ಗುಜರಾತ್ ಮಾದರಿ !
ಗುಜರಾತ್ ಮಾದರಿ !
ಮೊನ್ನೆ ಮೊನ್ನೆ ನಮ್ಮವರೆಲ್ಲ ಕ್ರಿಕೆಟ್ ನಲ್ಲಿ ವಿಶ್ವಕಪ್ ಗೆದ್ದುಬಿಟ್ರು , ಎಲ್ಲೆಲ್ಲೂ ಜೈಕಾರ ! ಎಲ್ಲರು ಹೊಗಳಿದ್ವಿ ನಮ್ಮ ಆಳುವ ದೊರೆಗಳು ತಮ್ಮ ಆಸ್ಥಾವ ವಿದ್ವಾಂಸರನ್ನು ಅಕ್ಷರಲಕ್ಷ ಕೊಟ್ಟು ಸನ್ಮಾನ ಮಾಡೊ ರೀತೀಲಿ ಖುಷಿಪಟ್ಟು , ಒಬ್ಬಬ್ಬೊರು ತಮ್ಮ ಮನಸೋ ಇಚ್ಚೆ, ಅಥವ ತಮ್ಮ ಶಕ್ತ್ಯಾನುಸಾರ ಬಹುಮಾನಗಳನ್ನು ಘೋಷಿಸಿದರು. ಆಗ ಮುಖ್ಯಮಂತ್ರಿಗಳೆಲ್ಲ ಅವರವರ ರಾಜ್ಯದ ಆಟಗಾರರಿಗೆ ಇಷ್ಟು ಕೊಡ್ತೀನಿ ಅಷ್ಟು ಕೊಡ್ತೀನಿ ಅಂತ ಹೆಮ್ಮೆಯಿಂದ ಪತ್ರಿಕೆಗಳಲ್ಲಿ ಮಾಧ್ಯಮಗಳಲ್ಲಿ ಹೇಳಿಕೆ ಕೊಟ್ರು. ಗುಜರಾತಿನ ಮುಖ್ಯಮಂತ್ರಿಗಳು ತಮ್ಮ ರಾಜ್ಯಕ್ಕೆ ಸಂಭಂದ ಪಟ್ಟಂತೆ ಇಬ್ಬರು ಆಟಗಾರರ ಹೆಸರು ಹೇಳಿ ಅವರಿಗೆ ಪ್ರಶಸ್ತಿ ಕೊಡುವದಾಗಿ ತಿಳಿಸಿದರು. ಪ್ರಶಸ್ತಿಗೆ ಬೆಲೆ ಕಟ್ಟುವದು ತಪ್ಪು ಬಿಡಿ ಆದರೆ ಅದರೆ ಬೆಲೆ ಒಂದೆರಡು ಲಕ್ಷಗಳಿರಬಹುದು.
ಆದರೆ ನಮ್ಮ ವಿಶಾಲ ಕರ್ನಾಟಕದ ಸಹೃದಯಿ ದಾರಾಳಿ ಹಾಗು ಕೊಡುಗೈ ದಾನಿಯಾದ ಸನ್ಮಾನ್ಯ ಮುಖ್ಯಮಂತ್ರಿಗಳು ಮಾತ್ರ ಎಲ್ಲ ನಮ್ಮ ಆಟಗಾರರೆ ಎಂಬು ಉದಾತ್ತ ಮನೋಭಾವನೆಯಿಂದ ಎಲ್ಲ ಆಟಗಾರರಿಗು ಹಾಗು ವಿದೇಶಿ ಕೋಚು ಒಬ್ಬರನ್ನು ಸೇರಿಸಿ ಎಲ್ಲರಿಗೂ ಸಾರ್ವಜನಿಕ ಛತ್ರದಂತಿರುವ ಕರ್ನಾಟಕದ ಬೆಂಗಳೂರಿನಲ್ಲಿ ಸೈಟ್ ಕೊಡುವದಾಗಿ ಹೇಳಿಬಿಟ್ಟರು. ನಡುವೆ ಎಂದಿನಂತೆ ನಮ್ಮಲ್ಲಿ ತಂಟೆ ತಕರಾರು ಪ್ರಾರಂಭವಾದಾಗ ಮತ್ತೆ ತಮ್ಮ ಮಾತನ್ನು ಬದಲಾಯಿಸಿ ಸೈಟ್ ಇಲ್ಲ ಎಲ್ಲರಿಗೂ ತಲಾ ಇಪ್ಪತೈದು ಲಕ್ಷವಷ್ಟೆ ಅಂದರು. (ಪುಣ್ಯಕ್ಕೆ ಸೈಟ್ ಕೊಡುತ್ತೇನೆ ಅಂತ ಬೆಂಗಳೂರಿನ ಅಣ್ಣಮನ ಮೇಲೆ ಆಣೆ ಇಟ್ಟಿರಲಿಲ್ಲ). ಸರಿಯೆ ಈಗ ತಲಾ ಇಪತೈದು ಲಕ್ಷ ಹಾಗು ಅದ್ದೂರಿ ಸಮಾರಂಬ ನಡೆದಾಗ ಅದರ ಖರ್ಚೆಷ್ಟೊ ಯಾರಿಗು ತಿಳಿಯದು. ಉತ್ತರ ಕರ್ನಾಟಕದ ನೆರೆಪೀಡಿತರು ಎರಡು ವರ್ಷ ಪರಿಹಾರಕ್ಕಾಗಿ ಕಾಯುವ ಬದಲಿಗೆ ಅವರು ಒಂದು ಕ್ರಿಕೆಟ್ ಮ್ಯಾಚ್ ಏರ್ಪಡಿಸಿ ಅದಕ್ಕೆ ಮು.ಮ. ಯವರನ್ನು ಕರೆದಿದ್ದಲ್ಲಿ ! ಛೇ ! ನಮ್ಮವರಿಗೆ ಉಪಾಯಗಳೆ ಹೊಳೆಯದು !
ಸರಿಯೆ ನಮಗೆ ಯಾವಾಗಲು ಗುಜರಾತ್ ಮಾದರಿಯಾಗಬೇಕಿತ್ತಲ್ಲವೆ ! ನಮ್ಮ ರಾಜ್ಯದ ಆಟಗಾರನನ್ನು ಮಾತ್ರ [ಯಾರು ಇಲ್ಲ -:) ] ಕರೆದು ಸನ್ಮಾನಿಸಿದರೆ ಸಾಕಿತ್ತು
Comments
ಉ: ಗುಜರಾತ್ ಮಾದರಿ !