ ಹೋಯ್ತು ನನ್ನ ಬಾಳೇ ಸರ್ವ ನಾಶನವಾಯ್ತು, ನೋಡಪ್ಪಾ ನಿನ್ನ ಅಂಕಲ್ ಮನೆಗೆ ಸವತಿ ತಂದರು, ನಿನ್ನೆ ಅವಳ ಬ್ಯಾಂಕ್ ಖಾತೆಗೆ ಮೂವತೈದು ಸಾವಿರ ಹಾಕಿದ್ದರು, ಇಂದು ಕೇಳಿದರೆ ಈ ತರ, ಯಾವತ್ತಿಂದ ನಡೆಯುತ್ತಿತ್ತೋ ಗೊತ್ತಿಲ್ಲಾ, ಏನೋ ಇವತ್ತು ನನಗೆ ಗೊತ್ತಾಯ್ತು ಇಲ್ಲವಾದರೆ .... ಎಷ್ಟು ದಿನದಿಂದ ನಡೆಯುತ್ತಿತ್ತೋ ಈ ನಾಟಕ, ... ಇದು ಅತೀ ಆಯ್ತು..... ಇಲ್ಲ ಒಂದೂ ಅವಳಿರಬೇಕು ಇಲ್ಲಾ ನಾನು, ನೋಡೇ ಬಿಡೋಣ ಇಲ್ಲಾಂದರೆ ಡೈವೋರ್ಸೇ...
ಅವಳ ಕೋಪ ತಾರಕಕ್ಕೇರಿತು.
ಆದರೆ ಅದು ವಿಪರೀತಕ್ಕಿಟ್ಟುಕೊಂಡದ್ದು ಅವಳು ನಿದ್ದೆ ಮಾತ್ರೆ ತಿಂದು ಆಸ್ಪತ್ರೆಗೆ ಸೇರಿದಾಗಲೇ...
ಏನೂ ತ್ಯಾಂಪಿ ನಿದ್ದೆ ಮಾತ್ರೆ ತಿಂದು ಆತ್ಮ ಹತ್ಯೆಗೆ ಪ್ರಯತ್ನ ಮಾಡಿದ್ದಳಾ...? ಸಾಧ್ಯವೇ ಇಲ್ಲ, ಒಂದು ಸಣ್ಣ ಗಾಯ ಆದರೆ ಸಹಿಸೋಳಲ್ಲ, ಹಾಗಿರುವಾಗ, ಅವಳ ಸ್ಪಾ ದ ಅಣ್ಣಂದಿರೇ ಏನೋ ಮಸಲತ್ತು ಮಾಡಿರ ಬೇಕು ತ್ಯಾಂಪನಿಗೂ ಅವರಿಗೂ ಮೊದಲಿನಿಂದಲೂ ಎಣ್ಣೆ ಸೀಗೆ ಸಂಬಂಧ.
"ಅಲ್ಲವೋ ಒಂದು ವಿಷಯ ಅರ್ಥವಾಗಲಿಲ್ಲ ನಿನ್ನ ಬೆಳ್ಳಿ ಮೋಡದ ಕಲ್ಪನಾ ಸತ್ತು ಮಣ್ಕಚ್ಚಿ ಸುಮಾರ್ ವರ್ಶವೇ ಆಗಿತ್ತಲ್ಲ ಮರಾಯಾ" ಶೀನನೆಂದ.
"..ಅದೇ ನಾನು ಹೇಳ ಹೋಗಿದ್ದೆ ಆದರೆ ಅವಳು ಕೇಳಿಸಿಕೊಳ್ಳಲೇ ಇಲ್ಲವಲ್ಲ.ತುಂಬಾನೇ ಸಂಶಯದವಳು ತ್ಯಾಂಪಿ,.."
"ಅದು ಸರಿ ಆ ಹಣದ ವಿಷಯವೇನು?"
"ಅದೇ ಗೊತ್ತಾಗ್ಲಿಲ್ಲ, ಪ್ರಾಯಶಃ ಆದಿನ ನನ್ನ ಪಾಸ್ ಬುಕ್ ನಾನು ಮರೆತು ಬ್ಯಾಂಕನಲ್ಲೇ ಬಿಟ್ಟು ಬಂದಿದ್ದೆ, ಆ ಬ್ಯಾಂಕ ಮೆನೇಜರ್ ನನ್ನ ಪಾಸ್ ಬುಕ್ ಬದಲಿಗೆ ಅದ್ಯಾರೋ ಕಲ್ಪನಾ ನ ಪಾಸ್ ಬುಕ್ ತಂದು ನಮ್ಮನೆಗೆ ಕೊಟ್ಟಿದ್ದ "
"ಅಂದರೆ ನಿನ್ನ ಪಾಸ್ ಬುಕ್ ಕಲ್ಪನಾಳಿಗೆ ಸಿಕ್ಕಿತಾ..?"
