ಗಾಳಿ ತಂಗಾಳಿಯಾದೀತು!!!
ಸಖೀ,
ಇಂದು ನಿನ್ನ
ದರುಶನವಾಗಿಲ್ಲವೆಂಬ
ಮುನಿಸು ನನಗಿದ್ದಷ್ಟೇ
ಆ ಸೂರ್ಯನಿಗೂ
ಇದೆ ನೋಡು,
ಅದಕ್ಕೇ ಮರೆಯಾಗಿ
ಕೂತಿದ್ದಾನೆ
ಕೋಪಿಸಿಕೊಂಡು;
ನೀನಿಂದು ಎರಡು
ಸವಿಮಾತ ಆಡಿಲ್ಲವೆಂಬ
ಬೇಸರ ನನಗಿದ್ದಷ್ಟೇ
ಬೀಸುತ್ತಿರುವ ಗಾಳಿಗೂ ಇದೆ,
ನನ್ನ ಉಸಿರು ಬಿಸಿಯಾಗಿರುವಂತೆ
ಆ ಗಾಳಿಯಲೂ ಇಂದು
ಎಂದಿಲ್ಲದ ರೋಷವಿದೆ
ಕಂಡಿಲ್ಲದ ಬಿಸಿ ಇದೆ;
ಸಖೀ,
ಬಂದು ಬಿಡು
ಸೂರಿನಡಿಯಿಂದಾಚೆಗೆ,
ನಿನ್ನ ಕಂಡ ನಾನು
ತೃಪ್ತಿ ಪಡುವಂತೆ,
ಬಂದಾನು ಮುನಿಸ ಮರೆತು
ಸೂರ್ಯನೂ ಮೋಡಗಳ
ಮರೆಯಿಂದಾಚೆಗೆ;
ನೀ ನುಡಿದರೆ ನನ್ನ
ಕಿವಿಗಳಲಿ ಒಂದೆರಡು
ಸವಿಮಾತನಿಂದು,
ಈ ನನ್ನ ಮನವೂ ತಣಿದೀತು,
ಮಾತ ಕೇಳಿಸಿಕೊಂಡ
ಆ ಗಾಳಿಯೂ ತಣಿದು
ತಂಗಾಳಿಯಾದೀತು!
*-*-*-*-*-*-*-*
Rating
Comments
ಉ: ಗಾಳಿ ತಂಗಾಳಿಯಾದೀತು!!!
In reply to ಉ: ಗಾಳಿ ತಂಗಾಳಿಯಾದೀತು!!! by vinideso
ಉ: ಗಾಳಿ ತಂಗಾಳಿಯಾದೀತು!!!
ಉ: ಗಾಳಿ ತಂಗಾಳಿಯಾದೀತು!!!
In reply to ಉ: ಗಾಳಿ ತಂಗಾಳಿಯಾದೀತು!!! by bhavanilokesh mandya
ಉ: ಗಾಳಿ ತಂಗಾಳಿಯಾದೀತು!!!
ಉ: ಗಾಳಿ ತಂಗಾಳಿಯಾದೀತು!!!
In reply to ಉ: ಗಾಳಿ ತಂಗಾಳಿಯಾದೀತು!!! by n.nagaraja she…
ಉ: ಗಾಳಿ ತಂಗಾಳಿಯಾದೀತು!!!
ಉ: ಗಾಳಿ ತಂಗಾಳಿಯಾದೀತು!!!
In reply to ಉ: ಗಾಳಿ ತಂಗಾಳಿಯಾದೀತು!!! by malathi shimoga
ಉ: ಗಾಳಿ ತಂಗಾಳಿಯಾದೀತು!!!
In reply to ಉ: ಗಾಳಿ ತಂಗಾಳಿಯಾದೀತು!!! by asuhegde
ಉ: ಗಾಳಿ ತಂಗಾಳಿಯಾದೀತು!!!
In reply to ಉ: ಗಾಳಿ ತಂಗಾಳಿಯಾದೀತು!!! by manjunathams
ಉ: ಗಾಳಿ ತಂಗಾಳಿಯಾದೀತು!!!
ಉ: ಗಾಳಿ ತಂಗಾಳಿಯಾದೀತು!!!
In reply to ಉ: ಗಾಳಿ ತಂಗಾಳಿಯಾದೀತು!!! by venkatakrishna.kk
ಉ: ಗಾಳಿ ತಂಗಾಳಿಯಾದೀತು!!!