ಗಾಂಧಿ ಜಯಂತಿ ದಿನ ಪಾಲಿಸಬೇಕಾದ ನಿಯಮಗಳು

ಗಾಂಧಿ ಜಯಂತಿ ದಿನ ಪಾಲಿಸಬೇಕಾದ ನಿಯಮಗಳು

ಮದ್ಯ ನಿಷೇಧ

ಗುರವೇ ಎಣ್ಣೆ ಇಲ್ಲಾ ಅಂದ್ರೆ ರಜ ಇದೆ ಅನ್ನೋದು ಗೊತ್ತಾಗುವುದೇ ಇಲ್ವೇ.

ಹಾಗಾಗಿ ಮದ್ಯವನ್ನು ರಸ್ತೆಯ ಮಧ್ಯದಲ್ಲಿ ಕುಡಿಯದೆ ಮನೆಗೆ ತಂದು ಕುಡಿಯಿರಿ. ಅಬಕಾರಿ ಇಲಾಖೆಯವರು ಸಿಕ್ಕರೆ ಒಂದು ನೂರು ರೂಪಾಯಿ ಕೊಡಿ. ಅವರೇ ಎಕ್ಸಟ್ರಾ ಚಾರ್ಜ್್ಗೆ ಮತ್ತೊಂದಿಷ್ಟು ಬಾಟಲ್ ಸರಬರಾಜು ಮಾಡುತ್ತಾರೆ.

 

ಮಾಂಸ ನಿಷೇಧ

ಎಣ್ಣೆ ಹೊಡೆದ ಮೇಲೆ ತುಂಡು ಇಲ್ಲಾ ಅಂದ್ರೆ ಹೇಗೆ.

ಅದಕ್ಕೆ ಅಂತಾ ನಿನ್ನೆಯೇ ತಂದಿಟ್ಟುಕೊಂಡ ಮಾಂಸವನ್ನು ಮನೆಯಲ್ಲಿ ಬೇಯಿಸಿ ತಿನ್ನಬಹುದು. ಆದರೆ ಅದರ ವಾಸನೆ ಹೊರಗೆ ಹರಡದಂತೆ ನೋಡಿಕೊಳ್ಳಿ.

 

ಧೂಮಾಪಾನ ನಿಷೇಧ

ಗಾಂಧಿಯವರು ಕೆಟ್ಟದ್ದನ್ನು ಸುಟ್ಟುಹಾಕಿ ಎಂದಿದ್ದಾರೆ. ಹಾಗಾಗಿ ಆರೋಗ್ಯಕ್ಕೆ ತುಂಬಾ ಕೆಟ್ಟದಾದ ಸಿಗರೇಟನ್ನ ಸಿಟ್ಟಿನಿಂದ ಸುಡುತ್ತಿದ್ದೇನೆ. ಯಾವುದೇ ವಸ್ತು ಸುಟ್ಟಾಗ ಹೊಗೆ ಬರುತ್ತದೆ. ಹಾಗೇ ಸಿಗರೇಟು ಸುಟ್ಟಾಗಲೂ ಹೊಗೆ ಬರುತ್ತದೆ. ಒಟ್ಟು ಕೆಟ್ಟದ್ದನ್ನು ಸುಡಿ. ಇದನ್ನ ಪಾಲಿಸಲೇ ಬೇಕು.

 

ಸತ್ಯ ಮೇವ ಜಯತೆ

ರೀ ನಿಮಗೆ ನಿಮ್ಮ ಫ್ರೆಂಡ್ ರಾಜ ಪೋನ್ ಮಾಡಿದಾನೆ.

ಹಲೋ ರಾಜ ಏನಮ್ಮಾ, ನಾನು ಬೆಂಗಳೂರಿಂದ ಹೊರಗೆ ಇದೀನಿ. ನಾಳೆ ಸಿಗ್ತೀನಮ್ಮಾ.

ಏನ್ರೀ ಮನೇ ಇದ್ದು ಹೊರಗೆ ಇದೀನಿ ಅಂದ್ರಲ್ಲಾ. ಇವತ್ತು ಗಾಂಧಿ ಜಯಂತಿ ಕಣೆ.

 

ದಂಡೀ ಸತ್ಯಾಗ್ರಹ

ಯಾವುದೇ ಅಂಗಡಿಗೆ ಇವತ್ತು ಹೋದರೆ ಒಂದು ಕೆಜಿ ಉಪ್ಪಿಗೆ 2ರೂ ಡಿಸ್ಕೌಂಟ್. ಐಯೋಡಿನ್ ಬಗ್ಗೆ ಕೇಳಬೇಡಿ.

