ಗುರು ಪೂರ್ಣಿಮೆ-2023 !

ಗುರು ಪೂರ್ಣಿಮೆ-2023 !

ಚಿತ್ರ

ಗುರು ಪೂರ್ಣಿಮೆ ಹಿಂದೂಗಳ ಧಾರ್ಮಿಕ ಆಚರಣೆ. 

2023ರ ಗುರು ಪೂರ್ಣಿಮೆಯ ಸಮಯ ಹಾಗೂ ದಿನಾಂಕಹಿಂದೂ ಕ್ಯಾಲೆಂಡರ್‌ ಪ್ರಕಾರ ಆಷಾಢ ಮಾಸದ ಹುಣ್ಣಿಮೆಯ ದಿನ ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಇದು ಸಾಮಾನ್ಯವಾಗಿ ಗ್ರೆಗೋರಿಯನ್‌ ತಿಂಗಳ ಜೂನ್‌ ಅಥವಾ ಜುಲೈ ತಿಂಗಳಿನಲ್ಲಿ ಬರುತ್ತದೆ. ಈ ವರ್ಷ ಜುಲೈ 3, ಸೋಮವಾರದಂದು ಗುರು ಪೂರ್ಣಿಮಾ ಆಚರಣೆ ಇದೆ. ದೃಕ್‌ ಪಂಚಾಂಗದ ಪ್ರಕಾರ ಪೂರ್ಣಿಮಾ ತಿಥಿ ಅಥವಾ ಹುಣ್ಣಿಮೆಯ ಅವಧಿಯು ಜುಲೈ 2 ರಂದು ರಾತ್ರಿ 8.20ಕ್ಕೆ ಆರಂಭವಾಗುತ್ತದೆ ಮತ್ತು ಜುಲೈ 3 ರಂದು ಸಂಜೆ 5.08ಕ್ಕೆ ಕೊನೆಗೊಳ್ಳುತ್ತದೆ.

ಗುರು ಪೂರ್ಣಿಮೆ ಎರಡು ಪದಗಳ ಸಂಯೋಜನೆಯಾಗಿದೆ. ಗುರುವು ಸಂಸ್ಕೃತದ ಮೂಲ ಪದಗಳಾದ ಗು ಮತ್ತು ರು ಗಳಿಂದ ಬಂದಿದೆ. ಗು ಎಂದರೆ ಕತ್ತಲೆ ಅಥವಾ ಅಜ್ಞಾನ, ರು ಎಂದರೆ ಬಿಡಿಸುವವನು ಎಂದರೆ ಗುರು ಎಂದರೆ ಕತ್ತಲೆ ಅಥವಾ ಅಜ್ಞಾನದಿಂದ ಬಿಡಿಸುವವನು ಎಂದರ್ಥ. .

ಗುರು ಪೂರ್ಣಿಮೆಯ ಮೂಲ

ಗುರು ಪೂರ್ಣಿಮೆಯು ಹಿಂದೂ ಪುರಾಣಗಳಲ್ಲಿ ಶ್ರೇಷ್ಠ ಗುರುಗಳಲ್ಲಿ ಒಬ್ಬರೆನಿಸಿದ ಋಷಿ ವೇದ ವ್ಯಾಸ ಮುನಿಗಳ  ಜನ್ಮಕ್ಕೆ ಸಂಬಂಧಿಸಿದ್ದು. ಪುರಾಣ ಕಥೆಗಳ ಪ್ರಕಾರ ವ್ಯಾಸರು ಈ ದಿನದಂದು ಜನಿಸಿದರು. ಅವರು ಮಹಾಭಾರತವನ್ನು ರಚಿಸಿದ ಕವಿಯೂ ಹೌದು. ವೇದಗಳನ್ನು ನಾಲ್ಕು ವಿಭಾಗಗಳಲ್ಲಿ ವಿಂಗಡಿಸಿ ಕೀರ್ತಿಯು ಇವರಿಗೆ ಸಲ್ಲುತ್ತದೆ. ಗುರು ಪೂರ್ಣಿಮೆಯು ಬುದ್ಧಿವಂತಿಕೆ, ಆಧ್ಯಾತ್ಮಿಕ, ಸಾಹಿತ್ಯಿಕ ಜ್ಞಾನಕ್ಕೆ ವ್ಯಾಸ ಮಹರ್ಷಿಗಳು ನೀಡಿದ ಕೊಡುಗೆಗಳನ್ನು ಗೌರವಿಸುವ ದಿನವಾಗಿದೆ. ಜ್ಞಾನವನ್ನು ಹರಡುವ ಮತ್ತು ತಮ್ಮ ಶಿಷ್ಯರನ್ನು ಜ್ಞಾನದ ಹಾದಿಯಲ್ಲಿ ಮಾರ್ಗದರ್ಶನ ಮಾಡುವ ಎಲ್ಲಾ ಗುರುಗಳು ಮತ್ತು ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುವ ಸಮಯವೂ ಇದಾಗಿದೆ.

