ಗುಡುಗು ಸಿಡಿಲಿನ ಮಳೆ ಹಿಡಿದ ಬೆಂಗಳೂರು
ಬೆಳಿಗ್ಗಿನಿಂದಲೇ ನನ್ನ ಡೆಸ್ಕ್ ಟಾಪಿನ ಮೇಲೆ ವೆದರ್ ರಿಪೋರ್ಟ್ ತಿಳಿಸುವ ಪುಟ್ಟ ಅಪ್ಲಿಕೇಶನ್ನು "ಥಂಡರ್ ಸ್ಟಾರ್ಮ್" ಎಂದೇ ಕಪ್ಪು ಮೋಡದ ಐಕಾನ್ ಸೂಚಿಸುತ್ತ ಮುಸುಕಹಾಕಿಕೊಂಡಿತ್ತು. ಮಳೆ ಬರುತ್ತಿದೆಯೋ ಏನೋ ಎಂದುಕೊಂಡು ಹೊರಬಂದು ಹಲವು ಸಾರಿ ನೋಡಿದರೂ ತಿಳಿ ಬಿಸಿಲೆ. ಅರೆರೆ, ಇದ್ಯಾವ 'forecast' ಎನ್ನುತ್ತ ಕೆಲಸ ಮುಂದುವರೆಸಿದ್ದೆ, ಸಾಯಂಕಾಲವಾಯ್ತು - ಗುಡುಗು ಮಿಂಚು ಶುರುವಾಗಿದೆ!
ಎರಡು ವರ್ಷಗಳ ಹಿಂದೆ ನನ್ನ ಬ್ಲಾಗಿನಲ್ಲಿ ಇದೇ ವಿಷಯವಾಗಿ ಬರೆದದ್ದು ನೆನಪಿಗೆ ಬಂತು ನನಗೆ. ಆಗ ಬೆರಳೆಣಿಕೆಯಷ್ಟು ಮಾತ್ರ ಜನ ಕನ್ನಡದಲ್ಲಿ ಬ್ಲಾಗಿಸುತ್ತಿದ್ದರು. ಗುಡುಗು, ಮಳೆಯ ಸಡಗರ ಕನ್ನಡದಲ್ಲಿ ಹೇಳಿಕೊಂಡಷ್ಟು ಚೆಂದವಾಗಿ ಇಂಗ್ಲೀಷಿನಲ್ಲಿ ಹೇಳಿಕೊಳ್ಳಲಾಗದು. ಕುತೂಹಲದ ವಿಷಯವೆಂದರೆ ಆಗ ಗುಡುಗಿದ್ದೆ ಮೇನಲ್ಲಿ, ಈ ಸಲ ಏಪ್ರಿಲ್ ನಲ್ಲಿ ಗುಡುಗು ಸಹಿತ ಮಳೆ ಪ್ರಾರಂಭವಾಗಿಬಿಟ್ಟಿದೆ. ಇತ್ತೀಚೆಗೆ ಹಿಂದಿನಂತೆ ಬರೆಯಲಾಗಲಿ, ಓದಲಾಗಲಿ ಹೆಚ್ಚು ಸಮಯವಾಗದ ಕಾರಣ [:http://hpnadig.net/blog/index.php/archives/2005/05/22|ಆ ಹಳೆಯ ಪುಟವನ್ನೇ ನಿಮಗೆ ಓದಲು ಕೊಟ್ಟು] ಈ ಬ್ಲಾಗ್ ಪೋಸ್ಟ್ ಮುಗಿಸುತ್ತಿದ್ದೇನೆ.
[ಸಂಪದದಲ್ಲಿ ಈಗ ನಿಮ್ಮ ಬ್ಲಾಗಿಗೆ ನಿಮಗಿಷ್ಟವಾದ ಹೆಸರೊಂದನ್ನು ಇಟ್ಟುಕೊಳ್ಳಬಹುದು. ಹೆಸರು ಬ್ಲಾಗಿನ ಮುಖಪುಟದಲ್ಲಿ ಕಾಣಸಿಗುತ್ತದೆ. ಈ ಸೌಲಭ್ಯ ಬಳಸಲು ನಿಮ್ಮ ಪ್ರೊಫೈಲಿಗೆ ತೆರಳಿ ಅಲ್ಲಿ ನಿಮ್ಮ ಬ್ಲಾಗಿಗೊಂದು ಹೆಸರೂ ಪುಟ್ಟ ಪರಿಚಯವನ್ನೂ ಸೇರಿಸಿಕೊಳ್ಳಿ. ಜೊತೆಗೆ ಹೊಸತಾಗಿ tagging ಸೌಲಭ್ಯ (ಬ್ಲಾಗ್ ಬರಹಗಳನ್ನು ವರ್ಗೀಕರಿಸಿಡಲು) ಸೇರಿಸಿದ್ದೇನೆ. ಸದಸ್ಯರು ಸದುಪಯೋಗಪಡಿಸಿಕೊಳ್ಳುವರು ಎಂದು ಆಶಿಸುತ್ತೇನೆ.]
Comments
ಉ: ಗುಡುಗು ಸಿಡಿಲಿನ ಮಳೆ ಹಿಡಿದ ಬೆಂಗಳೂರು