ಗೆಳತಿ ಪತ್ರ
ಹೂಗಳ ಮಧ್ಯೆ ಇತ್ತಾ ಒಂದೊಂದು ಹೆಜ್ಜೆ
ತುಂತುರಿನ ಸ್ಪರ್ಶ ತಾಕಿದ ಘಳಿಗೆ
ಹರಿಯುವ ನೀರು ಪಾದ ತಾಕಿದ ವೇಳೆ
ನಿನ್ನ ನೆನಪೇ ಗೆಳೆಯಾ....ನಿನ್ನ ನೆನಪೇ....
ಕಾಲ ಮುಂದೆ ಹೋಗುತ್ತಿಲ್ಲಾ..?
ಸೂರ್ಯ ಕಣ್ಣಿಗೆ ಕಾಣುತ್ತಿಲ್ಲಾ..?
ಚಂದಿರನ ಕಾಯೋ ತಾಳ್ಮೆ ನನಗಿಲ್ಲಾ..?
ಹಸಿರಿನ ಮೈ ಮುಟ್ಟೋ ಮಳೆ ಹನಿ
ನನ್ನ ಕೈಯಲ್ಲಿಲ್ಲ...
ಮೋಡದಲ್ಲಿರೋ ಅಕಲ್ಮಶ ಪ್ರೀತಿ
ಸಿಗೋ ನಂಬಿಕೆ ನನಗೆ ಗೆಳೆಯಾ.....
ಮಳೆಯ ರಭಸದಲಿ
ಹಕ್ಕಿ ಇಂಚರ ಕೇಳೋ ತಾಳ್ಮೆ
ಟಪ ಟಪ ಸದ್ದಿನ ತಾಳದ ಹಿಂದೆ
ಕಲ್ಯಾಣಿ ರಾಗದ ಗಾನಮಾಲೆಯ ಕವಿತ್ವ
ಕಣ್ಣನ್ನು ಆಕರ್ಷಿಸೋ ನೀಲಿಬಾನು ನನ್ನ ಕೈಗೆ ಸಿಗೊಲ್ಲ..??
ಮೂಡೋ ಸೂರ್ಯ ಸಿಗುತ್ತಾನೆಂಬ ನಂಬಿಕೆ..?
ನನಗೆ ಗೆಳೆಯಾ....
ಮಧುರ ಕನಸು
ಮಧುರ ಕ್ಷಣವಾಗೇ...
ಮಧುರ ಕ್ಷಣ
ಮಧುರ ನೆನಪಾಗಿಸುವ ನಂಬಿಕೆ
ನನದಲ್ಲವೇ....ಗೆಳೆಯಾ....??
Rating
Comments
ಉ: ಗೆಳತಿ ಪತ್ರ