ಚಲೋ ಮಲ್ಲೇಶ್ವರಂ .....14

ಚಲೋ ಮಲ್ಲೇಶ್ವರಂ .....14

ಈ ಪಾರ್ಥಸಾರಥಿಯವರ ಪ್ರಾಬ್ಲ೦ ನ೦ಗೆ ತಕ್ಷಣ ಅರ್ಥ ಆಯ್ತು, ಅವರ ಹತ್ತಿರ ಹೋಗಿ ಅವರು ಕಣ್ಣಿನ ಹತ್ರ ಇಟ್ಟುಕೊಂಡಿದ್ದ ಬೈನಾಕ್ಯುಲರ್ ಕಿತ್ಕೊಂಡು

-‘ಏನ್ರಿ ಪಾರ್ಥ ನೀವು ದುರ್ಬೀನ್ನಲ್ಲಿ ನೋಡಿದ್ರೆ ಇಷ್ಟಿರೋದು ಅಷ್ಟಾಗಿ ಕಾಣುತ್ತೆ, ಅಂತದ್ರಲ್ಲಿ ಗಣೇಶ್ ಜಿ ಸ್ವಲ್ಪ ದಪ್ಪ ಇದ್ದಾರೆ, ನೀವು ಚಿಕ್ಕು ದುರ್ಬೀನ್ನಲ್ಲಿ ನೋಡ್ಕೊಂಡು ಅದನ್ನೆ ಏನೇನೊ ಭ್ರಮಿಸಿ ‘ಹುರಿನ ಹಗ್ಗ ಮಾಡ್ತಿದ್ದೀರಲ್ಲ‘ - ಅಂದೆ

ಪಾರ್ಥಸಾರಥಿ -‘ ಅರೆ ಹೌದಲ್ವ ನನಗೆ ಗೊತ್ತೆ ಆಗ್ಲಿಲ್ಲ ನೋಡಿ, ಇದ್ರಲ್ಲಿ ನ್ಯಾಚುರಲ್ಲಾಗಿ ಕಾಣ್ತಿತ್ತಲ್ಲ ಹಾಗಾಗಿ ನನಗೆ ಹೊಳೀಲೇ ಇಲ್ಲ‘-

-‘ಅದು ಹಾಗೆ, ಅದೆ ಆ ಬಿಟಿಎಸ್ ಬಸ್ ನಲ್ಲಿ ಗುಂಡು ಸೂಜಿ ಚುಚ್ಚಿ ಮರ್ಡರ್ ಮಾಡ್ಸೋ ಪ್ಲಾನ್ ಇರೊ ಕಥೆ, ದೆವ್ವಗಳ ಕಥೆ ಎಲ್ಲ ಬರೀತೀರಲ್ಲ, ಹಾಗಾಗಿ ನಿಮಗೆ ಒಮೊಮ್ಮೆ ನ್ಯಾಚುರಲ್ ತಿಂಗ್ಸೆಲ್ಲ ಹ್ಯಾಗ್ಯಾಗೊ ಕಾಣುತ್ವೆ, ಹೋಗ್ಲಿ ಬಿಡಿ ಸದ್ಯ ಎರ್ಡೆಡು ಗಣೇಶ್ ಜಿ ಎಲ್ಲಿಂದ ಬಂದ್ರು?, ಏನಿದು ಅಂತ ಎಲ್ಲ ತಲೆ ಕೆಡಿಸ್ಕೊಂಡಿದ್ರು‘- ಅಂದೆ.

