ಗುರಿಯ ಹುಡುಕುವುದೇ ಗುರಿಯಾದಾಗ...
ರಸ್ತೆಬದಿಯಲ್ಲಿ ನಿಂತ ನಾಯಿಗೆ ತನ್ನ ಬಾಲದ ಮೇಲೆ ಕುಳಿತ ನೊಣವನ್ನು ಹಿಡಿದು ಜಜ್ಜಿ ಹಾಕುವ ಸಿಟ್ಟು ಬಂದಿದೆ.. ಬೊಗಳುತ್ತದೆ.. ಇಲ್ಲ.. ನೊಣ ಏಳುವುದಿಲ್ಲ.. ಬಾಯಲ್ಲಿ ಕಚ್ಚಿಬಿಡುವ ಆಲೋಚನೆ ಬರುತ್ತದೆ.. ನಾಯಿ ತನ್ನ ಬಾಲದ ತುದಿಯನ್ನು ಮುಟ್ಟಲು ತಿರುಗಿದೆ.. ಬಾಲ ಸಿಗುತ್ತಿಲ್ಲ.. ಇನ್ನು ಸ್ವಲ್ಪ ಎಡಕ್ಕೆ ತಿರುಗಿದೆ.. ಬಾಲವೂ ತಿರುಗುತ್ತದೆ.. ಮತ್ತೆ ತಿರುಗುತ್ತದೆ.. ಬಾಲವೂ ಜೊತೆಗೇ ತಿರುಗುತ್ತದೆ.. ತಿರುಗಿ ತಿರುಗಿ ಸುಸ್ತಾಗುತ್ತದೆ.. ನೊಣ ಅಷ್ಟರಲ್ಲಿ ಹಾರಿ ಹೋಗಿರುತ್ತದೆ.. ನಾಯಿಗೆ ತಾನೆಷ್ಟೋ ದೂರ ಕ್ರಮಿಸಿದ ಅನುಭವವಾಗುತ್ತದೆ.. ಆದರೆ ತನ್ನ ಜಾಗದಲ್ಲೇ ಇದ್ದದ್ದು ನೋಡಿ ಬೇಸರವಾಗುತ್ತದೆ..
ಪಕ್ಕದಲ್ಲಿ ತನ್ನದೇ ನೆರಳು ಕಾಣುತ್ತದೆ.. ಅದನ್ನು ಇನ್ಯಾವುದೋ ಪ್ರಾಣಿ ಎಂದು ತಿಳಿದು ಮತ್ತೆ ಬೊಗಳುತ್ತದೆ.. ಸ್ವಲ್ಪ ದೂರ ಸರಿದು ನಿಲ್ಲುತ್ತದೆ.. ಅದು ತನ್ನ ಬೆನ್ನಿಗೇ ಇರುವುದ ಕಂಡು ಭಯವಾಗುತ್ತದೆ.. ಹೆದರಿ ಹೆದರಿ ಓಡಲು ಪ್ರಾರಂಭಿಸುತ್ತದೆ.. ನೆರಳೂ ಅದನ್ನು ಬೆನ್ನಟ್ಟುತ್ತದೆ.. ನಾಯಿ ಇನ್ನೂ ಜೋರಾಗಿ ಓಡುತ್ತದೆ.. ರಸ್ತೆಯಲ್ಲಿ ಕರೆಂಟು ಹೋಗುತ್ತದೆ.. ಬೆಳಕಿಲ್ಲದ ರಾತ್ರಿಯಲ್ಲಿ ನೆರಳು ಮಾಯವಾಗುತ್ತದೆ.. ನಾಯಿಗೆ ಖುಷಿ.. ನೆರಳಿಂದ ತಪ್ಪಿಸಿಕೊಂಡ ಧನ್ಯತಾ ಭಾವ.. ಅದೇ ಸಂತೋಷದಲ್ಲಿ ಇಡೀ ದಿನವನ್ನು ಕತ್ತಲಲ್ಲೇ ಕಳೆಯುತ್ತದೆ..