"ಹೌದು ಇಷ್ಟೇ ವಿಷಯ ಆಗಿದ್ದು. ಮಾರನೆಯ ದಿನವೇ ಆತ ಬಂದು ವಿಷಯ ತಿಳಿಸಿ ಹೇಳಿದ್ದ, ಆದರೆ ತ್ಯಾಂಪಿ ಕೇಳಿಸಿಕೊಳ್ಳಲೇ ಇಲ್ಲ, ನಾನೂ ಆ ಬ್ಯಾಂಕ್ ಮನೇಜ್ರೂ ಮತ್ತೆ ಆ ಸವತಿಯೂ ಸೇರಿಯೇ ಏನೋ ಮಸಲತ್ತು ಮಾಡಿದ್ದೇವೆ ಎಂದುಕೊಂಡಿದ್ದಾಳೆ."
ಅಲ್ದನಾ ಆ ಕಲ್ಪನಾ ಳನ್ನೇ ಕರ್ಕಂಡ್ ಬಂದ್ ತ್ಯಾಂಪಿಗೆ ಹೇಳ್ರೆ..?ಶೀನನೆಂದ
ಕೊಂದು ಹಾಕಿಯಾಳು ಬೇಡಪ್ಪಾ ಬೇಡ , ನಮಗಾಗಿ ಆ ಪಾಪದ ಕಲ್ಪನಾನ ಯಾಕೆ ಗೋಳುಹೊಯ್ಕೋಬೇಕು..?
"ಅಂದ ಹಾಗೆ ಆ ಪಾಪದ ಕಲ್ಪನಾ ಯಾರು ಗೊತ್ತಾ ನಿಂಗೆ"
"...ಇಲ್ಲ " ತಡವರಿಸಿದ ತ್ಯಾಂಪ,
"ಹೆಣ್ಣುಗರುಳು ಪಾಪ ಹೊರ್ಗಿನ್ ಎಲ್ಲ ಹೆಂಗ್ಸರೂ ನಿಂಗೆ ಪಾಪವೇ ಅಲ್ದಾ..?ಯಾಕೋ ಸುಳ್ ಹೇಳ್ತೀಯಾ..?" ಬಡ ಪೆಟ್ಟಿಗೆ ಶೀನ ಯಾರನ್ನೂ ಬಿಡೋನಲ್ಲ.
"ಅದೇ ಆ ದಿನ ಹೋಟೆಲ್ ನಲ್ಲಿ ಪಾಯಸಕ್ಕೇ ಟಪ ಟಪಾ ಅಂತ ಕರಿ ಮೆಣ್ಸು ಹಾಕೋತ್ತಿದ್ದೀಯಲ್ಲಾ ಅವಳೇ ಅಲ್ಲವಾ ..? ಶೀನ.
"ಎಂತದಾ ... ಪಾಯ್ಸಕ್ಕೆ ಮೆಣ್ಸಾ,,...?
"ಅದೇ ನಾನೂ ಇಂವ ಆ ದಿನ ಊಟಕ್ಕೆ ಹೊರ್ಗ್ ಹೋದ್ವಾ ........ಶೀನ ಆದಿನ ನೆನಪು ಮಾಡಿಕೊಂಡ
"ಆ ದಿನ ನಾವಿಬ್ರೂ ಒಂದೇ ಟೆಬಲ್ಲಿನಲ್ಲಿದ್ವಿ....ಊಟದ ತಟ್ಟೆ ಬಂತು, ಮಾತಾಡ್ತಾ ಅಡ್ತಾ ತ್ಯಾಂಪ ಪಕ್ಕದ ಪೆಪ್ಪರ್ ಶೀಶೆ ತಕಂಡ, ಮೊಸರಿಗ್ ಹಾಕುಕೆ, ಯಾಕೋ ಹಾಕ್ತ ಬದಿಗೆ ತಿರ್ಗ್ದಾ, ಕೈಯಲ್ಲಿ ಎಂತ್ ಇತ್ತ ನೆನ್ಪೇ ಹೋಯ್ತ್, ಕಟ ಕಟ ಕಟಾ ಅದರಿಂದ ಕೊಡ್ಕಿದ್ದೇ ಕೊಡ್ಕಿದ್, ಬಿಳಿ ಪಾಯಸ ಕಪ್ಪಾಯ್ತು.
