ಗೆಳತಿಯ ಭೂತ
ಗೆಳತಿಯ ನೋಡಲು ಹೋದರೆ
ಸಿಕ್ಕಿದ್ದು ಅವಳನ್ನು ಕೊಂದೆನೆನ್ನುವ ಭೂತ
ಕುಸಿವ ಜೀವಕೆ ಉಸಿರ ತುಂಬುತಲೆ
ಕೊಂದೆಯೇಕೆ ಎಂದರೆ-"ನಾನು ಬದುಕಲು"
ಎನ್ನಬೇಕೆ ಭಂಡ ಭೂತ!
ಶುರು ಮಾಡಿತು ತಕಥೈ ನಾಟ್ಯ ನನ್ನಣಗಿಸಲು
ಕೋಡುಗಳ ಝಳಪಿಸಿ ಕೆಂಗಣ್ಣುಗಳ ಹೊಳಪಿಸಿ
ಹೂಂಕರಿಸಿ..ಟೇಂಕರಿಸಿ...
ಬಗೆದು ಗುಂಡಿಗೆಯ ಬಿಡಿಸಿ ನೆತ್ತರಿನ ಚಿತ್ತಾರ
ನನ್ನೆದೆಯ ಅಂಗಳದಲಿ ಕುಣಿದಾಡಿ ಮೆರೆಯಿತು.
ತಕಧಿಮಿಯ ತಾಳದ ಅಬ್ಬರದ ಮೇಳವು
ನುಸುಳಿ ನನ್ನೊಳಗೂ ಉಸುರುವಾಗಲೇ ಲಯದ ಕಲೆ
ಕೊಸರಿ ನಿಂತೆ.. ನಿಂತು ನಡೆದೆ.
ಹೊರಟಾಗ ನಿಲ್ಲಿಸಿತು ಕರೆಯೊಂದು ಕೂಗಿ
ಹಿಂತಿರುಗಿ ನೋಡಿದರೆ...ಅರಳುತಿದ್ದಳು ಗೆಳತಿ
ಕರಗುತ್ತಿದ್ದ ಭೂತದ ನೆರಳಿನಲ್ಲಿ!
Rating
Comments
ಉ: ಗೆಳತಿಯ ಭೂತ
In reply to ಉ: ಗೆಳತಿಯ ಭೂತ by girish.rajanal
ಉ: ಗೆಳತಿಯ ಭೂತ
ಉ: ಗೆಳತಿಯ ಭೂತ
ಉ: ಗೆಳತಿಯ ಭೂತ
ಉ: ಗೆಳತಿಯ ಭೂತ
ಉ: ಗೆಳತಿಯ ಭೂತ
ಉ: ಗೆಳತಿಯ ಭೂತ
ಉ: ಗೆಳತಿಯ ಭೂತ
ಉ: ಗೆಳತಿಯ ಭೂತ