-‘ಅಯ್ಯೊ ನೀವು ಇಬಿಬ್ಬರು ಗಣೇಶ ಕಾಣ್ತಿದ್ದಾರೆ ಅಂದಾಗ್ಲೆ ನಂಗೆ ಗಾಬ್ರಿಯಾಯ್ತು, ಜೊತೆಗೆ ಅನುಮಾನ ಬಂತು, ತಿರುಗಿ ಆ ಕಡೆ ನೋಡಿದ್ರೆ ಪಾಪ ಒಬ್ರೆ ಗಣೇಶ್ ಜಿ ಇದ್ದಾರೆ, ತಕ್ಷಣ ನಿಮ್ಮ ಯಡವುಟ್ಟು ಅರ್ಥವಾಗಲಿಲ್ಲ ಆದ್ರೆ ರಾಂಮೋಹನ್ ಕಂಡ್ಕೊಂಬಿಟ್ರು. ಅಲ್ಲ ಇದೆ ಥೀಮ್ ಇಟ್ಕೊಂಡು ನೀವು ಯಾಕೆ ಒಂದು ಕಥೆ ಬರಿಬಾರ್ದು ಪಾರ್ಥ ಅವ್ರೆ‘- ಅಂದ್ರು ಚೇತನ್

-‘ಹೌದೌದು ಒಳ್ಳೆ ಯೋಚನೆ, ‘ಮಲ್ಲೇಶ್ವರಂ ನಲ್ಲಿ ಕಂಡ ಸೋಜಿಗ‘ ಅಂತ ಒಂದು ಸೀರಿಸ್ ಮಾಡ್ಬಿಬಿಡ್ತಿನಿ‘-

-‘ಸರಿ ಇನ್ನು ಸುರ್ವಚ್ಕಂಡ್ರು, ರೀ ಸತೀಶ್ ಏನ್ರಿ ಇವ್ರ ಕಥೆ ಅಲ್ಲಿ ತುಂಕೂರ್ಗೆ ಹೋಗ್ತಾರೆ ಬರ್ತಾ ದಾರೀಲಿ ಮಳೆ ಬಂದ್ರೆ ಪಟ ಇಡ್ಕಂಬಂದು ಒಂದು ಕಥೆ ಬರ್ದಾಕ್ತರೆ, ಮನೆಮುಂದೆ ಓತಿಕೇತ ಬಂದ್ರೆ ಪಟ ಹಿಡ್ದು ಉಸುರುವಳ್ಳಿ ಅಂತ ಹಾಕ್ತಾರೆ, ಇಂಗೇ ಮಾಡಿ, ಮಾಡಿ ಕಣ್ರಿ ಈ ವಯ್ಯ ಒಂದು ವರ್ಷದಾಗೆ ರೆಕಾರ್ಡ್ ಬ್ರೇಕ್ ಮಾಡೊ ಅಷ್ಟು ಲೇಖನ ಬರ್ದ್ಬಿಟ್ರು, ಆದ್ರೂ ಆ ಸಿಂಮಾವಲೋಖ್ನ ಐತಲ್ಲ ಅದು ಭೇಷಾಗಿರ್ತದೆ ಅಲ್ವ‘- ಅಂದೆ ಹಳ್ಳಿ ಭಾಷೆನಲ್ಲಿ

-‘ಕಂಡಿದಿನಿ ಸುಮ್ನಿರ್ರಿ ನಿಮ್ಮದು ನಾ ಕಾಣ್ನಾ, ಕಥೆಗಾರ ಅಂತ ಕನ್ಸು ಕಾಣ್ತಾ ಪಟ್ಟ ಪಾಡು‘- ಅಂದ್ರು ಪಾರ್ಥ ಅವ್ರು

ಅಷ್ಟರಲ್ಲಿ ಆಸು ಸಾರ್ ಇದ್ಗಂಡು -‘ವಿಷಯ ಚಿಕ್ಕದಿದು ಮರೆತುಬಿಡಿ, ಹಿಡಿದಿರುವ ದುರ್ಬೀನು ಚಿಕ್ಕುದದು ಕೊಟ್ಟುಬಿಡಿ‘- ಅಂತ ಹೇಳಿದ ಪ್ರಾಸ ಬದ್ದವಾದ ಅವರ ಮಾತಿನಿಂದ ಎಲ್ಲರ ಮುಖದಲ್ಲಿ ನಗು ಕಾಣಿಸಿತು.

