ಚದುರಿದ ಚಿಂತನೆಗಳು

ಚದುರಿದ ಚಿಂತನೆಗಳು

 

ಚದುರಿದ ಚಿಂತನೆಗಳು
================
ಸೃಷ್ಟಿ ಮನುಜನ ಬಗ್ಗೆ ಉಳಿದ ಪ್ರಾಣಿಗಳ ಬಗ್ಗೆ ಎಲ್ಲ  ರೀತಿಯ ಎಚ್ಚರಿಕೆಯನ್ನು ತೆಗೆದುಕೊಂಡು ಸುಖವಾಗಿಡಲು ಪ್ರಯತ್ನಿಸುತ್ತದೆ. ಬೇಸಿಗೆಯಲ್ಲಿ ಬಿಸಿಲಿನ ತಾಪ ಜಾಸ್ತಿ, ಹಾಗಾಗಿ ಯುಗಾದಿಯ ಹೊತ್ತಿಗೆ ಎಲ್ಲ ಮರಗಳು ಚಿಗುರುವಂತೆ ಮಾಡಿ ವಾತವಾರಣ ತಂಪಾಗಿಸಿ ಬಿಸಿಲಿನಿಂದ ಬಳಲುವ ಮನುಜನಿಗೆ ಉಳಿದ ಪ್ರಾಣಿಗಳಿಗೆ ತಂಪನ್ನು ಕೊಡಲು ಪ್ರಯತ್ನಿಸುತ್ತದೆ 
ಹಾಗೆ ಚಳಿಗಾಲದಲ್ಲಿ ಮರದ ಎಲೆಗಳ ಅವಶ್ಯಕತೆ ಇಲ್ಲ ಹಾಗಾಗಿ ಎಲೆಗಳನ್ನೆಲ್ಲ ಉದುರಿಸಿ ಭಾಷ್ಪೀಕರಣವನ್ನು ತಡೆದು ವಾತವರಣ ಬೆಚ್ಚಗಾಗಿಸಲು ಪ್ರಯತ್ನಪಡುತ್ತದೆ
ಅರ್ಥ ಮಾಡಿಕೊಳ್ಳದ ಅಜ್ಞಾನಿ ಮನುಜ ಬೆಸಿಗೆಯಲ್ಲಿ ಮರಗಳನ್ನೆಲ್ಲ ಕಡಿದು ಬೆಂಕಿಯಿಟ್ಟು ಹಾಳುಮಾಡುವ ಹಾಗೆ ಚಳಿಗಾಲದಲ್ಲಿ ತಲೆಯ ಮೇಲೆ ಟೋಪಿ ಇಟ್ಟು ಗಿಡ ನೆಡುವ ಕಾರ್ಯಕ್ರಮದ ನಾಟಕ ಮಾಡುವ 
===============================================
 
ನಮ್ಮ ಬೆಂಗಳೂರನ್ನು ಸಿಂಗಪುರ ಮಾಡುವ ಹುಚ್ಚಿನಲ್ಲಿ (ಹಣಮಾಡುವ ಹುಚ್ಚಿನಲ್ಲಿ) , ರಸ್ತೆಗೆಲ್ಲ ಟಾರ್ ಬಳಿದರು, ಪುಟ್ ಪಾತ್ ಅನ್ನು ಕಾಂಕ್ರೀಟ್ನಿಂದ ತುಂಬಿಸಿದರು, ಮನೆಕಟ್ಟಿದರು, ಮಳೆ ಬಂದಾಗ ಒಂದು ಹನಿ ನೀರು ನೆಲದೊಳಗೆ ಹೋಗದಂತೆ ಎಚ್ಚರ ವಹಿಸಿದರು. ಈಗ ಹೊಸ ಯೋಚನೆ ನಮ್ಮ ನಗರ ವಿಜ್ಞಾನಿಗಳಿಗೆ ಹೊಳೆದಿದೆ , ಮಳೆ ಕೋಯ್ಲು ಅಂದರೆ ನೆಲದೊಳಗೆ ಗುಂಡಿ ಮಾಡಿ ಮಳೆ ನೀರನ್ನು ನೆಲದೊಳಗೆ ಬಿಡುವದಂತೆ !!!!
ನಾವು ಸುಮ್ಮನಿದ್ದರೆ ಪ್ರಕೃತಿಯೆ ತನ್ನ ಕೆಲಸ ಮಾಡಿಕೊಳ್ಳುತ್ತಿತ್ತು ಅಲ್ಲವೆ
 