ಗುರು ಪೂರ್ಣಿಮೆ ಆಚರಣೆಯ ಹಿಂದಿನ ಇತರ ಕಥೆಗಳು

* ಉತ್ತರ ಪ್ರದೇಶದ ಸಾರನಾಥದಲ್ಲಿ ಈ ದಿನ ಬುದ್ಧನು ತನ್ನ ಮೊದಲ ಧರ್ಮೋಪದೇಶವನ್ನು ನೀಡಿದ ನೆನಪಿಗಾಗಿ ಬೌದ್ಧರು ಈ ದಿನವನ್ನು ಆಚರಿಸುತ್ತಾರೆ.

* ಜೈನ ಸಂಪ್ರದಾಯದಲ್ಲಿ ಗುರು ಪೂರ್ಣಿಮಾವನ್ನು ಟ್ರಿನೋಕ್‌ ಗುಹಾ ಪೂರ್ಣಿಮಾ ಎಂದೂ ಕರೆಯಲಾಗುತ್ತದೆ.* ಯೋಗ ಸಂಪ್ರದಾಯದ ಪ್ರಕಾರ, ಈ ದಿನವು ಶಿವನು ಸುಪ್ತಋಷಿಗಳಿಗೆ ಯೋಗವನ್ನು ಕಲಿಸಲು ಪ್ರಾರಂಭಿಸಿದ ಮತ್ತು ಅಧಿಕೃತವಾಗಿ ಮೊದಲ ಗುರುವಾಗ ಕ್ಷಣವನ್ನು ಸೂಚಿಸುತ್ತದೆ.

* ಈ ದಿನ ಹಿಂದೂ ಸನ್ಯಾಸಿಗಳು ತಮ್ಮ ಗುರುಗಳಿಗೆ ಪೂಜೆ ಸಲ್ಲಿಸುತ್ತಾರೆ.

* ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಅಧ್ಯಯನ ಮಾಡುವ ಗುರು ಶಿಷ್ಯ ಪರಂಪರೆಯ ಅನುಯಾಯಿಗಳು ಈ ಪವಿತ್ರ ದಿನವನ್ನು ಆಚರಿಸುತ್ತಾರೆ.

ಹಿಂದೂ ಸಂಸ್ಕೃತಿಯ ಶ್ರೇಷ್ಠತೆಯಲ್ಲಿನ ಹಲವುಮಜಲುಗಳಲ್ಲಿ‘ಗುರು-ಶಿಷ್ಯ ಪರಂಪರೆಯು ಬಹಳ ಮುಖ್ಯವೆಂದು ಪರಿಗಣಿಸಲ್ಪಟ್ಟಿದೆ. 

‘ವಸಿಷ್ಠಋಷಿಗಳು-ಶ್ರೀರಾಮಚಂದ್ರ, ‘ಸಾಂದೀಪನಿಋಷಿ-ಶ್ರೀಕೃಷ್ಣ, ‘ಆರ್ಯಚಾಣಕ್ಯ-ಚಂದ್ರಗುಪ್ತ ಇವರೆಲ್ಲ ಆದರ್ಶ ಗುರು-ಶಿಷ್ಯಗಳ ಉದಾಹರಣೆಯಾಗಿದ್ದಾರೆ. ಗುರು ಮತ್ತು ಶಿಷ್ಯ ಇವರಿಬ್ಬರು ದೀಪದಂತೆ ಇರುತ್ತಾರೆ. ಎಣ್ಣೆಬತ್ತಿ ಇರದಿರುವ ದೀಪವನ್ನು ಒಂದು ವೇಳೆ ೧೦೦ ಬಾರಿ ಪ್ರಕಾಶಮಾನವಾಗಿರುವ ದೀಪದ ಹತ್ತಿರ ಕೊಂಡೊಯ್ದರೂ, ಅದು ಬೆಳಕು ಕೊಡುವುದಿಲ್ಲ. ಶಿಷ್ಯನ ದೀಪದಲ್ಲಿನ ಎಣ್ಣೆ ಬತ್ತಿಯೆಂದರೆ ಅವನ ನಿಷ್ಠೆ, ಶ್ರದ್ಧೆ ಮತ್ತು ಭಕ್ತಿ !

