ಚರ್ಚೆ-ಸಂಧಾನ
"ನಮಿತ ನಿಂಗೆ ಎಷ್ಟು ಸಲ ಹೇಳಿದ್ದೇನೆ ನಂಗೆ ಈ ಬ್ರೆದ್ ಜಾಮ್ ತಿನ್ನೋಕೆ ಇಷ್ಟ ಇಲ್ಲ ಅಂತ . ಯಾಕೆ ಬೆಳಗೆ ಹೊತ್ತು ಬೇರೇನಾದರೂ ಮಾಡಿ ಕೊಡ್ಬಾರದಾ?" ಜೋರು ದನಿ
"ಗಿರಿ ನಿಂಗೆ ಗೊತ್ತಿದೆ ನನ್ನ ಸ್ಟೇಜ್ ಏನು ಅಂತ ಹಾಗಿದ್ದ್ದರೂ ಕೇಳ್ತೀಯಲ್ಲ. ನಿಂಗೆ ತಿಂಡಿ, ಪಾಪುಗೆ ರೆಡಿ ಮಾಡಿ ಕಳಿಸೋಷ್ಟರಲ್ಲಿ ಸಾಕು ಸಾಕಾಗಿ ಹೋಗುತ್ತೆ ನಾನೇನು ಸುಮ್ಮನೆ ಇರ್ತೀನಾ. 9 ಘಂಟೆಗೆ ಆಫ್ಹೀಸ್ನಲ್ಲಿ ಸೈನ್ ಇನ್ ಮಾಡಿಲ್ಲ ಅಂದರೆ ಎಷ್ಟು ಕಷ್ಟ ಗೊತ್ತಾ."
" ಅದಕ್ಕೆ ನಾನು ಹೇಳೋದು ಸುಮ್ಮನೆ ಕೆಲಸ ಬಿಟ್ಟು ಬಿಡು. ನಾನು ದುಡಿದು ತಂದು ಹಾಕೋದೇ ಬೇಕಾದಷ್ಟು ಆಗುತ್ತೆ."
"ಆ ಮಾತನ್ನ ವಾಪಸ್ ತಗೋ . ನಾನು ನಿನ್ನ ಮದುವೆ ಆಗೋಕಿಂತ ಮುಂಚೆ ಕೆಲಸದಲ್ಲಿ ಇದೀನಿ . ಇನ್ಫ್ಯಾಕ್ಟ್, ನೀನು ನನ್ನ ಮದುವೆಯಾದದ್ದೇ ನಾನು ಕೆಲಸದಲ್ಲಿ ಇದೀನಿ ಅಂತ. ನಾನು ಏನು ಮಾಡಿದ್ರ್ರೂ ಕೆಲಸ ಬಿಡಲ್ಲ. ಈಗಲೆ ಇಷ್ಟೊಂದು ದಬ್ಬಾಳಿಕೆ ನಡೆಸ್ತೀಯ. ಆಮೇಲಷ್ಟೆ"
" ನಮಿ ಅವಾಗಿನ ಪರಿಸ್ತಿತಿ ಹಾಗಿತ್ತು. ಇವಾಗ ನಮಗೇನು ಕಡಿಮೆಯಾಗಿದೆ ಹೇಳು.ಹಣ ಇದೆ . ನೆಮ್ಮದಿ ಒಂದೆ ನಮಗೀಗ ಬೇಕಿರೋದು.
