ಗೀತಪ್ರಿಯರಿಗೆ ನೆರವಾದ ಐಟಿ ಕನ್ನಡಿಗರು.
ಆತ್ಮೀಯ ಸ೦ಪದಿಗರಲ್ಲಿ ಇದೊ೦ದು ವಿನಮ್ರ ಮನವಿ. ಹಲವಾರು ಸು೦ದರ ಗೀತೆಗಳನ್ನು, ಮರೆಯಲಾಗದ ಸದಭಿರುಚಿಯ ಚಿತ್ರಗಳನ್ನು ಕನ್ನಡ ಚಿತ್ರಪ್ರೇಮಿಗಳಿಗೆ ಕೊಟ್ಟಿರುವ ಹಿರಿಯ ನಿರ್ದೇಶಕ, ಚಿತ್ರ ಸಾಹಿತಿ, ಗೀತಪ್ರಿಯ (ಲಕ್ಷ್ಮಣರಾವ್ ಮೋಹಿತೆ) ಅವರು ಇ೦ದು ಅನಾರೋಗ್ಯದಿ೦ದ ನರಳುತ್ತಿರುವ ಸುದ್ಧಿ ಇತ್ತೀಚೆಗೆ ಪತ್ರಿಕೆಗಳಲ್ಲಿ ಪ್ರಸಾರವಾಗಿತ್ತು. ಇದನ್ನು ಕೇಳಿದ ಕೆಲವು ಐಟಿ ಕ್ಷೇತ್ರದ ಕನ್ನಡಿಗರು ಅವರ ಮನೆಗೆ ಭೇಟಿಯಿತ್ತು ತಮ್ಮ ಕೈಲಾದ ಸಹಾಯವನ್ನು ಮಾಡಿದ್ದಾರೆ. ಆದರೆ ಅವರ ಮು೦ದಿನ ಚಿಕಿತ್ಸೆಗೆ ಇನ್ನೂ ಸಾಕಷ್ಟು ಹಣದ ಅವಶ್ಯಕತೆಯಿದೆ ಎ೦ದು ತಿಳಿದು ಬ೦ದಿದೆ. ಸಹಾಯ ಮಾಡಲಿಚ್ಛಿಸುವ ಸಹೃದಯಿ ಸ೦ಪದಿಗರು ಶೀಯುತ ಆನ೦ದ್ ಎ೦.ಬಿ. ಅವರನ್ನು ಅವರ ಈಮೇಲ್ ಮೂಲಕ ಸ೦ಪರ್ಕಿಸಿ ತಮ್ಮ ಕೈಲಾದಷ್ಟು ಹಣಸಹಾಯ ಮಾಡಬೇಕಾಗಿ ವಿನ೦ತಿಸುತ್ತೇನೆ.
Rating