ಚಲೋ ಮಲ್ಲೇಶ್ವರ ೨೧

ಚಲೋ ಮಲ್ಲೇಶ್ವರ ೨೧

"ನಮಗೆ ಬೇಗ ಮಲ್ಲೇಶ್ವರ ತೋರಿಸ್ರಿ ಟೈಮ್ ಆಯ್ತು ಅ0ದರೆ ನಮ್ಮನ್ನ ಮಲ್ಲೇಶ್ವರ ಮೈದಾನದಲ್ಲಿ ಬಿಟ್ಟು ನೀವು ಅದೆಲ್ಲೊ ಸದಾಶಿವನಗರಕ್ಕೆ ಹೋಗಿಬಿಟ್ರಿ ಎರಡು ತಿ0ಗಳಿನಿ0ದ ಜೊತೆಗಿದ್ದರು ನಮಗೆ ತಿನ್ನಲು ಹುಲ್ಲು ಕಡ್ಡಿಯು ಇಲ್ಲ..." ಪಾರ್ಥಸಾರಥಿಯವರಂದದ್ದು ಕೇಳಿ ಗಣೇಶರ "ಕರುಳು ಚುರ್" ಎಂದು, ರಸ್ತೆ ಪಕ್ಕದ ಗಾಡಿಯಲ್ಲಿದ್ದ ಅಮೆರಿಕನ್ ಕಾರ್ನ್, ಬೇಲ್‌ಪೂರಿ, ಜೋಳ. lays, ಕುರ್ಕುರೆ.. ...ಎಲ್ಲಾ ಕಟ್ಟಿಕೊಂಡು ಮಲ್ಲೇಶ್ವರಕ್ಕೆ ದೌಡಾಯಿಸಿದರು.


ಗಣೇಶರನ್ನು ಕಂಡದ್ದೇ, ಪಟಾಕಿ ಅಂಗಡಿಗೆ ಬೆಂಕಿ ಬಿದ್ದ ಹಾಗೇ, ಎಲ್ಲಾ ಒಟ್ಟಿಗೆ ಬೈಯಲು ಶುರುಮಾಡಿದರು. ಎಲ್ಲರಿಗೂ ತಿನ್ನಲು ಕೊಟ್ಟ ಮೇಲೆ ಸಮಾಧಾನವಾಗಿ ಒಬ್ಬೊಬ್ಬರೇ ಒಂದೊಂದು ಪ(ಚ)ಟಾಕಿ ಹಾರಿಸಿದರು:-


ಪಾರ್ಥಸಾರಥಿಯವರ ಮೊದಲ ಮಾಲೆ ಪಟಾಕಿ- " ಅದೇನು ಅಂತಾ ಮುಕ್ಕುತ್ತಾ ಇರುತ್ತೀರಾ? ಆ ಬಾಯಿಗೆ+ ಹೊಟ್ಟೆಗೆ ಸ್ವಲ್ಪ ರೆಸ್ಟ್ ಕೊಡಬಾರದಾ? ನಾವೆಲ್ಲಾ ಮಲ್ಲೇಶ್ವರ ಸುತ್ತಿ ಸುತ್ತಿ ೧-೨ ಕೆ.ಜಿ. ಕಮ್ಮಿಯಾದರೆ, ಈ ಜನದ ಹೊಟ್ಟೆ ಎರಡು ಸುತ್ತು ಜಾಸ್ತಿಯಾಗಿದೆ, ಅಲ್ವಾ..ಚಿಕ್ಕು!?


ಚಿಕ್ಕುನ ಚಿಕ್ಕ ಬಾಂಬ್ - ಅದು ಹೊಟ್ಟೇನಾ!? ಬ್ರಹ್ಮಾಂಡಾ!!


ಮಂಜಣ್ಣನ ಮಳೆ ಪಟಾಕಿ- ನಿಜ ಹೇಳಿ ಗಣೇಸಣ್ಣ.. ನಿಮ್ಮ ಪ್ಯಾಂಟು ಹೊಲಿಸಲು ಎಷ್ಟು ಮೀಟರ್ ಬಟ್ಟೆ ಬೇಕಾಗಬಹುದು?( ಕಿಲೋ ಮೀಟರ್ ಎಂದು ತಿದ್ದಿದರು ರಾಮಮೋಹನರು)


ಜಯಂತ್ ವಿಷ್ಣು ಚಕ್ರ- ಗಣೇಸಣ್ಣ, ನೀವು ಈ ಪ್ಯಾಂಟ್‌ಗಿಂತ ಸೊಂಟಕ್ಕೆ ಸುತ್ತಿದ್ದ ಜರತಾರಿ ಸೀರೆಯಲ್ಲೇ ಚೆನ್ನಾಗಿ ಕಾಣಿಸುತ್ತಿದ್ರಿ...


