ಗೆಳೆಯ ನಿನ್ನ ಹುಡುಕುತ್ತಿದ್ದೇನೆ -ಒಮ್ಮೆ ಕಾಣಸಿಗು

ಗೆಳೆಯ ನಿನ್ನ ಹುಡುಕುತ್ತಿದ್ದೇನೆ -ಒಮ್ಮೆ ಕಾಣಸಿಗು

ಗೆಳೆಯಾ
ನೀನು ಎಲ್ಲಿದ್ದೀಯಾ . ಇದ್ದಕಿದ್ದ ಹಾಗೆ ನಿನ್ನ ಅನುಪಸ್ತಿತಿ ಕಾಡುತ್ತಿದೆ ನೆನಪುಗಳ ಮೂಟೆಯೊಳಗೆ ಎಲ್ಲೋ ಮರೆಯಾಗಿದ್ದ ನೀ ನೆನಪಾದದ್ದಾದರೂ ಹೇಗೆ.
ಬಾಳೆಂಬ ಹಾದಿಯಲ್ಲಿ ನೀನನ್ನ ಜೊತೆಗಿದ್ದ ಆ ಕ್ಷಣಾ ನಗಣ್ಯವೆನಿಸಿತಲ್ಲ ಅಂದು. ಇಂದೇಕೆ ಅವು ಅತ್ಯಮೂಲ್ಯವಾಗಿವೆ?
ಅಂದ ಹಾಗೆ ನಿನಗೆ ನನ್ನ ನೆನಪುಗಳು ಬರದೆ ಇರಲಿಕ್ಕೂ ಸಾಕು.
ನಿನ್ನ ಒಂದು ಕಾಲದ ಸಹ ಉದ್ಯೋಗಿ. ". ಒಂದರ್ಥದಲ್ಲಿ ನಿನ್ನ ಮೇಲಾಧಿಕಾರಿ ಆದರೂ ನಿನಗೇಕೋ ನನ್ನ ಮೇಲೆ ಅಸಮಾಧಾನ. ನನಗೆ ನಿನ್ನ ಬಗ್ಗೆ ಶಂಕೆ ಅದೇಕೋ ಕಾಣೇ
ನಿನ್ನ ಆಧ್ಯಾತ್ಮಿಕ ಮಾತುಗಳು. ದೇವರ ಬಗ್ಗೆಗಿನ ನಿನ್ನ ಅತೀವ ನಂಬಿಕೆ ನೀನುಚ್ಚುರಿಸುತ್ತಿದ್ದ ಮಂತ್ರಗಳು ನಿಜಕ್ಕೂ ನನಗೆ ನಿನ್ನ ಮೇಲೆ ಅಪನಂಬಿಕೆ ಮೂಡಿಸಲು ಸಹ್ಕಾರಿಯಾಯ್ತು
ನಿನಗೂ ನನ್ನ ಉಡಾಫೆಯ ಮಾತುಗಳು, ಸ್ಚೇಚ್ಚೇ ನಡುವಳಿಕೆಗಳು ಹಿಡಿಸುತ್ತಿರಲಿಲ್ಲ. ನನ್ನ ಪ್ರಾಣ ಸ್ನೇಹಿತ ಕೂಡ ನಿನ್ನ ಕಡೆ ವಾಲತೊಡಗಿದಾಗ ನನಗೆ ನಿನ್ನ ಮೆಲಿನ ಕೋಪ ಆ ಕೋಪ ಇನೂ ಹೆಚ್ಚ್ದಾಯಿತು
ನಮಗರಿವಿಲ್ಲದೆ ನಮ್ಮ ನಡುವಲ್ಲಿ ಜಗಳಗಳು ಶುರುವಾಗಿ , ನಮ್ಮ ನಮ್ಮ ಜಗಳಗಳು ಮೇರೆ ಮೀರಿ ಪರಸ್ಪರ ದ್ವೇಷ ಶುರುವಾಯ್ತು ನೋಡು. ನಿನ್ನ ನೋಡಿದರೆ ಕೊಲ್ಲಬೇಕೆಂಬ ಆಸೆ
ಇಲ್ಲ ಸಲ್ಲದ ಶಾಪಗಳನ್ನು ಹಾಕುತ್ತಿದ್ದೆ. ನೀನು ಕಡಿಮೆ ಇರಲಿಲ್ಲ. ನನ್ನ ಬಗ್ಗೆ ಕೆಟ್ಟ ಮಾತಾಡಿದೆ. ಹೀಗೊಮ್ಮೆ ಒಂದು ದಿನ ಜಗಳ ಶುರುವಾಯ್ತು
ಅದು ನನ್ನ ಕಣ್ಣಲ್ಲಿ ನೀರು ತರಿಸಿದ ದಿನ ನೆನಪಿದೆಯಾ .ಆಫೀಸಿನಲ್ಲಿದ್ದ ಸುತ್ತಾಮುತ್ತ ಜನರು ಎಲ್ಲಾ ನೋಡುತ್ತಿದ್ದರು ಅಂತಹ ಅವಮಾನ ನನಗೆಂದೂ ಆಗಿರಲಿಲ್ಲ
ಮನೆಯಲ್ಲಿ ನಾನು ಅತ್ತದ್ದು ತುಂಬಾ ಅವತ್ತೇ ಎಂದು ಹೇಳಬೇಕು.
ಅದೇನಾಯ್ತೋ ನೋಡು ಮಾರನೆ ದಿನ ನೀನಾಗೆ ಬಂದೆ ತಾಯಿ ದುರ್ಗಿಯ ಹೆಸರು ಹೇಳಿದೆ. ನಮ್ಮಿಬ್ಬರ ಗೋತ್ರಗಳು ಒಂದೇ ಆಗಿದ್ದರಿಂದ ನಾ ನಿನಗೆ ಆ ರೀತಿಯಲ್ಲಿ
ತಂಗಿಯಾಗಬೇಕೆಂದೆ. ಪ್ರೀತಿಯಿಂದ ತಂಗಿ ಎಂದು ಅಪ್ಪಿಕೊಂಡೆ ನಾನೂ ಕರಗಿ ಹೋದೆ. ನಾನು ನಿನ್ನ ಒಪ್ಪಿಕೊಮ್ಡೆ ಅಷ್ಟೇ ನಮ್ಮ ಜಗಳಗಳು ಪ್ರೀತಿಯಲ್ಲಿ ಬದಲಾದವು