ವಿಚಾರ ಇಷ್ಟು ಆಗೋ ಹೊತ್ಗೆ ನಮ್ಮ ಹತ್ರ ಬಂದ ಇಬ್ರು ಪಿ ಸೀ ಗಳು,

-‘ಯಾರ್ರಿ ಅದು ಇಲ್ಲಿ ಪಾರ್ಥಸಾರ್ಥಿಗಣೆಸ್, ಏನ್ಹೆಸ್ರು ಹಿಂಗಿದೆ ನಿಂದು? ಆ... ಬರ್ರಿ ಸಾಹೇಬ್ರು ಕರೀತಾವ್ರೆ ಟೇಸನ್ಗೆ‘- ಅಂದ್ರು.

-‘ನನ್ಯಾಕ್ಸಾರ್ ಕರೀತಿದ್ದಾರೆ ನಿಮ್ಸಾಹೇಬ್ರು?‘- ಅಂದ್ರು ಪಾರ್ಥಸಾರಥಿ.

-‘ಮತ್ತಿನೇನು.. ಸುಮ್ಕಿರ್ದೆ ನೀವು ಆ ಬಾರಿಮುತ್ತು ತಂಟೆಗ್ಯಾಕೆ ಹೋದ್ರಿ, ಆ ಯಮ್ಮ ಬಂದು ಟೇಸನಲ್ಲಿ ಸಾಹೇಬ್ರು ತವ ಕುಂತಿದೆ, ಅದ್ಕೆ ಸಾಹೇಬ್ರಿದ್ಗಂಡು, ಹೋಗ್ರಯ್ಯ ಅದ್ಯಾರು ಕರ್ಕಂಬನ್ನಿ, ಒಳ್ಳೆ ಟೆರರಿಸ್ಟ್ ಗ್ಯಾಂಗ್ ಓಡಾಡ್ದಂಗೆ ಈ ಏರಿಯಾದಲ್ಲಿ ಒಂದು ಗುಂಪು ಸುತ್ತಾಕ್ತಾಇದೆ, ಅವ್ರಲ್ಲೆ ಯಾರೊ ಇರ್ಬೇಕು ನೋಡಿ ಕರ್ಕಂಬನ್ನಿ, ಇನ್ನೊಂದ್ಸಾರ್ತಿ ಮಲ್ಲೇಶ್ವರದ ಕಡೆ ತಿರುಗಿ ನೋಡ್ಬಾರ್ದು, ಈ ಮೀಸೆ ಓಂಕಾರಯ್ಯ ಅಂದ್ರೆ ಏನು ಅಂತ ತೋರ್ಸ್ತಿನಿ ಅಂತ ಹೇಳಿ ಕಳ್ಸವ್ರೆ, ಬರ್ರಿ ಬರ್ರಿ ಐತೆ ನಿಮ್ಗೆ‘- ಅಂದ್ರು.

ಇದನ್ನು ಕೇಳಿದ ಆಸು ಅವ್ರು ಕೋಡ್ ವರ್ಡ್ ಹೇಳ್ದಂಗೆ

‘ಹಾರುತ ದೂರ ದೂರ,
ನಾವೋಡುವ ಬಾರಾ ರಾರ,
ಮತ್ತೆ ಸೇರುವ ಸರ್ಕಲಲಿ ದೂರ,
ಕೈಗೂಡಲಿ ಓಡೋ ವಿಚಾರ‘

ಪ್ರಾಸ ಬದ್ದವಾದ ಅವರ ಕೋಡಿನ ಹಾಡು ಕೇಳಿದ್ದೆ ತಡ ಒಂದೆ ಉಸುರಿಗೆ ಒಬ್ಬೊಬ್ಬರು ಒಂದೋದು ಕಡೆಗೆ ಅಲ್ಲಿಂದ ಓಡಿಬಿಟ್ಟರು, ಏನಾಗುತ್ತಿದೆ ಎಂದು ಪಿಸೀಗಳು ಲೆಕ್ಕ ಹಾಕುವಷ್ಟರಲ್ಲಿ ಜಾಗ ಖಾಲಿಯಾಗಿತ್ತು.





 

Rating
No votes yet

Comments