"ಏನಿದೂ ನೀವು ಪೆಪ್ಪರ್ ಪಾಯಸಕ್ಕೆ ಹಾಕ್ಕೋಳ್ತಿದ್ದೀರಾ..?
ಪೆಚ್ಚು ಪೆಚ್ಚಾಗಿ ನಗುತ್ತ ತ್ಯಾಂಪನೆಂದಿದ್ದ ,
"ಇಲ್ಲ ಕಲ್ಪನಾ ಅದು ನನ್ನ ಹವ್ಯಾಸ, ಹೀಗೆ ಎಲ್ಲದಕ್ಕೂ ಪೆಪ್ಪರ್ ಹಾಕ್ಕೊಳ್ಳೋದು, ಆರೋಗ್ಯಕ್ಕಾಗಿ... ಹ್ಹೀ ಹ್ಹೀ
...... ಅವಳೇ ಅವಳೇ...
ಅಲ್ಲಾ ನೀನು ನಿಜವಾಗಿಯೂ ಅವಳ ಖಾತೆಗೆ.....
ಶೀನ ನನ್ನನ್ನು ಸುಮ್ಮನಿರಿಸಿದ.
ಆಗಲೇ....."ಏನೂ ಮಿಲಿಟರಿಯವರು ಪೋಲೀಸ್ ಸ್ಟೇಷನ್ ಗೆ..."
ಗಣೇಶ...!!! ನಾನೂ ಅವನೂ ಒಟ್ಟೋಟ್ಟಿಗೇ ಸೇರಿದ್ದೆ ಅವನು ಪೋಲೀಸ್ಗೆ ನಾನು ಮಿಲಿಟರಿಗೆ, ನನ್ನದು ನಿವ್ರತ್ತಿಯಾಗಿತ್ತು , ಆತನಿನ್ನೂ ಕೆಲ್ಸದಲ್ಲಿದ್ದ.
ನನ್ನ ಸ್ನೇಹಿತ ನೊಬ್ಬನನ್ನು ಇಲ್ಲೆ ಸೇರಿಸಿದ್ದೀರಲ್ಲಾ ಅವನನ್ನು ಬೀಡಿಸಿಕೊಳ್ಳಲು ಬಂದಿವಪ್ಪಾ...
"ಸಾದ್ಧ್ಯವೇ ಇಲ್ಲ ಬಿಡು , ಅವನ ಹೆಂಡತಿಯೇ ಕೇಸ್ ಜಡಿದಿದ್ದಾಳಲ್ಲ, ಜಗಳ ಮಾನಸಿಕ ಹಿಂಸೆ.....!!!!"
"ಹಾಗೇನಿಲ್ಲ ಇವರದ್ದು ಪ್ರೇಮ ವಿವಾಹವಪ್ಪಾ?"
"ಅದೇ......! ಈಗ ಬರುವ ಡೈವೋರ್ಸ್ ಕೇಸಲ್ಲಿ ಹೆಚ್ಚಿನವು ಪ್ರೇಮ ವಿವಾಹಗಳೇ,..... ಅದರಲ್ಲೂ ಈ ಕೇಸಿನ ವಿಷಯವೇ ಬೇರೆ..!!
ಏನದು...?
"ಇವನ ಹೆಂಡತಿಯೇ ಪ್ರಪಂಚದ ಯಾವ ಹೆಂಗಸೂ ಈತನನ್ನು ಸಂತೋಷ ಪಡಿಸಲಾರಳು" ಎಂದು ಬರೆದಿದ್ದಾಳೆ,
ಈ ವಿಷಯದ ಒಳ ಅರ್ಥ ಮತ್ತು ಹಿಂಸೆಯ ಸಾಧ್ಯತೆ ಬಾಧ್ಯತೆ ಕುರಿತು ಮಾತು ಕತೆ ಪತಿ ಪೀಡಿತರ ಸಂಘದ ಅಧ್ಯಕ್ಷೆಯ ಜತೆ ನಡೆಯುತ್ತಿದೆ, ಪ್ರಾಯಶಃ ಯಾವ ಇನ್ಫ್ಲುಯೆನ್ಸೂ ಈತನನ್ನು ಬಿಡಿಸಲಾರದು.