"ಹೀಗಲ್ಲ ಕಣೇ ಅದು" ಎಂದು ವಿಷ್ಣು ಸಹಸ್ರನಾಮ ಹೇಳಿಕೊಟ್ಟೆ, ದೇವಿ ದುರ್ಗೆಯನ್ನು ಒಲಿಸಿಕೊಳ್ಳುವ ಪರಿ ಹೇಳಿದೆ. ಕನ್ಯಾಕುಮಾರಿಯಲ್ಲಿ ನಿನಗಾದ ಅನುಭವವನ್ನು ಹೇಳಿ
ರೋಮಾಂಚನ ನೀಡಿದೆ. ನಿನ್ನನ್ನು ಮದುವೆಯಾಗುವವನು ಬಹಳ ಲಕ್ಕಿ ಎಂದು ಅದಕ್ಕೆ ಒಂದು ಆಧಾರವನ್ನೂ ಕೊಟ್ಟೆ.
ಬಾಳಲ್ಲಿ ನಿನಗಾಗುವುದು ಲವ್ ಮ್ಯಾರೇಜ್ ಎಂದೇ ಹೇಳಿದೆ. ನೀ ಹೇಳಿದಂತೆ ನಡೆಯಿತು ಬಾಳಲ್ಲಿ.
ನಂತರ ಇಂಗ್ಲೀಶ ಉಚ್ಚಾರಣೆ ಸರಿಯಾಗಿ ಬರದ ನನಗೆ ಅದರ ಉಚ್ಚಾರಣೆಯನ್ನು ಹೇಳಿಕೊಟ್ಟೆ. ಹೀಗೆ ಬಾಳಿನ ಪ್ರತಿ ಹೆಜ್ಜೆಯಲ್ಲೂ ನೀ ನನಗೆ ಗುರುವಾದೆ. ಅಣ್ಣನಾದೆ, ತಂದೆಯಾದೆ.
ನಂತರದ ಕೆಲವು ದಿನದಲ್ಲಿ ನೀನು ಮರೆಯಾಗತೊಡಗಿದೆ. ನಿನ್ನ ನೇರ ದಿಟ್ಟ ಮಾತುಗಳು ಕೆಲವರಿಗೆ ಹಿಡಿಸಲಿಲ್ಲ ಅವು ಅಹಂಕಾರದ ಮಾತುಗಳೆನಿಸತೊಡಗಿದವು
ಇಂತಹ ಆಧುನಿಕ ದಿನಗಳಲ್ಲೂ ಜುಟ್ಟು ತೆಗೆಯದ ನೀನು ಜನರ ಪಾಲಿಗೆ ಹಾಸ್ಯದ ವಸ್ತುವಾದೆ.. ಕೆಲವೊಂದು ಕಂಪನಿ ನಿನ್ನನ್ನು ಕೆಲಸಕ್ಕೆ ಸೇರಿಸಿಕೊಳ್ಲಲಿಲ್ಲ
"ಬದುಕಕ್ಕೋಸ್ಕರ ನಮ್ಮ ಪರಂಪರೇನೆ, ನನ್ನ ಆಸ್ತೀನ ತ್ಯಾಗ ಮಾಡ್ಬೇದ್ರೆ ಈ ಬದುಕೆ ಬೇಡ" ಎಂದು ನೀನು ಅತ್ತ ಆ ದಿನ ನೆನಪಿದೆ ಅದೇ ಕಡೆಯ ದಿನ
ಅಷ್ಟೆ . ಅದಾದ ನಂತರ ನಿನ್ನ ಸುಳಿವೂ ಇರಲಿಲ್ಲ. ಬದುಕು ಎಷ್ಟು ಬೇಗ ಬದಲಾಯಿಸಿತು ನೋಡು . ನನಗೆ ನಿನ್ನ ನೆನಪೂ ಕೂಡ ಆಗಲೇಇಲ್ಲ ಮದುವೆ ಪ್ರೀತಿ,ಮಗುಹೀಗೆ
ಸಂಸಾರವೆಂಬ ಹುಚ್ಚು ಹೊಳೆಯಲ್ಲಿ ತೇಲುತ್ತಿದ್ದವಳಿಗೆ ಮನದ ಹಂಬಲವನ್ನೆಲ್ಲಾ, ದುಗುಡಗಳನ್ನೆಲ್ಲಾ ಯಾರ ಬಳಿಯಲ್ಲಾದರೂ ಕಕ್ಕಿ ಹಗುರಾಗುವ ಎಂದಾಗ ನೆನಪಾದದ್ದು ನೀನು.
ನೀನೊಬ್ಬನೆ ನನ್ನ ಮನದ ವಿಷಗಳನ್ನೆಲ್ಲಾ ತಾಳಬಲ್ಲವನು. ಅದಕ್ಕೆ ನಿನ್ನ ಹುಡುಕುತ್ತಿದ್ದೇನೆ
ನಮ್ಮ ಗೆಳತಿಯೊಬ್ಬಳನ್ನು ವಿಚಾರಿಸಿದ್ದಕ್ಕೆ ನೀನು ನ್ಯೂಯಾರ್ಕ್‌ನಲ್ಲಿದ್ದೀಯಾ ಎಂದರು. ಯಾರಲ್ಲೂ ನಿನ್ನ ವಿಳಾಸ ಸಿಗಲಿಲ್ಲ. ಮಡಿವಾಳದ ನಿನ್ನ ಮನೆಯೂ ಖಾಲಿಯಾಗಿದೆ ಈಗ.
