ಗಲ್ಲಿ ಗೂಂಡಾಗಳೆಲ್ಲ ಬೆಂಗಳೂರಿನ ಮೇಯರ್ಗಳು...
- ಕರ್ನಾಟಕದ ಆರನೆ ಒಂದರಷ್ಟು ಜನತೆ ಇವತ್ತು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.
- ಬೆಂಗಳೂರು ಮಹಾನಗರ ಪಾಲಿಕೆಯ 2007-08 ರ ಅಂದಾಜು ವರಮಾನ 3302 ಕೋಟಿ ರೂಪಾಯಿ
- (ಇದೇ ಸಮಯದಲ್ಲಿ ಗೋವಾ ರಾಜ್ಯದ ವರಮಾನ 2263 ಕೋಟಿಗಳು ಮಾತ್ರ)
- ಇಷ್ಟು ದೊಡ್ಡ ನಗರದ ಇತ್ತೀಚಿನ ಪ್ರಜಾ-ಮುಖ್ಯಸ್ಥ, ಕಾರ್ಪೊರೇಷನ್ನ ಮೇಯರ್ಗಳ ಹೆಸರು ಎಷ್ಟು ಜನ ಬೆಂಗಳೂರಿಗರಿಗೆ ತಿಳಿದಿದೆ?
- ಮೇಯರ್ ಆಗಲು ಬೇಸಿಕ್ ಕ್ವಾಲಿಫಿಕೇಶನ್ ಏನೆಂದರೆ ಯಾವುದಾದರೂ ಒಂದು ವಾರ್ಡಿಗೆ ಕಾರ್ಪೊರೇಟರ್ ಆಗುವುದು ಮತ್ತು ತನ್ನದೇ ಪಕ್ಷ ಅಧಿಕಾರದಲ್ಲಿದ್ದರೆ ಐದು ವರ್ಷದಲ್ಲಿ ಐದು ಸಲ ಬರುವ ಅವಕಾಶಗಳಲ್ಲಿ ಒಂದು ಸಲವಾದರೂ ತಾನು ಮೇಯರ್ ಆಗಿ ಆಯ್ಕೆಯಾಗುವಂತೆ ರಾಜಕೀಯ ಮಾಡುವುದು.
- ಎಷ್ಟೋ ಜನ ಸ್ಥಳೀಯ ಗೂಂಡಾಗಳು ಕಾರ್ಪೊರೇಟರ್ಗಳಾಗಿರುವುದು ಸುಳ್ಳಲ್ಲ. ಬೆಂಗಳೂರಿನಲ್ಲಿ ಲೋಕಲ್ ರಾಜಕೀಯ ಮಾಡುವವರಿಗೆ ಸ್ವಲ್ಪ "ಬಾಹುಬಲ" ಇರಲೇ ಬೇಕೇನೊ!
- ಮೇಯರ್ ಆದ ಮೇಲೆ ಮೇಯರ್ಗಿರಿ ಅನುಭವಿಸುವುದನ್ನು ಬಿಟ್ಟು ಮತ್ತೇನೂ ಮಾಡುವ ಅಗತ್ಯ ಇಲ್ಲ.
- ಯಾಕೆ ಅಂತೀರ? ಹೌದು, ಯಾಕೆ ಮಾಡ್ತೀರ? ನಿಮಗೇನೂ ಬುದ್ಧಿ ಇಲ್ಲವೇ? ಮುಂದಿನ ಸಲ ನಿಮ್ಮ ವಾರ್ಡಿನಲ್ಲಿ ನೀವು ಚುನಾವಣೆಗೆ ನಿಲ್ಲುವ ಯೋಗ್ಯತೆ (ಲಿಂಗ-ಜಾತಿವಾರು ರೊಟೇಷನಲ್ ಮೀಸಲಾತಿಯಿಂದಾಗಿ) ಇರುತ್ತದೆ ಎನ್ನುವ ಹಾಗಿಲ್ಲ. ಕಾರ್ಪೊರೇಟರ್ ಅವಧಿಯೆ ಐದು ವರ್ಷ. ಇನ್ನು ಮೇಯರ್ಗಿರಿ ಇರುವುದು ಒಂದೆ ವರ್ಷ.
- ಆಹಾ ಎಂತಹ ಅದ್ಭುತ ವ್ಯವಸ್ಥೆ!!!
- ಬೆಂಗಳೂರಿಗರು ಇದಕ್ಕಿಂತ ಒಳ್ಳೆಯ ವ್ಯವಸ್ಥೆಗೆ ಯೋಗ್ಯರಿಲ್ಲವೆ? Don't they deserve better?
ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ನನ್ನ ಈ ವಾರದ ಅಂಕಣ ಲೇಖನ ಇದೇ ವಿಷಯದ ಮೇಲೆ, ಮತ್ತು ಇನ್ಫೋಸಿಸ್ ಮತ್ತು ರಾಜ್ಯ ಸರ್ಕಾರಗಳೆರಡನ್ನೂ ತನ್ನ ಸಾತ್ವಿಕ ಆದರೆ ನಿರಂತರ ಹೋರಾಟದಿಂದ ಮಣಿಸಿದ ಬೆಂಗಳೂರು ಪಕ್ಕದ ಹಳ್ಳಿಯ ಪಂಚಾಯಿತಿ ಅಧ್ಯಕ್ಷನ ಕುರಿತಾಗಿ
ಇದೆ. ರೈತರ ನೂರಾರು ಕೋಟಿ ರೂಪಾಯಿ ಜಮೀನನ್ನು ಕೇವಲ ಹತ್ತಾರು ಕೋಟಿಗೆ ಅನ್ಯಾಯದಿಂದ ಕಿತ್ತುಕೊಂಡು ಅದನ್ನು ಇನ್ಫೋಸಿಸ್ಗೆ ಕೊಡುವ ತೀರ್ಮಾನ ಅದಾಗಿತ್ತು. ಆದರೆ, ಒಬ್ಬ ಸಾಮಾನ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷನ ಹೋರಾಟ ಆ ದೌರ್ಜನ್ಯವನ್ನು ತಡೆಯಿತು. ಪೂರ್ಣ ಲೇಖನ ಇಲ್ಲಿದೆ:
http://amerikadimdaravi.blogspot.com/2008/01/blog-post_30.html