ಮನುಷ್ಯ ಎಲ್ಲವನ್ನೂ ಬಯಸುತ್ತಾನೆ.. ತಾನಲ್ಲದ ಏನೋ ಒಂದು ಆಗಲು ಹೋಗಿ ಇನ್ನೇನೋ ಆಗಿ, ಕೊನೆಗೆ ಆಗಿದ್ದೆಲ್ಲವೂ ಇಲ್ಲವಾಗಿ ಏನೂ ಆಗದೆ ಉಳಿದುಬಿಡುತ್ತಾನೆ..ಗುರಿಯನ್ನು ಹುಡುಕುವುದೇ ಒಂದು ಗುರಿಯಾದಾಗ ಗುರಿ ಮುಟ್ಟುವುದು ಸಾಧ್ಯವೇ ಇಲ್ಲ.. ಅದು ತನ್ನ ಸುತ್ತಲೂ ಸುತ್ತುತ್ತಿರುವ ನಾಯಿಯಂತೆ.. ಅದೂ ನೊಣಕ್ಕಾಗಿ.. ಕೊನೆಯಲ್ಲಿ ಕ್ರಮಿಸುವುದು ಸೊನ್ನೆ..
ಈ ಸೊನ್ನೆಗೆ ಕಾರಣ ಹುಡುಕುತ್ತಾ, ಸಿಕ್ಕ ಕಾರಣಗಳಿಗೆಲ್ಲಾ ಇನ್ನೊಂದು ಕಾರಣ ಹುಡುಕಿ ಅದನ್ನು ಮರೆಮಾಚಿ, ಕೊನೆಗೆ ಅದಕ್ಕೇ ಹೆದರಿ ಓಡುವ ಪರಿಸ್ಥಿತಿ ಮತ್ತು ’ತಾನು ಗೆದ್ದಿದ್ದೇನೆ.. ತನ್ನ ಗುರಿತಲುಪಿದ್ದೇನೆ’ ಎಂಬ ಹುಂಬತನದ ಘೋಷಣೆಯೊಂದಿಗೆ ಕತ್ತಲೆಯಲ್ಲೇ ಜೀವನ ಕಳೆಯುವ ಬಾಳು ನಮ್ಮದಾಗದಿರಲಿ..

Rating
Comments
ಉ: ಗುರಿಯ ಹುಡುಕುವುದೇ ಗುರಿಯಾದಾಗ...
In reply to ಉ: ಗುರಿಯ ಹುಡುಕುವುದೇ ಗುರಿಯಾದಾಗ... by Harish Athreya
ಉ: ಗುರಿಯ ಹುಡುಕುವುದೇ ಗುರಿಯಾದಾಗ...
ಉ: ಗುರಿಯ ಹುಡುಕುವುದೇ ಗುರಿಯಾದಾಗ...
In reply to ಉ: ಗುರಿಯ ಹುಡುಕುವುದೇ ಗುರಿಯಾದಾಗ... by asuhegde
ಉ: ಗುರಿಯ ಹುಡುಕುವುದೇ ಗುರಿಯಾದಾಗ...
In reply to ಉ: ಗುರಿಯ ಹುಡುಕುವುದೇ ಗುರಿಯಾದಾಗ... by bhatkartikeya
ಉ: ಗುರಿಯ ಹುಡುಕುವುದೇ ಗುರಿಯಾದಾಗ...
ಉ: ಗುರಿಯ ಹುಡುಕುವುದೇ ಗುರಿಯಾದಾಗ...
In reply to ಉ: ಗುರಿಯ ಹುಡುಕುವುದೇ ಗುರಿಯಾದಾಗ... by shreeshum
ಉ: ಗುರಿಯ ಹುಡುಕುವುದೇ ಗುರಿಯಾದಾಗ...
ಉ: ಗುರಿಯ ಹುಡುಕುವುದೇ ಗುರಿಯಾದಾಗ...
In reply to ಉ: ಗುರಿಯ ಹುಡುಕುವುದೇ ಗುರಿಯಾದಾಗ... by gopaljsr
ಉ: ಗುರಿಯ ಹುಡುಕುವುದೇ ಗುರಿಯಾದಾಗ...
ಉ: ಗುರಿಯ ಹುಡುಕುವುದೇ ಗುರಿಯಾದಾಗ...
In reply to ಉ: ಗುರಿಯ ಹುಡುಕುವುದೇ ಗುರಿಯಾದಾಗ... by vinutha.mv
ಉ: ಗುರಿಯ ಹುಡುಕುವುದೇ ಗುರಿಯಾದಾಗ...
ಉ: ಗುರಿಯ ಹುಡುಕುವುದೇ ಗುರಿಯಾದಾಗ...