ಗೆಳೆತನ

ಗೆಳೆತನ

 

ಓ... ಗೆಳತೀ

ನಮ್ಮೀ ಗೆಳೆತನ

ನಿನ್ನೆಯದಲ್ಲ

ಅರಿವು ಮೂಡಿದಂದು

ಚಿಗುರಿ, ಟಿಸಿಲೊಡೆದು,

ಹೆಮ್ಮರವಾಗಿ,

ಪಕ್ವವಾಗಿ, ನನ್ನುಸಿರ

ಹಸಿರಾಗಿಸಿದ ನಿತ್ಯ ನೂತನ.....

 

ನಮ್ಮ ಸ್ನೇಹದಲಿ

ಭಾವನೆಗಳ ತಾಕಲಾಟವಿಲ್ಲ .

ಘರ್ಷಣೆಯಿಲ್ಲ ,ಮತ್ಸರವಿಲ್ಲ

ಗೌಪ್ಯತೆಯಿಲ್ಲ, ಮುಕ್ತತೆಯೇ ಎಲ್ಲ

ಪರಸ್ಪರ ಓಲೈಸಬೇಕಿಲ್ಲ

ಮೌನದೊಳಗಿನ ಆಪ್ತತೆಯೇ ಎಲ್ಲಾ .....

 

ಜ್ಞಾನ ರಸಗವಳವ

ಉಣಬಡಿಸುವ ನಿನ್ನ ಸಂಗದಲಿ

ಬಿಂಕ ಬಿನ್ನಾಣವಿಲ್ಲ

ಬಿಗುಮಾನವಿಲ್ಲ,

ಅಗೆದಷ್ಟೂ ಮೊಗೆವ

ಅಮೃತ ವಾಹಿನಿ ನೀನು .....

 

ಓ ನನ್ನೊಲವಿನಾ

ಹೊತ್ತಿಗೆಯೇ

ನಿನ್ನೆದೆಯ ಕದ

ತೆರೆದು ಬತ್ತದಿಹ

ಜ್ಞಾನ ಸುಧೆಯ ನೀಡು ನೀ.......

 

ಕಮಲಬೆಲಗೂರ್

Rating
No votes yet

Comments