ಗೊಂದಲ

ಗೊಂದಲ

ನನ್ನಾವರಿಸಿದ ಮೌನಕೇನು ಗೊತ್ತು
ನನ್ನ ನೋವುಗಳು?
ಅದು ಹಾಗೇ ಮೌನವಾಗಿದೆ
ನನ್ನ ಪಾಡಿಗೆ ನನ್ನ ಬಿಟ್ಟು

ಮತ್ತೆ ಮೊಗದಲಿ ನಗೆಬುಗ್ಗೆ
ಬರುವುದೋ ಎಂದು ಕಾದಿಹ
ನನ್ನೀ ಮನಕೆ ಮತ್ತೆ
ಮೌನವೇ ಉತ್ತರ ನೀಡಬೇಕಿದೆ

ಮನಸಿಗೊಂದು ಹೊಸ ದಾರಿ ಹುಡುಕುವ
ಮೌನದಲ್ಲೊಂದು ಮೌನ
ಹೆಸರೇಕೆ ನೋವಿಗೆ? ಮೌನಕೆ?
ಮೌನ ಸಹಿಸಲಾಗದ ಮನಸಿಗೆ?

ಮಾತು ಮೌನಕೆ
ಮೌನ ಮಾತಿಗೆ ಬೇಕಿದೆ
ನನಗೋ ಎರಡೂ ಬೇಕಲ್ಲ ಎಂಬ
ಗೊಂದಲ ಮೊದಲಾಗಿದೆ

Rating
No votes yet