ಗುರುಗಳ ಉಪದೇಶದ ಅನುಕರಣೆ (ಅನುಸರಿಸಬೇಕು) ಮಾಡಬೇಕು !

ಗುರುಗಳ ಶ್ರೇಷ್ಠತೆ

ಗು ಎಂದರೆ ಸಂಸ್ಕೃತಭಾಷೆಯಲ್ಲಿ ಕತ್ತಲು ಎಂದು ಅರ್ಥ.  ರು ಎಂದರೆ ಅದನ್ನು ಹೋಗಲಾಡಿಸಲು ಸಹಾಯ ಮಾಡುವವವನು ಎಂದರ್ಥ. 

अज्ञान तिमिरान्धस्य ज्ञानाञ्जन शलाकया । 

चक्षुरुन्मीलितं येन तस्मै श्री गुरवे नमः ॥

ಹಾಗಾಗಿ, ಅಜ್ಞಾನವೆಂಬ ಕತ್ತಲೆಯಿಂದ ಅಂಧನಾದವನ ಕಣ್ಣನ್ನು, ಜ್ಞಾನವೆಂಬ ಅನುಲೇಪನದ ಶಲಾಕೆಯಿಂದ ಕಣ್ತೆರೆಸುವವನೇ ಗುರು. ಅಂತಹ ಗುರುವಿಗೆ ನಮಸ್ಕಾರ.

೧. ಗುರುಗಳ ಮಹತ್ವದ ವರ್ಣನೆಯನ್ನು ಮಾಡುವುದೆಂದರೆ ಶಬ್ದಗಳ ಆಚೆಗಿದೆ.

೨. ಗುರುಗಳು, ‘ಆಧ್ಯಾತ್ಮಿಕ ವಾದವಿವಾದದಲ್ಲಿ ಶಿಷ್ಯನು ನನ್ನನ್ನು ಯಾವಾಗಲೂ ಸೋಲಿಸಬೇಕು ಎನ್ನುವ ಕನಸು ಕಾಣುತ್ತಿರುತ್ತಾರೆ. 

ಇಂದಿನ ಗುರುಪೂರ್ಣಿಮೆಯ  ಶುಭ ದಿನದಂದು ಆದಿಗುರು ಸದಾಶಿವರಿಂದ ನನ್ನ ಎಲ್ಲಾ ಗುರುಗಳು ಮತ್ತು ಅವರ ಗುರುಗಳು, ಅವರ ಗುರುಗಳು, ಮತ್ತು ಇಡೀ ಗುರುಪರಂಪರೆಯನ್ನು ಸ್ಮರಿಸುತ್ತೇನೆ, ಗೌರವಿಸುತ್ತೇನೆ, ನಮಸ್ಕರಿಸುತ್ತೇನೆ, ಆದಿಗುರು ಸದಾಶಿವನಿಂದ ಹಿಡಿದು ನನ್ನ ಸ್ವಂತ ಗುರುವಿನವರೆಗೆ ಇಡೀ ಗುರುಪರಂಪರೆಯನ್ನು ಸ್ಮರಿಸುತ್ತೇನೆ, ಗೌರವಿಸುತ್ತೇನೆ, ಕೃತಜ್ಞತೆ ಸಲ್ಲಿಸುತ್ತೇನೆ ಮತ್ತು ಶರಣಾಗುತ್ತೇನೆ.