ಶೀನ ನೂ ನಾನೂ ಅವಾಕ್ಕಾದೆವು
(ಮುಂದುವರಿಯುವುದು)
Comments
ಉ: ಗಣೇಶರ ರಾಗಿ ಮುದ್ದೆ ಚಾಲೇಂಜ್ ಮತ್ತು ತ್ಯಾಂಪನ ಬ್ಯಾಡ್ ಲಕ್ 1
In reply to ಉ: ಗಣೇಶರ ರಾಗಿ ಮುದ್ದೆ ಚಾಲೇಂಜ್ ಮತ್ತು ತ್ಯಾಂಪನ ಬ್ಯಾಡ್ ಲಕ್ 1 by partha1059
ಉ: ಗಣೇಶರ ರಾಗಿ ಮುದ್ದೆ ಚಾಲೇಂಜ್ ಮತ್ತು ತ್ಯಾಂಪನ ಬ್ಯಾಡ್ ಲಕ್ 1
In reply to ಉ: ಗಣೇಶರ ರಾಗಿ ಮುದ್ದೆ ಚಾಲೇಂಜ್ ಮತ್ತು ತ್ಯಾಂಪನ ಬ್ಯಾಡ್ ಲಕ್ 1 by partha1059
ಉ: ಗಣೇಶರ ರಾಗಿ ಮುದ್ದೆ ಚಾಲೇಂಜ್ ಮತ್ತು ತ್ಯಾಂಪನ ಬ್ಯಾಡ್ ಲಕ್ 1
ಉ: ಗಣೇಶರ ರಾಗಿ ಮುದ್ದೆ ಚಾಲೇಂಜ್ ಮತ್ತು ತ್ಯಾಂಪನ ಬ್ಯಾಡ್ ಲಕ್ 1
In reply to ಉ: ಗಣೇಶರ ರಾಗಿ ಮುದ್ದೆ ಚಾಲೇಂಜ್ ಮತ್ತು ತ್ಯಾಂಪನ ಬ್ಯಾಡ್ ಲಕ್ 1 by ಗಣೇಶ
ಉ: ಗಣೇಶರ ರಾಗಿ ಮುದ್ದೆ ಚಾಲೇಂಜ್ ಮತ್ತು ತ್ಯಾಂಪನ ಬ್ಯಾಡ್ ಲಕ್ 1
In reply to ಉ: ಗಣೇಶರ ರಾಗಿ ಮುದ್ದೆ ಚಾಲೇಂಜ್ ಮತ್ತು ತ್ಯಾಂಪನ ಬ್ಯಾಡ್ ಲಕ್ 1 by gopinatha
ಉ: ಗಣೇಶರ ರಾಗಿ ಮುದ್ದೆ ಚಾಲೇಂಜ್ ಮತ್ತು ತ್ಯಾಂಪನ ಬ್ಯಾಡ್ ಲಕ್ 1
ಉ: ಗಣೇಶರ ರಾಗಿ ಮುದ್ದೆ ಚಾಲೇಂಜ್ ಮತ್ತು ತ್ಯಾಂಪನ ಬ್ಯಾಡ್ ಲಕ್ 1
In reply to ಉ: ಗಣೇಶರ ರಾಗಿ ಮುದ್ದೆ ಚಾಲೇಂಜ್ ಮತ್ತು ತ್ಯಾಂಪನ ಬ್ಯಾಡ್ ಲಕ್ 1 by vani shetty
ಉ: ಗಣೇಶರ ರಾಗಿ ಮುದ್ದೆ ಚಾಲೇಂಜ್ ಮತ್ತು ತ್ಯಾಂಪನ ಬ್ಯಾಡ್ ಲಕ್ 1
ಉ: ಗಣೇಶರ ರಾಗಿ ಮುದ್ದೆ ಚಾಲೇಂಜ್ ಮತ್ತು ತ್ಯಾಂಪನ ಬ್ಯಾಡ್ ಲಕ್ 1
In reply to ಉ: ಗಣೇಶರ ರಾಗಿ ಮುದ್ದೆ ಚಾಲೇಂಜ್ ಮತ್ತು ತ್ಯಾಂಪನ ಬ್ಯಾಡ್ ಲಕ್ 1 by kavinagaraj
ಉ: ಗಣೇಶರ ರಾಗಿ ಮುದ್ದೆ ಚಾಲೇಂಜ್ ಮತ್ತು ತ್ಯಾಂಪನ ಬ್ಯಾಡ್ ಲಕ್ 1