ಅಂದಿನಿಂದ ನಿನ್ನನ್ನು ನೆಟ್‌ನಲ್ಲಿಯೇ ಹುಡುಕುತ್ತಿದ್ದೇನೆ . ಎಲ್ಲಾದರೂ ನಿನ್ನ ಹೆಸರಿನ ಪ್ರೊಫೈಲ್ ಕಂಡರೆ ಸಾಕು ಒಳ ಹೊಕ್ಕು ನಿರಾಸೆಯಿಂದ ಹೊರಟು ಬಂದಿದ್ದೇನೆ
ಮನಸೆಲ್ಲಾ ಖಾಲಿಯಾಗಿಲ್ಲ ಅದು ನಿನ್ನ ನೆನಪಿನ ಭಾರವನ್ನು ತಡೆಯದೆ ಕುಸಿದು ಬೀಳುತ್ತಿದೆ
ಈ ಲೇಖನ ನಿನ್ನಕಣ್ಣಿಗೆ ಬಿದ್ದರೆ ಒಮ್ಮೆ ನನಗೆ ಮೇಲ್ ಮಾಡು

ನಿನ್ನ ಗೆಳತಿ

Rating
No votes yet

Comments

Submitted by Natarajan Iyer Sun, 12/14/2014 - 01:13

In reply to by Natarajan Iyer

At KC we were colleagues. If my memory is right, you were taking care of the branch operations in addition to training. Although I was a free-lance consultant for four hours daily, training people, I must indeed admit that we were all like one big family. Hmmm...kaalaa...How Time Flies...By the way, that juttu is no more there. Long Ago I decided to maintain my good qualities by some methods depending on the time-frame and society that we move in. The Juttu might come and go, as per the place and time. All rituals highlight divinity which I retain within myself since, in kaliyuga, the number of undeserving people are more and we are in a time-frame where we need to think many times to even speak to people, forget sharing good discussions with them. Foreigners are highly appreciative of our culture but our own country people, some of them, if not all of them, look at our own culture and divinity with contempt. So, better to do our duty, keep quiet and keep moving