ಸದಾಶಿವನಿಂದ ಹಿಡಿದು ನಮಗೆ ಲಭ್ಯವಿರುವ  ಗುರುಗಳವರೆಗೆ ಇಡೀ ಗುರುಪರಂಪರೆಯನ್ನು ಪೂಜಿಸೋಣ ಮತ್ತು ನಮ್ಮನ್ನು ನಾವು ಅರ್ಪಿಸಿಕೊಳ್ಳಲು ಈ ಕ್ಷಣವನ್ನು ತೆಗೆದುಕೊಳ್ಳೋಣ. ಇದು ಗುರು ಮತ್ತು ಅವರ ಬೋಧನೆಗಳಿಗೆ ನಿಷ್ಠೆ, ಬದ್ಧತೆ, ಭೂಮಿಯ ಮೇಲಿನ ಎಲ್ಲ ಮಹತ್ತರವಾದ ಸಂಗತಿಗಳನ್ನು ಜೀವಂತವಾಗಿರಿಸುತ್ತದೆ. .  ಪ್ರಬುದ್ಧ ಜೀವನಶೈಲಿಯ ಪೂರ್ಣಗೊಳಿಸುವಿಕೆಯ ವಿಜ್ಞಾನ, ಅದು ಇನ್ನೂ ಭೂಮಿಗೆ ಲಭ್ಯವಿದ್ದರೆ, ಅದು ಇನ್ನೂ ಜೀವಂತವಾಗಿದ್ದರೆ, ನಾವು ಇನ್ನೂ ಆನಂದಿಸಲು ಸಾಧ್ಯವಾದರೆ ಇದು; ಇದು ಕೇವಲ ಗುರುಪರಂಪರೆಯಿಂದಾಗಿ ಎನ್ನುವುದು ಒಟ್ಟಾರೆ ಗುರುಪೂರ್ಣಿಮೆಯ ಅರ್ಥವಾಗಿದೆ. 

ಗುರುವಿನ ವಿಶೇಷಗುಣಗಳನ್ನು ನಾವು ಕಾಣಬಹುದಾಗಿದೆ. :

ಜೀವನದ ಸ್ತರದಲ್ಲಿ ಬರುವ ಎಲ್ಲಾ  ಕಲಾಮಾಧ್ಯಮಗಳು ದೈವೀಕ ಭಾವನೆಗಳಿಂದ ಒಡಗೂಡಿರುವುದು ಎಂಬ ಅರಿಕೆ ಮಾಡುವುದು ಗುರುವಿನ ಆದ್ಯ ಕರ್ತವ್ಯ.

ತನ್ನಶಿಷ್ಯರನ್ನು  ಮಕ್ಕಳಂತೆ ಕಂಡು ಅವರನ್ನು  ಸನ್ಮಾರ್ಗಕ್ಕೆ ಒಯ್ಯುವವನು.

ತಾನು ಕಷ್ಟಪಟ್ಟು ಅರ್ಜಿಸಿದ ಸುವಿದ್ಯೆಯನ್ನು  ನಿರ್ವಂಚನೆಯಿಂದ ಶಿಷ್ಯರಿಗೆಲ್ಲಾ ಧಾರೆಯೆರೆಯುವನು.

ನೃತ್ಯಕಲೆಯ ಮಾತುಬಂದಾಗ, ನೃತ್ಯಾಭಿನಯದ ಅರಿವು ಸುಲಭವಾಗಿ ಮನಮುಟ್ಟುವಂತೆ ತಿಳಿಸಿ ತನ್ಮೂಲಕ ಅವನ ಮನಸ್ಸನ್ನು ಆನಂದದೆಡೆಗೆ ಒಯ್ಯುವವನು.

ಬೋಧನೆ ಮಾತ್ರದಿಂದಲೇ ನೀತಿ ನಿಯಮಗಳ ಪಾಠಾಂತರ ಮಾಡದೆ ತಾನೂ ಸಹ ಕಾಯಾ ವಾಚಾ ಮನಸಾ ಇದರ ಕಟ್ಟುನಿಟ್ಟನ್ನು ಪಾಲಿಸಿ ಶಿಷ್ಯನಿಗೆ ದಾರಿ ದೀಪವಾಗುವವನು.

ಯಮ ನಿಯಮಾದಿಗಳನ್ನು ಅನುಸರಿಸುವಂತೆ ಮನಸ್ಸನ್ನು ಸನ್ಮಾರ್ಗಕ್ಕೆ ಒಯ್ಯವುದಕ್ಕೆ ತಕ್ಕ ಆಸನಾದಿಗಳನ್ನು ಸಾಧನೆ ಮಾಡಿಸುವವನು.

ಈ ಕಲೆಗಳು ಕೇವಲ ಮನೋರಂಜನೆ, ಕೀರ್ತಿಗಾಗಿ ಮಾತ್ರವಲ್ಲದೆ ಇದರ ಆಳವನ್ನು ಹೆಕ್ಕಲು ವೇದಾಂತ ಪಾಠಗಳಿಗೆ ಮನ ಒಲಿಸುವ ಜವಾಬ್ದಾರಿ ಗುರುವಿನದಾಗಿರುತ್ತದೆ.