ಜಾಬ್ ರೆಸೈನ್ ಮಾಡಿಬಿಡು. "
"ಬೇಕಿದ್ರೆ ನೀನೆ ಕೆಲಸ ಬಿಟ್ಟುಬಿಡು. ನಾನೆ ದುಡಿದು ತಂದು ಹಾಕುತ್ತೇನೆ . ನೀನು ಮನೇಲಿದ್ದು ರುಚಿರುಚಿಯಾಗಿ ಅಡಿಗೆ ಮಾಡ್ಕೊಂಡು ಪಾಪುನ ನೋಡಿಕೊಂಡು ಹಾಯಾಗಿರು"
"ಎಂಥ ಮಾತಾಡ್ತೀಯ ನೀನು. ನೋಡು ನಮಿತ ನಾನು ನಿನ್ನ ಒಳ್ಳೆದಕ್ಕೆ ಹೇಳ್ತೀನಿ. ಮುಂದೆ ಇದು ತುಂಬ ಕಷ್ಟ ಆಗುತ್ತೆ."
"ಏನು ಬ್ಲಾಕ್ ಮೇಲ್ ಮಾಡ್ತೀಯ . ನಾನು ಎಲ್ಲಾದಕ್ಕೂ ರೆಡಿ . ಈಗಲೆ ಹೇಳಿಬಿಡು ನಿನ್ನ ಮನಸಿನಲ್ಲಿ ಏನಿದೆ ಅಂತ . ನಾನು ಲಾಯರ್ ನ ನೋಡ್ತೀನಿ"
" ಇಷ್ಟು ದೂರ ಯಾಕೆ ಮಾತಾಡ್ತೀಯ. ನಾನೆಲಿ ಹಾಗೆ ಹೇಳಿದ"
" ಬೇಡ ನಂಗೆ ಏನೂ ಬೇಡ................................ ನನ್ನನ್ನ ಮುಟ್ಭೆಡ......................... ಮೊದಲು ನಂಗೆ ಡೈವೋರ್ಸ್ ಬೇಕು"
"ಸರಿ ನಿನ್ ಆಸೆ ಏನಿದ್ಯೊ ಹಾಗೆ ಆಗಲಿ"
"ಆಯ್ತು ಬಿಡು"
ಸ್ವಲ್ಪ ಹೊತ್ತು ಮುಸಿ ಮುಸಿ ಅಳು
ಕೊಂಚ ಹೊತ್ತಿನ ನಂತರ
" ನಮಿ ಸ್ವಲ್ಪ ಕಾಫಿ ಕೊಡೆ. ತುಂಬಾ ತಲೆ ನೋವ್ತಿದೆ"
"............" ಮೌನ
" ಪ್ಲೀಸ್ ಕಣೇ. "
"-------" ಮೌನ
" ಅಮ್ಮಾ ತುಂಬಾ ತಲೆ ನೋವು. ಅಮ್ಮನ್ನ ಕರೆಸಿಕೊಳ್ಖ್ಬೇಕು"
" ಅತ್ತೆನ್ ಯಾಕೆ ಕರೆಸಿಕೊಳ್ತೀಯ. "
" ಮತ್ತೆ ನೀನು ಬಿಟ್ಟು ಹೋದರೆ ಯಾರಿದಾರೆ ನಂಗೆ"
"ಯಾಕೆ ಮತ್ತೆ ಬೇರೆ ಮದುವೆ ಯಾಗಬಹುದಲ್ಲವಾ?"
" ಬರೋರು ನಿನ್ನ ಥರ ಇರಲ್ಲವಲ್ಲಾ "
" ........ " ಮೌನ
"ಸಾರಿ ನಮಿತಾ"
"---------" ಮೌನ
"ಸಾರಿ ಕಣೆ"
"ಹೋಗಲಿ ಬಿಡು ನಿಂಗೆ ಕಾಫಿ ತಾನೆ ಕೊಡ್ತೀನಿ"
"ಆಮೇಲೆ"
" ನಿಂಗೆ ನವರತ್ನ ಪಲಾವ್ ಮಾಡಿಕೊಡ್ತೀನಿ ಆಯ್ತಾ"
"ಆಮೇಲೆ"
"ಅಮೇಲಿನ ಎಲ್ಲಾನು ಆಮೇಲೆ"
ಅರ್ಥಗರ್ಭಿತ ನಗುವಿನ ಅಲೆ