=============================================================
 
ನಮ್ಮ ರಸ್ತೆಯಲ್ಲಿ ಮೊದಲ ಮಹಡಿಗಿಂತ ಮೂರನ ಮಹಡಿಯಲ್ಲಿ ಬಿಸಿಲಿನ ದಗೆ ಜಾಸ್ತಿ ! ಏಕೆ ಹೇಳಿ ನಮಗಿಂತ ಅವರು ಸೂರ್ಯನಿಗೆ ಹತ್ತಿರವಲ್ಲವೆ !! ಹಹ್ಹ ಹ್ಹಹ್ಹ
 
===============================================================
 
ಒಮ್ಮೆ ಓದಿದ್ದೆ, ಪ್ರಕೃತಿ ತುಂಬ ಶಕ್ತಿಶಾಲಿ,  ಮನುಜ ಸಾವಿರಾರು ವರುಷದಿಂದ ಭೂಮಿಯ ವಾತವರಣ ಹಾಳುಗೆಡಿವಿದ್ದಾನೆ ಈಗ, ಒಂದು ವೇಳೆ ಭೂಮಿಯಲ್ಲಿ ಮನುಷ್ಯನೆಂಬ ಪ್ರಾಣಿ ಕೇವಲ ಇಪ್ಪತ್ತು ವರ್ಷ ಇಲ್ಲವೆಂದರೆ ಸಾಕು, ಸಂಪೂರ್ಣ ಭೂಗ್ರಹ ತನ್ನ ಮೊದಲಿನ ಸ್ಥಿಥಿಗೆ ಬರಬಲ್ಲದು. ವಾಹನಗಳ ಓಡಾಟವಿಲ್ಲದಿದ್ದರೆ, ಭೂಮಿಯ ಒಳಗಿನಿಂದ ಹುಟ್ಟುವ ಹುಲ್ಲು ಸಾಕು ಈ ಟಾರ್ ರಸ್ತೆ , ಕಾಂಕ್ರೀಟನ್ನೆಲ್ಲ ಎತ್ತಿ ಹಾಕಿ ಬೆಳೆಯಬಲ್ಲದು
=====================================================
ಬೆಂಗಳೂರು ಈಗ ಬೇರೆಯೆ ಲೋಕ, 
ಏನೊ ಹೇಳುತಾರಲ್ಲ ಅತಳ, ವಿತಳ, ತಳಾತಳ, ಪಾತಾಳ ಲೋಕಗಳೆಂದು ಅದ್ಯಾವುದು ಅಲ್ಲ 
ಬೆಂಗಳೂರು ಈಗ ಶಬ್ದಲೋಕ
===================================================================
Rating
No votes yet

Comments

Submitted by neela devi kn Mon, 04/08/2013 - 12:35

ಪಾರ್ಥ‌ ರವರಿಗೆ ನಮಸ್ಕಾರಗಳು
ತಾವು ಹೇಳಿರುವುದು ದಿಟ‌. ಮಳೆ ಬನ್ದರೆ ಒನ್ದು ಹನಿ ನೀರು ನೆಲದಲ್ಲಿ ಹೋಗದೆ ಮನೆಗಳಳ್ಳಿ ನುಗ್ಗುತಿದೆ. ಹೀಗೆ ನಮ್ಮ‌ ಮನೆಯ‌ ಸ್ವಲ್ಪ ದೂರದಲ್ಲಿ ಒನ್ದು ಕೆರೆ ಇದೆ. ಈಗ‌ 3/4 ವರ್ಷ‌ ಗಲ‌ ಹಿನ್ದೆ ಮಳೆ ಬನ್ದರೆ ತು0ಬಾ ನೀರಿರುತ್ತಿತ್ತು ಮರಗಳು ತು0ಬಾ ಇತ್ತು ಆದರೆ ಈಗ‌ 1ದೇ ದಿನದಲ್ಲಿ 8 ರಿ0ದ‌ 10 ಮರಗಳನ್ನು ಕೊಇದು ಕೆರೆಗೆ ಅಲ0ಕಾರ‌ ಮಾದುತ್ತಿದ್ದರೆ. ಮರಗಳನ್ನು ಯಾಕೆ ತೆಗೆಯ‌ ಬೇಕು.