ಮೇಲಿನ ವಾಕ್ಯಗಳು ಒಬ್ಬ ಸಮರ್ಥ ಗುರುವಿನ ನಡವಳಿಕೆಗಳನ್ನು ಸೂಚಿಸುವುದಾದರೆ, ಶಿಷ್ಯನ ನಡತೆ ಹೇಗಿರಬೇಕು? ಎನ್ನುವುದನ್ನು ಗಮನಿಸುವುದು ಮುಖ್ಯ ಗುರುವಿಗೆ ತಕ್ಕ ಶಿಷ್ಯನಾಗಿ ‘ಸೈ’ ಎನಿಸಿಕೊಳ್ಳಲಿಕ್ಕೆ ಶಿಷ್ಯನೂ ಸಿದ್ಧನಾಗಬೇಕು. ಹಾಗಿದ್ದಲ್ಲಿ ಅವನ / ಅವಳ ಗುಣಗಳು ಹೇಗಿರಬೇಕು? ಎನ್ನುವುದನ್ನು ಪರಿಶೀಲಿಸೋಣ 

ಜ್ಞಾನ ಜ್ಯೋತಿಯ ಚಲನೆ ಸಂಚಲನವಾಗಬೇಕಾದರೆ – ಶಿಷ್ಯನಿಗೆ ವಿನಯವಂತಿಕೆಯು ಬಹು ಮುಖ್ಯ. ತನ್ನಲ್ಲಿ ಭರವಸೆ, ಹಾಗೂ ಚುನಾಯಿಸಿಕೊಂಡ ಗುರುವಿನಲ್ಲಿ  ಭರವಸೆ, ಶ್ರದ್ಧೆ, ಭಕ್ತಿ ಇರಬೇಕು. 

ಚಿತ್ತ ಏಕಾಗ್ರತೆಯನ್ನು ಬೆಳೆಸಿಕೊಳ್ಳುವುದೇ ಮುಖ್ಯ ಗುರಿಯಾಗಿರಬೇಕು. ಗುರು ಬೋಧಿಸಿದ.  ವಿಷಯದ ಚಿಂತನೆ ಮಾಡುತ್ತಾ ಅದರಲ್ಲಿ ತನ್ನ ತನುಮನಗಳನ್ನು ಮುಡಿಪಾಗಿಡಬೇಕು. 

ದೇವರಲ್ಲಿ ಶರಣಾಗತ ತತ್ವವನ್ನು ಹೇಗೆ ಪಾಲಿಸುತ್ತೇವೆಯೋ, ಹಾಗೆಯೇ ಕಲಿಯುವ ಹಂತದಲ್ಲಿ ಗುರುವಿನೆಡೆಗೆ ಭಕ್ತಿಯಿಂದ ಸೇವೆ ಸಲ್ಲಿಸಿದಾಗ- ಅವರ ಮನದಾಳದ ಜ್ಞಾನ ಜ್ಯೋತಿಯ ಅರಿವು ಶಿಷ್ಯನಿಗೆ ವಿದ್ಯಾದಾನದ ಮೂಲಕ ಪ್ರವಹಿಸುತ್ತದೆ. 

ಕಲಿತ ಪಾಠಗಳನ್ನು ಅಡಿಪಾಯವಾಗಿಟ್ಟುಕೊಂಡು ಅದರ ವ್ಯಾಪ್ತಿಯನ್ನು  ಹಿಗ್ಗಿಸುತ್ತಾ, ಬೆಳೆಸುತ್ತಾ ತನ್ನ ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಳ್ಳುವುದೇ ಶಿಷ್ಯನ ಕರ್ತವ್ಯ. ಇದು ಗುರುವಿಗೆ ಕೊಡುವ ಗುರು ಕಾಣಿಕೆಯೂ ಹೌದು.

ಒಂದು ಕಟ್ಟಡವನ್ನು ಕಟ್ಟುವಾಗ ಅದರ ಅಡಿಪಾಯ ಎಷ್ಟರಮಟ್ಟಿಗೆ ಭದ್ರವಾಗಿರುತ್ತದೋ ಹಾಗೆಯೇ ಗುರು ಹಾಕಿಕೊಟ್ಟಿರುವ ಭದ್ರಬುನಾದಿಯ ವಿದ್ಯೆಯನ್ನು ಮುಚ್ಚಟೆಯಿಂದ ಕಾಪಾಡುತ್ತಾ ಬಂದಲ್ಲಿ ಗುರು-ಶಿಷ್ಯ ಪರಂಪರೆಯ ಧ್ಯೇಯ ಸಾರ್ಥಕವಾಗುತ್ತದೆ. 

Rating
Average: 4 (1 vote)