ಗೂಳಿ ಮತ್ತು ಕರಡಿ
ಗೂಳಿ ಮತ್ತು ಕರಡಿ
ಒಂದು ಚಿಕ್ಕ ಹಳ್ಳಿಯಂತ ಪಟ್ಟಣ. ಎಲ್ಲಿಂದಲೊ ಒಬ್ಬ ಬಂದು ಕಂಪನಿ ಪ್ರಾರಂಬಿಸಿದ. ಆದ ಯಾವುದೊ ಲ್ಯಾಬಿಗೆ ಕೋತಿಗಳನ್ನು ಒದಗಿಸುವ contract ಹಿಡಿದವನು. ಬೋರ್ಡ್ ಹಾಕಿದ ಒಂದು ಕೋತಿ ಹಿಡಿದು ತಂದು ಕೊಟ್ಟವರಿಗೆ 10 ರೂಪಾಯಿ ಕೊಡುವದಾಗಿ ಹೇಳಿದ. ಹಳ್ಳಿಯಲ್ಲೆಲ್ಲ ಗುಲ್ಲು, ಎಲ್ಲರು ಕೆಲಸ ಬಿಟ್ಟು ಕಾಡಿನಲ್ಲಿ ಕೋತಿ ಹಿಡಿಯಲು ಹೊರಟರು. ಮರುದಿನ ಕೋತಿಗೆ 20ರೂ ಕೊಡುತ್ತೇನೆ ಅಂದ. ಜನರಿಗೆ ಹುಚ್ಚು ಹಿಡಿದಂತಾಯ್ತು, ಎಲ್ಲರು ಕೋತಿಹಿಡಿಯುವರೆ ಇಪ್ಪತ್ತು ರೂಗಳನ್ನು ಪಡೆಯುವರೆ. ಮರುದಿನ 30 ರೂ ಎಂದ.
ವಾರ ಕಳೆದಿತ್ತು ನಾಳೆ ಒಂದು ಕೋತಿ ಹಿಡಿದು ತಂದು ಕೊಟ್ಟರೆ 100 ರೂಪಾಯಿ ಕೊಡುವದಾಗಿ ಬೋರ್ಡ್ ಹಾಕಿದ. ಕಾಡಿನಲ್ಲಿ ಕೋತಿಗಳೆ ಇಲ್ಲದಂತಾಗಿತ್ತು. ಜನರೆಲ್ಲ ಕಂಪನಿ ಬಾಗಿಲಲ್ಲೆ ನೆರೆದಿದ್ದರು. ಕಂಪನಿ ಒಡೆಯ ಊರಿಗೆ ಹೋಗಿದ್ದ. ಅದರ ಕೆಲಸಗಾರ ಮಾತ್ರ ಇದ್ದ. ಅವನು ಒಂದು ಯೋಜನೆ ಹೇಳಿದ. ನೀವು ತಂದ ಕೋತಿಗಳೆಲ್ಲ ಹೇಗು ಇನ್ನು ಪಂಜರಗಳಲ್ಲೆ ಇದೆ. ಯಜಮಾನನಿಗೆ ತಿಳಿಯುವದಿಲ್ಲ . ನಾನು ಅದನ್ನು ನಿಮಗೆ ಕೊಡುತ್ತೇನೆ. ನೀವು 75 ರೂ ನನಗೆ ಕೊಡಿ ಸಾಕು. ನಾಳೆ ಬೆಳಗೆ ಯಜಮಾನ ಬಂದಾಗ ಅದೇ ಕೋತಿಗಳನ್ನು ಒಪ್ಪಿಸಿ 100 ರೂ ಪಡೆಯಿರಿ.
ಹಳ್ಳಿಯವರೆಲ್ಲ ಸಂತೋಷ ಬಿದ್ದರು ಕಷ್ಟಪಡದೆ 25 ರೂ ಸಿಗುತ್ತದೆ ಬರಿ 75 ರೂಗಳಿಗೆ. ಸರಿ ಹೇಗೊ ಮಾಡಿ ಹಣ ಹೊಂಚಿ ಸಾವಿರಾರು ರುಪಾಯಿ ಕೊಟ್ಟು 75 ರಂತೆ ಕೋತಿಗಳನ್ನು ಪಡೆದರು.
ಮರುದಿನ ಬೆಳಗ್ಗೆಯೆ ಎಲ್ಲರು ಬಂದು ಸಾಲಿನಲ್ಲಿ ನಿಂತರು ಕೋತಿಗಳನ್ನು ಮಾರಲು. ಪಾಪ ಕಾದಿದ್ದೆ ಬಂತು ಯಜಮಾನನು ಬರಲೆ ಇಲ್ಲ. ಕೆಲಸದವನು ಇಲ್ಲ ಓಡಿಹೋಗಿದ್ದಾನೆ. ಕಂಪನಿ ಮುಚ್ಚಿದೆಯಂತೆ !
(ಮನೆಯಲ್ಲಿ ಮಾತಿನ ಮದ್ಯೆ ನನ್ನ ಸಹೋದರ ರಾಮಮೋಹನ ಹೇಳಿದ ಕಥೆ , ಇಂದಿನ ಶೇರ್ ಮಾರ್ಕೇಟ್ ಗೆ ಹೊಂದಿಕೊಳ್ಳೂತ್ತಲ್ವ?)
Comments
ಉ: ಗೂಳಿ ಮತ್ತು ಕರಡಿ