'ಗೈವೆ ಮುತ್ತಿನಾರತಿ ದೇವಾ'

'ಗೈವೆ ಮುತ್ತಿನಾರತಿ ದೇವಾ'

'ಗೈವೆ ಮುತ್ತಿನಾರತಿ ದೇವಾ' --ಇದು ಒಂದು ಆರತಿಹಾಡು.
ಇಲ್ಲಿ ಗೈವೆ ಶಬ್ದ ಕ್ರಿಯಾಪದವಾಗಿ ಒಂಟಿಯಾಗಿ ಪ್ರಯೋಗವಾಗಿದೆ. ಈ ರೀತಿ ಮೊದಲ ಬಾರಿಗೆ ನೋಡಿದ್ದು. 'ಸೇವೆಗೈ' ಸಾಮಾನ್ಯವಾಗಿ ನೋಡುವ ಶಬ್ದ.

ಹೀಗಾಗಿ 'ಗೈ' ಕ್ರಿಯಾಪದದತ್ತ ಗಮನ ಹರಿಸಿದೆ. ಇದು ಕೈಗೆ ಸಂಬಂಧ ಪಟ್ಟಿದ್ದು ಎಂದು ಹೊಳೆಯಿತು.

ಸಂಸ್ಕೃತದಲ್ಲಿ ಕರ ( ಕೈ) ಇದ್ದು ಕೃ ಧಾತುವಿಗೆ ಸಂಬಂಧಿಸಿದೆ. ಕೈಯಿಂದ ತಾನೆ ನಾವು ಏನನ್ನಾದರೂ ಮಾಡುವದು.

ಅದರಿಂದಾಗಿಯೇ ಕರ , ಕೃ , ಕೃತಿ , ಕಾರ್ಯ , ಕರ್ಮ ಇತ್ಯಾದಿ ಶಬ್ದಗಳು ಒಂದಕೊಂದು ಸಂಬಂಧಪಟ್ಟಿವೆ. ಅದರಂತೆಯೇ ಕನ್ನಡದಲ್ಲೂ ಕೈ , ಗೈ (ಕ್ರಿ.), ಗೆಯ್ಮೆ (ಗೇಂಎ/ಕೇಮೆ). ಶಬ್ದಗಳು ಒಂದಕೊಂದು ಸಂಬಂಧಪಟ್ಟಿವೆ.

ಕನ್ನಡದಲ್ಲಿ ನಮ್ಮ ಸೀಮಿತ ತಿಳಿವಳಿಕೆಯಿಂದ ಇಂಥ ಶಬ್ದಗಳಿಗೆಲ್ಲ ಕನ್ನಡ ಪದಗಳಿರುವುದಿಲ್ಲ ಎಂದುಕೊಂಡಿರುತ್ತೇವೆ.

ಜನರು ಆಡುವ ಮಾತು ಗಮನಿಸಿದಲ್ಲಿ / ಹೆಚ್ಚು ಹೆಚ್ಚು ಓದಿಕೊಂಡಲ್ಲಿ ಇಂಥ ಶಬ್ದಗಳು ನಮಗೆ ಖಂಡಿತ ಸಿಗುತ್ತವೆ. ಹೊಸಪದಗಳನ್ನು ನಿರ್ಮಿಸುವದು ಹೇಗೆ ವಂದೂ ಹೊಸ ವಿಚಾರಗಳೂ ಹೊಳೆದಾವು.

Rating
No votes yet

Comments