ಚಂಡೀಗಢದ ಮೂಲೆಯಲ್ಲಿ ಕನ್ನಡದ ಸವಿ

ಚಂಡೀಗಢದ ಮೂಲೆಯಲ್ಲಿ ಕನ್ನಡದ ಸವಿ

ಚಂಡೀಗಢದ ಸೆಕ್ಟರ್ ೪೭-ಡಿ. ಹೋಟೆಲ್ ಹೆಸರು "ಸೌತ್ ರತ್ನಮ್". ಹೊರಗೆ ದೊಡ್ಡದಾದ ತಿರುಪತಿ ವೆಂಕಟೇಶ್ವರನ ಚಿತ್ರ. ಆಂಧ್ರದವರಿರಬೇಕೆಂದುಕೊಂಡೆ. ಒಳ ಹೊಗ್ಗಿ ಕುಳಿತು ಸುತ್ತಲೂ ನೋಡಿದಾಗ ಕಂಡದ್ದು ಚಿಕ್ಕದಾದರೂ ಚೊಕ್ಕದಾದ ಹೋಟೆಲ್. ಸರ್ದಾರ್ಜೀಗಳು ದೋಸೆ, ಇಡ್ಲಿ ಮೆಲ್ಲುವ ದೃಶ್ಯ.  ಸ್ವಲ್ಪ ಸಮಯದ ನಂತರ ಸಂಗೀತ ತೇಲಿಬರತೊಡಗಿತು.. "ಮುಂಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ...!!!" ಇದು ಮೂಡಿ ಬಂದದ್ದು ವರ್ಲ್ಡ್ ಸ್ಪೇಸ್ನ ಕನ್ನಡ ವಾಹಿನಿ ಸ್ಪರ್ಶದಲ್ಲಿ. ಮೈಸೂರು ಮಸಾಲೆ ದೋಸೆ, ವಡೆ ಪಟ್ಟಾಗಿ ಹೊಡೆದು, ಚಹಾ ಮತ್ತು ನೆಸ್ ಕೆಫೆ ಕಾಫಿಯಿಂದ ರುಚಿಗೆಟ್ಟ ಬಾಯಿಗೆ ಅಪ್ಪಟ ಕನ್ನಡ ಫಿಲ್ಟರ್ ಕಾಫಿ ಬಿದ್ದ ಕೂಡಲೆ ಸ್ವರ್ಗಕ್ಕೆ ಮೊರೇ ಗೇಣು..

ಅನಂತರ ವಿಚಾರಿಸಿದಾಗ ತಿಳಿಯಿತು, ಮಾಲೀಕರು ಸುರೇಂದ್ರ ರಾವ್, ಕುಟುಂಬದವರೇ ಸೇರಿ ನಡೆಸುತ್ತಿರುವ ಹೋಟೆಲ್. ಊರು ಕುಂದಾಪುರ. ಇಲ್ಲೆ ಬಂದು ೭-೮ ವರ್ಷಗಳಾಗಿವೆ.

ಊರಿಂದ ಇಷ್ಟು ದೂರದಲ್ಲೂ ಊರ ರುಚಿ ತಿನ್ನಿಸಿದ ಸೌತ್ ರತ್ನಂಗೆ ಜೈ.

Rating
No votes yet

Comments