ಗೊತ್ತಿಲ್ಲ... ಆಕೆಗೂ ... ಈಕೆಗೂ!

ಗೊತ್ತಿಲ್ಲ... ಆಕೆಗೂ ... ಈಕೆಗೂ!

·         ಆಕೆ ಮತ್ತು ಈಕೆ ನೆರೆಹೊರೆಯವರು.

ಅಂದು ಆಕೆ ಮತ್ತು ಆಕೆಯ ಗಂಡನ ನಡುವಿನ ಜಗಳದ ನಂತರ, ವಿಚ್ಛೇದನ ಕೊಡುತ್ತೇನೆ ಅಂದಿದ ಗಂಡ, ಮಗುವಿನ ಜೊತೆಗೆ ಆಕೆಯನ್ನು, ಬಸ್ಸಿನ ಟಿಕೇಟು ತರಿಸಿಕೊಟ್ಟು, ಆಕೆಯ ತವರಿಗೆ ಕಳುಹಿಸಿದ್ದ.

ಆಕೆ "ನಾನಿನ್ನು ಹಿಂದಿರುಗಿ ಬರುವುದು ಅನುಮಾನ .. ವಿಚ್ಛೇದನ ಕೊಡ್ತಾರಂತೆ..." ಎಂದು ಈಕೆಗೆ ಅಳುತ್ತಾ ಹೇಳಿ ತವರು ಮನೆಗೆ ತೆರಳಿದ್ದಳು.
...
ಆಕೆ ಇನ್ನು ಹಿಂದಿರುಗಿ ಬರುವುದಿಲ್ಲ ಎಂದೇ ಅರಿತಿದ್ದ ಈಕೆ, ತನ್ನ ಅಕ್ಕ ಪಕ್ಕದವರಿಗೆಲ್ಲಾ, ಆಕೆಯ ಮನೆಯಲ್ಲಾದ ಜಗಳದ ಗುಪ್ತ ವಿಷಯವನ್ನು ಬಹಿರಂಗ ಪಡಿಸಿ, ಆಕೆಯನ್ನು ಆಕೆಯ ಅನುಪಸ್ಥಿತಿಯಲ್ಲಿ, ಬೀದಿಯ ಜನರ ಮುಂದೆಲ್ಲಾನಗ್ನಗೊಳಿಸುತ್ತಾಬಂದಳು.

ನಾಲ್ಕೈದು ವಾರಗಳ ನಂತರ, ಒಂದು ಮುಂಜಾನೆ, ಆಕೆ ಹಠಾತ್ತನೇ, ತನ್ನ ಮಗನೊಂದಿಗೆ, ಬಂದಿಳಿದಾಗ, ಈಕೆ ಅವಾಕ್ಕಾಗಿ ಬಿಟ್ಟಳು.

ಮಾತು ಹೊರಡದೇ ಮೌನಿಯಾದಳು.

ಆಕೆಯೊಂದಿಗೆ ಮಾತನ್ನೇ ನಿಲ್ಲಿಸಿಬಿಟ್ಟು ಆಕೆ ಆಶ್ಚರ್ಯಪಡುವಂತೆಮಾಡಿದಳು.

ನೆರೆಹೊರೆಯವರೆಲ್ಲರೂ ಆಕೆಯನ್ನು ಮಾತಾಡಿಸಿ, ಸಾಂತ್ವನದ ಮಾತನಾಡಿ, ಆಕೆಯಮನೆಯಲ್ಲಿನ ಸಾಂಸಾರಿಕ ವಿಷಯಗಳನ್ನು ಊರಿಗೆಲ್ಲಾ ಡಂಗುರ ಸಾರಿದ್ದು ಈಕೆ ಎನ್ನುವ ವಿಚಾರವನ್ನುಬಹಿರಂಗಪಡಿಸಿ, ಬೀದಿಯುದ್ದಕ್ಕೂ , ಈಕೆಯ ಅನುಪಸ್ಥಿತಿಯಲ್ಲಿ, ಈಕೆಯನ್ನೂನಗ್ನಗೊಳಿಸುತ್ತಾನಿಂದರು.

ಆಕೆ ಮತ್ತು ಈಕೆ ಈಗ ಮಾತನಾಡುತ್ತಿಲ್ಲ.

ಆಕೆಗೆಆಶ್ಚರ್ಯ!

"ನಾನು ಹಿಂದಿರುಗಿ ಬಂದಿದ್ದೇ ಈಕೆಗೆ ಇಷ್ಟವಾಗಿಲ್ಲವೇ? ಹಳಿ ತಪ್ಪಿದ್ದ ನಮ್ಮಸಂಸಾರ ಪುನಹ ಸರಿದಾರಿಹಿಡಿದು ಸಾಗುತ್ತಿರುವುದನ್ನು ಈಕೆ ಸಹಿಸುತ್ತಿಲ್ಲವೇ?"

ಈಕೆಗೆಮುಖಭಂಗ! ಏಕೆ? ಗೊತ್ತಿಲ್ಲ... ಆಕೆಗೂ ... ಈಕೆಗೂ!

 

Rating
No votes yet

Comments