ಗಾದೆಮಾತುಗಳು............
ಗಾದೆ ಮಾತುಗಳು ಮತ್ತು ನುಡಿಮುತ್ತುಗಳು.........
ಈ ಕೆಳಗಿನ ಎಲ್ಲಾ ಗಾದೆಮಾತುಗಳನ್ನು ನಮ್ಮ ಈಗಿನ ವ್ಯವಹಾರ ಮಾಡುವಾಗ ಗಮನದಲ್ಲಿಟ್ಟುಕೊಂಡಲ್ಲಿ ಅನುಕೂಲವಾಗುವುದು. ಈಗ ಹಳೆಯ ಮಾತು ಹಳೆಯ ಜನರೆಂದರೆ ತುಂಬಾ ಅಲಕ್ಷ್ಯ ಮಾಡುವರು.ಆದ್ದರಿಂದ ಅವರಿಗೆ ಹಾನಿ ಗೊತ್ತಿಲ್ಲದೆ ಆಗುತ್ತದೆ. ಕಾರಣ ಎಲ್ಲರೂ ಇಂಥವುಗಳನ್ನು ಸಮಯಕ್ಕೆ ಸರಿಯಾಗಿ
ಬಳಸಿದಲ್ಲಿ ಉತ್ತಮ. ಜೊತೆಗೆ ಎಲ್ಲ ಹಿರಿಯರಿಗೆ ಮಾನ್ಯತೆ ಕೊಟ್ಟು ಗೌರವದಿಂದ ನೋಡಿಕೊಳ್ಳುವುದು ನಮ್ಮೆಲ್ಲರ ಮುಖ್ಯ ಕರ್ತವ್ಯವಾಗಿದೆ. ಇದರಂತೆ ಜಾನಪದ ಸಾಹಿತ್ಯಕ್ಕೂ ಮನ್ನಣೆ ಕೊಡಬೇಕು. ಆದ್ದರಿಂದಲೇ ನಾನು ಎಲ್ಲರಿಗೂ ಗೊತ್ತಿದ್ದ ಗಾದೆಮಾತುಗಳನ್ನು ಮತ್ತೊಮ್ಮೆ ಪ್ರಕಟಿಸಿರುವೆ.
ಹೊತ್ತು ಹೋದರೆ ಮತ್ತೆ ಬಾರದು.
ಮಾತುಆಡದರೆ ಹೋಯಿತು, ಮುತ್ತು ಒಡೆದರೆ ಹೋಯಿತು.
ಸಮುದ್ರದ ದಂಡೆ ಕಾಯಬೇಕು, ಮಹಾತ್ಮರ ಬಾಯಿ ಕಾಯಬೇಕು.
ಮುತ್ತಿಗಿಂತ ಹೊತ್ತು ಉತ್ತಮ. ಮಾತಿಗಿಂತ ಕೃತಿಯೇ ಮೇಲು.
ಎನಗಿಂತ ಕಿರಿಯರಿಲ್ಲ, ಶಿವ ಭಕ್ತರಿಗಿಂತ ಹಿರಿಯರಿಲ್ಲ.
ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ.
ಹುಚ್ಚಿಯಾದರೂ ತಾಯಿ, ನೀರಾದರೂ ಮಜ್ಜಿಗೆ.
ಮಾತು ಬೆಳ್ಳಿ, ಮೌನ ಬಂಗಾರ.
ಅಂಗಾಲಿಗೆ ಹೇಸಿಗೆ ಇಲ್ಲ, ಕರುಳಿಗೆ ನಾಚಿಕೆ ಇಲ್ಲ.
ಹಂಗಿನ ಅರಮನೆಗಿಂತ ವಿಂಗಡದ ಗುಡಿ ಲೇಸು.
ಅತ್ತೆಯ ಮನೆಯಲ್ಲಿ ಮುತ್ತಾಗಿ ಇರಬೇಕು.
ಕಾಯುವವನಿಗೆ ಬಿಟ್ಟರೂ, ಕಟ್ಟುವವನಿಗೆ ಬಿಡಲಾಗದು.
ಬೆಳ್ಳಗಿರುವುದೆಲ್ಲಾ ಹಾಲಲ್ಲ.
ಪ್ರತ್ಯಕ್ಷವಾಗಿ ಕಂಡರೂ, ಪ್ರಮಾಣಿಸಿ ನೋಡಬೇಕು.
ಕೈ ಕೆಸರಾದರೆ,ಬಾಯಿ ಮೊಸರು.
ಮಾಡಿದ್ದುಣ್ಣೊ ಮಹರಾಯ, ಬಿತ್ತಿದ್ದನ್ನು ಬೆಳೆ.
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು;
ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ
ಬೆಳೆಯುವ ಸಿರಿ ಮೊಳಕೆಯಲ್ಲಿ
ಹುಟ್ಟುಗುಣ ಸುಟ್ಟರೂ ಹೋಗದು.
ಬೇಕೆಂಬುದು ಬಡತನ, ಸಾಕೆಂಬುದು ಸಿರಿತನ.
ಕಳ್ಳನ ಜೀವ ಹುಳ್ಳ ಹುಳ್ಳಗೆ.
ಕುಂಬಳಕಾಯಿ ಕಳ್ಳನೆಂದರೆ, ಹೆಗಲು ಮುಟ್ಟಿ ನೋಡಿಕೊಂಡ.
ಕತ್ತೆಗೇನು ಗೊತ್ತು ಕಸ್ತೂರಿಯ ವಾಸನೆ.
ಹುಚ್ಚಿಗೆ ತವರೇನು. ಅತ್ತೆಮನೆಯೇನು?
ಆಳಾಗಿ ದುಡಿ, ಅರಸಾಗಿ ಉಣ್ಣು.
ಗಾಳಿ ಬಿಟ್ಟಾಗ ತೂರಿಕೊ.
ನೀರಿಳಿಯದ ಗಂಟಲಲ್ಲಿ ಕಡುಬು ತುರಿಕಿದಂತಾಯಿತು.(ಮುದ್ದಣ್ಣ ಮನೋರಮೆಯರ ಸಲ್ಲಾಪ ಎಂಬ ಪುಸ್ತಕದಿಂದ)
ಹನಿ ಹನಿ ಗೂಡಿದರೆ ಹಳ್ಳ, ತೆನೆ ತೆನೆ ಗೂಡಿದರೆ ಬಳ್ಳ..
ಕಾಸಿದ್ರೆ ಕೈಲಾಸ.
ಹಾಸಿಗೆ ಇದ್ದಷ್ಟು ಕಾಲು ಚಾಚು.
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.
ಕರಿಮಣಿಯ ಸರದಲ್ಲಿ ಹವಳವನ್ನು ಕೊದಂತೆ.
ಅಂಬುಜಾ ಜೋಶಿ