 

ಖಾದಿ ಬಟ್ಟೆ

ಬಿಳಿ ಪಂಚೆ ಉಟ್ಟಿಕೊಂಡು ಹಾಗೇ ಮೇಲೊಂದು ಷಲ್ಯ ಹಾಕಿಕೊಂಡು ಟಿವಿ ಮುಂದೆ ಸೆಟ್ಲಾಗುವುದೇ ಗಾಂಧಿ ತತ್ವ ಪಾಲನೆ.

ಹೇರ್ ಕಟ್ ಕಡ್ಡಾಯ. ಅದೂ ಗಜನಿ ಸ್ಟೈಲ್ ಅಲ್ಲ. ಫುಲ್ ತಲೆ ಬೋಲಿಸಲೇಬೇಕು. ಮಿರಿಂಡಾ ಸ್ಟೈಲ್. ಮತ್ತೆ ಮುಂದಿನ ಗಾಂಧಿ ಜಯಂತಿಗೆ ಕಟ್ ಮಾಡಿಸಬೇಕು. ಅಷ್ಟೊತ್ತಿಗೆ ಮತ್ತೊಬ್ಬ ಮಹಾನ್ ವ್ಯಕ್ತಿ ರಬೀಂದ್ರನಾಥ ಠಾಗೂರು ಆಗಿರುತ್ತೀರಾ.

 

ಇನ್ನು ಹೊರಗೆ ಹೋಗುವಾಗ ನಿಮ್ಮ ಪಕ್ಕದಲ್ಲಿ ಯಾರು ಇರಬೇಕು ಅನ್ನುವುದನ್ನು ನೀವೇ ಡಿಸೈಡ್ ಮಾಡಿಕೊಳ್ಳಿ.

ಇನ್ನು ಗಾಂಧಿ + ಜಯಂತಿ - ಈ ಆಚರಣೆಗೆ ಚಿತ್ರ ನಟಿ ಜಯಂತಿ ಇದ್ದರೆ ಒಳ್ಳೆಯದು ಎನ್ನುವುದು ಹಿರಿಯರ ಅನಿಸಿಕೆ.

ಗಾಂಧಿಯ ಪೋಟೋವನ್ನು ಆದಷ್ಟು ಹಳೆಯದನ್ನು ಇಡಿ. ಯಾಕೆಂದರೆ ಮಕ್ಕಳಿಗೆ ಗಾಂಧಿ ತಾತ ಎಂದರೆ ಯಾರು ಅಂತಾ ಗೊತ್ತಾಗಬೇಕು. ಯಂಗ್ ಆಗಿರುವುದನ್ನ ಇಡಬೇಡಿ.

ಆದಷ್ಟು ಒಳ್ಳೆಯ ಕಂಪೆನಿ ಊದಬತ್ತಿ ಉಪಯೋಗಿಸಿ. ರಬ್ಬರ್ ಸುಟ್ಟ ವಾಸನೆ ಬಂದರೆ ಊದಬತ್ತಿ ಪದಕ್ಕೆ ಕೆಟ್ಟ ಹೆಸರು ಬರುತ್ತದೆ.

ಚಂಡು ಹೂವು ಬಿಟ್ಟು ಯಾವ ಹೂವನ್ನು ಬೇಕಾದರೂ ಬಳಸಿ.

ಜಯಂತಿ ಆಚರಣೆಯಾದ ಮೇಲೆ ಆದಷ್ಟು ಸ್ವೀಟನ್ನು ತಿನ್ನಿ. ವಿವಿಧ ಮಾತ್ರೆ ಕಂಪೆನಿಯವರು ಬದುಕಬೇಕಲ್ಲವೆ.

ನಂತರ ಡಿಸ್ಕೊಥೆಕ್ ಪಬ್್ಗೆ ಹೋಗಲೇಬೇಕು. ಹಿಂದಗಡೆ ಬಾಗಿಲಿನಿಂದ. ಇಲ್ಲಾ ಅಂದ್ರೆ ಪಾಪ ಅವರ ಜೀವನ ನಡೆಯಬೇಕಲ್ಲವೆ.

 

ಇದು ಕೆಲವೇ ಟಿಪ್ಸ್.

 

 

 

Rating
No votes yet

Comments