ತಮ್ಮ " ಚದುರಿದ ಚಿಂತನೆಗಳು " ಓದಿ ಈ ಸ0ಗತಿ ನೆನಪಾಯಿತು.

Submitted by lpitnal@gmail.com Tue, 04/09/2013 - 09:03

In reply to by neela devi kn

ಪ್ರಿಯ ಪಾರ್ಥರವರೇ, ತಮ್ಮ ಚದುರಿದ ಚಿಂತನೆಗಳು, ವೈಚಾರಿಕ. ಇದೇ ರೀತಿ ಮನುಷ್ಯನ ಕಾರ್ಬನ್ ಫುಟ್ ಪ್ರಿಂಟ್ಸ್ ಗಳು ಎಲ್ಲೆಂದರಲ್ಲಿ ಬಿದ್ದು, ಮುಂದೆ ಒಂದೊಂದು ಕಾಡು ಪ್ರಾಣಿ ಚಿತ್ರಪಟಗಳಲ್ಲಿಯೋ, ಮರಗಳನ್ನು ಲಕ್ಷುರಿ ಎಂದೋ ನೊಡುವ ಕಾಲ ಸನ್ನಿಹಿತವಾಗುತ್ತಿದೆ ಶರವೇಗದಲ್ಲಿ, ಅಂದಹಾಗೆ ತಾವು ಹೇಳಿದಂತೆ, ತಳಾ ತಳ ಬದಲು ರಸಾತಳ ಎಂತಾಗಿರಬೇಕಿತ್ತು ಅಷ್ಟೇ. ಮೆಲುಕು ಹಾಕುವ ವಿಚಾರಗಳು. ನೀಲಾ ರವರ ಪ್ರತಿಕ್ರಿಯೆಯಲ್ಲಿನ ಪ್ರಕೃತಿ ಕಾಳಜಿ ಮೆಚ್ಚುವಂತಹದ್ದು. ಮರಗಳ ಮಾರಣ ಹೋಮ ನಮ್ಮ ಸುತ್ತ ನಡದೇ ಇದ್ದರೂ, ನಾವೆಲ್ಲ ಅದು ಹೇಗೆ ಸುಮ್ಮನೆ ನೋಡುತ್ತ ಸಾಗುತ್ತೇವೆ. ನಮ್ಮ ಮೇಲೆ ನಮಗೆ ಜುಗುಪ್ಸೆ ಬರುತ್ತದೆ. ಏಕೆಂದರೆ ವ್ಯವಸ್ಥೆ ಹಾಗಿದೆ. ಯಾರಿಗೆ ಸಮಯವಿದೆ, ಇಂತಹುದಕ್ಕೆಲ್ಲ. ಹಚ್ಚಿಕೊಂಡರೆ ಅದು ಒಂದು ರಾದ್ಧಾಂತ ಅನಿಸಿಬಿಡುತ್ತದೆ. ಸಕಾರಾತ್ಮಕ ತೋರುವ ಮನಗಳಿಗೆ ಕೊರತೆ ಇಂದಿನ ಈ ಕಾಲ ಘಟ್ಟದಲ್ಲಿ ಅಲ್ಲವೆ ಸರ್. ಈ ಕಾರಣಕ್ಕಾಗಿ ತಮಗೆ, ನೀಲಾ ರವರಿಗೆ ಧನ್ಯವಾದಗಳು.