ಗರ್ಭದಲ್ಲಿ ದಶಾವತಾರ

ಗರ್ಭದಲ್ಲಿ ದಶಾವತಾರ

                           ಗರ್ಭದಲ್ಲಿ ದಶಾವತಾರ

               ತಾಯಿ ಬ್ರಹ್ಮಾಂಡವು ಮಗುವು ಪಿಂಡಾಂಡವು,
               ಪಿಂಡದಿಂದ ಬ್ರಹ್ಮ ಮಾಡೊ ಅಂಡ ವೇದವು.//ಪ//.

               ವೇದರಕ್ಷೆಗಾಗಿ ಬಂದ ಮತ್ಸ್ಯಾವತಾರವು,
               ಪ್ರಥಮಮಾಸ ಗರ್ಭದಲ್ಲಿ ಮೀನಾಕಾರವು.//೧//.

               ದೇವರಮರಗೊಳಿಸಿದಂತ ಕೂರ್ಮಾವತಾರವು,
               ಗರ್ಭದೆರಡು ತಿಂಗಳಲ್ಲಿ ಆಮೆರೂಪವು.//೨//.

               ಅಸುರಾರಿ ಹರಿಯು ತಳೆದ ವರಾಹಾವತಾರವು,
               ಮೂರುಮಾಸದುದ್ದಮುಖದ ಪುಟ್ಟ ಗರ್ಭವು.//೩//.

               ಹಿರಣ್ಯಕಶಿಪುನಾಶಕಾಗಿ ಬಂದ ನಾರಸಿಂಹವು,
               ನಾಲ್ಕುಮಾಸ ಗರ್ಭದಲ್ಲಿ ಸಿಂಹರೂಪವು.//೪//.

               ಬಲಿಯ ತುಳಿದ ತ್ರಿವಿಕ್ರಮ ವಾಮನಾವತಾರವು,
               ಐದುಮಾಸ ಬೆಳೆದ ಕುಬ್ಜ ವಿಷ್ಣು ರೂಪವು.//೫//.

               ಧರೆಯ ದುಷ್ಟರನ್ನು ಕೊಂದ ಭಾರ್ಗವಾವತಾರವು,
               ಆರುಮಾಸ ಗರ್ಭಶಿಶುವ ಕ್ಷಾತ್ರ ತೇಜವು.//೬//.

               ಶ್ರೀ ರಾಮಚಂದ್ರನಾ ಸಪ್ತಮಾವತಾರವು,
               ಶುದ್ದಮನದ ಮಾನವಾಕೃತಿಯ ಪೂರ್ಣವು.//೭//.

               ಗೀತಾಮೃತವ ಕೊಟ್ಟ ಕೃಷ್ಣಾವತಾರವು,
               ಶಿಶುವಿನಲ್ಲಿ ಬುದ್ಧಿಜ್ಞಾನಕರ್ಮಯೋಗವು.//೮//.

               ರಾಗದ್ವೇಷ ನಾಶದಾ ಬುದ್ಧಾವತಾರವು,
               ನವಮಾಸದ ಗರ್ಭದಲ್ಲಿ ಧ್ಯಾನಯೊಗವು.//೯//.

               ಹರಿಯು ಕಲ್ಕಿಯಾಗಿ ಬರುವ ದಶಮಾವತಾರವು,
               ಜನುಮ ತಳೆದ ಮಗುವಿನಾ ಮೂರ್ತಿ ರೂಪವು.//೧೦//.

               ದೇವ ಬ್ರಹ್ಮಾಂಡವು ದೇಹ ಪಿಂಡಾಂಡವು,
               ಅಂಡ ಪಿಂಡ ಬ್ರಹ್ಮಾಂಡದ ಪ್ರಣವನಾದವು.//ಪ//.

                                        -:ಅಹೋರಾತ್ರ. 

Rating
No votes yet