ಗುರುಗ್ರಹ, ಅತಿ ಹತ್ತಿರದಲ್ಲಿ

ಗುರುಗ್ರಹ, ಅತಿ ಹತ್ತಿರದಲ್ಲಿ

ಇವತ್ತು ಜುಲೈ ೯, ೨೦೦೮.

ಭೂಮಿ ಮತ್ತು ಗುರುಗ್ರಹಗಳು ಅವುಗಳ ಹಾದಿಯಲ್ಲಿ ಸುತ್ತುತ್ತಿರುವಾಗ, ಅತಿ ಹತ್ತಿರಕ್ಕೆ ಬಂದಿವೆ ( ಇದಕ್ಕೆ planetary opposition ಎಂಬ ಹೆಸರಿದೆ - ಕನ್ನಡದಲ್ಲಿ ಏನು ಹೇಳುವುದೋ ತೋರಲಿಲ್ಲ).

ಹಾಗಾಗಿ, ಗುರುವು ಸೂರ್ಯ ಮುಳುಗುವ ವೇಳೆಗೆ ಹುಟ್ಟುತ್ತಾನೆ, ಹಾಗೂ ಸೂರ್ಯ ಹುಟ್ಟುವ ವೇಳೆಗೆ ಮುಳುಗುತ್ತಾನೆ.

ಅಷ್ಟೇ ಅಲ್ಲದೆ, ವರ್ಷದಲ್ಲಿ ಅತಿ ಹೆಚ್ಚು ಪ್ರಕಾಶಮಾನವಾಗಿಯೂ ಕಾಣುತ್ತಾನೆ. ಸೂರ್ಯ ಮುಳುಗಿದ ನಂತರ, ಪೂರ್ವ ಆಕಾಶದಲ್ಲಿ ಕಾಣುವ ಬಿಳೀ ಕಾಯವೇ ಗುರು.

ಈ ಘಟನೆಯ ಬಗ್ಗೆ ಇನ್ನು ಹೆಚ್ಚಿನ ವಿವರಗಳಿಗೆ, ಗುರುತಿಸಲು ಬೇಕಾದ ಆಕಾಶ ನಕ್ಷೆಗೆ,  ನನ್ನ ಇಂಗ್ಲಿಷ್ ಬ್ಲಾಗಿನಲ್ಲಿರುವ ಈ ಬರಹವನ್ನು ನೋಡಿ.

-ಹಂಸಾನಂದಿ

Rating
No votes yet

Comments