ಚಂಚಲ ಸೂರ್ಯನಿಗೆ.....

ಚಂಚಲ ಸೂರ್ಯನಿಗೆ.....

ಮುಂಜಾನೆಯ ಮಂಜಿನ ಮಬ್ಬು ಸೂರ್ಯನ ಮಧುರ ಬೆಳಕಿಗೆ

ಮೈಒಡ್ಡಿ ಕಾವ್ಯ ಬರೆಯುತ್ತೇನೆ,ಈ ಪ್ರಕೃತಿಯ ರಮ್ಯತೆ ಅಪ್ಪಿಕೊಳ್ಳಲು.

 

ಮಧ್ಯಾಹ್ನದ ಉರಿಬಿಸಿಲಿಗೆ ನೆರಳು ಆಶ್ರಯಿಸಿ ಆಲೋಚಿಸುತ್ತೇನೆ.

ನಿನ್ನ ಕ್ರೂರತೆ ತಪ್ಪಿಸಿಕೊಳ್ಳಲು,

ಸಾಯಂಕಾಲದ ನಸುಗೆಂಪು ಕಿರಣಕ್ಕೆ

ಕೈಯೊಡ್ಡಿ ಮಗ್ನನಾಗುತ್ತೇನೆ, ನಾಳಿನ ಕಷ್ಟ ಎದುರಿಸಲು

 

ಏ....ಸೂರ್ಯ, ನೀನು ಮುಂಜಾನೆಯ ಮಂಜಿನಲ್ಲೇ ಇದ್ದು

ಹಿತವ ನೀಡುತ್ತಲೇ.....ಇರುವದಿಲ್ಲ

ಮಧ್ಯಾಹ್ನದಂತೆ ಧಗಧಗಿಸಿ ಈ ಜೀವ

ಕೊಳ್ಳಿಯಂತೆ ಸುಡುತ್ತಲೇ ಇರುವದಿಲ್ಲ

ಮುಳುಗುತ್ತ ರಕ್ತರಂಗೋಲಿ ಬಿಡಿಸುತ್ತಲೇ ಇರುವದಿಲ್ಲ

ನಿನ್ನ ಈ ಚಂಚಲತೆಗೆ ನಾವ್ ನಿಂತಿರುವ ಭೂಮಿ

ಕಾರಣವೆಂಬುದ ಮರೆತು

ನಿನ್ನನ್ನೇ ಹೊಣೆಗಾರನಾಗಿಸುತ್ತೇವೆ!

 

 

Rating
No votes yet

Comments