ಗೋಪಾಲರ ಬಾಂಬು- ಈಗ ಸ್ಪರ್ಧೆ ಇರುವುದು ಸಚಿನ್ ಮತ್ತು ಗಣೇಶರಿಗೆ-ಯಾರು ಮೊದಲು ಸೆಂಚುರಿ ತಲುಪುವುದು ಎಂದು! (ಎರಡು ವರ್ಷದ ಮೊದಲೇ ಈ ದಾಖಲೆ ಗಣೇಶರು ದಾಟಿಯಾಗಿದೆ:) )


ಸತೀಶ್‌ಗೆ ಗಣೇಶರ ಮೇಲೆ ಅಯ್ಯೋ ಪಾಪ ಅನಿಸಿತೋ ಏನೋ...."ಯಾಕೆ ಗಣೇಶರೆ, ನೀವು ಡಯಟ್ ಮತ್ತು ವ್ಯಾಯಾಮ ಮಾಡಿ, ಸ್ಲಿಮ್ ಆಗಲು ಪ್ರಯತ್ನಿಸಬಾರದು?" ಅಂದರು.


ಗಣೇಶರಿಗೂ ಮಾತನಾಡಲು ಅವಕಾಶ ಸಿಕ್ಕಿತು- " ನಾನು ದಿನಾ ಬೆಳಗ್ಗೆ ಬೇಗ ಎಂಟು ಗಂಟೆಗೇ ಎದ್ದು,ಮನೆಯಲ್ಲಿ ಏನೂ ತಿನ್ನದೇ, ಬರೀ ೨ ಲೋಟ ನೀರು ಕುಡಿದು ಜಾಗಿಂಗ್ ಹೋಗುತ್ತೇನೆ. ಆದರೂ ತೂಕ ಇಳಿಯುತ್ತಿಲ್ಲಾsss.."


 


ಪಾರ್ಥಸಾರಥಿ : ಸುಳ್ಳು ಸುಳ್ಳು, ನಾನು ನಂಬುವುದಿಲ್ಲ. ಏನೂ ತಿನ್ನುವುದಿಲ್ಲವಾ? ಜಾಗಿಂಗ್ ಮುಗಿಸಿ ಬರುವಾಗ ರಸ್ತೆ ಬದಿಯಲ್ಲಿ...?


ಗ : ಊಹೂಂ..ಏನೂ ತಿನ್ನುವುದಿಲ್ಲ..


ಪಾ : ರಸ್ತೆ ಬದಿಯಲ್ಲಿ ತಿನ್ನುವುದಿಲ್ಲ..ಹೋಟಲಲ್ಲಿ??


ಗ : ಹೋಟಲಲ್ಲಿ..ನಿಮ್ಮ ಹತ್ತಿರ ಏನು ಮುಚ್ಚುಮರೆ, ತಿನ್ನುತ್ತೇನೆ. ಆದರೆ ಜಾಗಿಂಗ್ ಮುಗಿಸಿ ಬರುವಾಗ ಅಲ್ಲ. ಜಾಗಿಂಗ್‌ಗೆ ಹೊರಟಾಗಲೇ..


ಪಾರ್ಥಸಾರಥಿಯವರು ಬೇಲ್ ಪುರಿ ಖಾಲಿ ಮಾಡಿ, ಕುರ್‌ಕುರೆ ಪ್ಯಾಕೆಟ್‌ಗೆ ಕೈ ಹಾಕುತ್ತಾ.." ಈ ಜನವನ್ನ ತಿದ್ದಲು ಸಾಧ್ಯವಿಲ್ಲ. ಶ್ರೀಧರ್, ನೀವ್ಯಾಕೆ ಏನೂ ತಿನ್ನುತ್ತಿಲ್ಲಾ? " ಎಂದು ಸುಮ್ಮನೆ ಮೂಲೆಯಲ್ಲಿ ಕುಳಿತಿದ್ದ ಶ್ರೀಧರರನ್ನು ವಿಚಾರಿಸಿದರು.


ಶ್ರೀಧರ್ : "ಈ ಜಂಕ್ ಫುಡ್ ಎಲ್ಲಾ ನನಗೆ ಇಷ್ಟವಿಲ್ಲ. ನಾನು ಕಿಸೆಯಲ್ಲಿ ಯಾವಾಗಲೂ ಬಾದಾಮಿ ಇಟ್ಟುಕೊಳ್ಳುತ್ತೇನೆ" ಎಂದು ಕಿಸೆಯಿಂದ ಒಂದು ಡಬ್ಬಿ ತೆಗೆದು ಎಲ್ಲರಿಗೂ ಬಾದಾಮಿ ತಿನ್ನಲು ಕೊಟ್ಟರು. " ಇದು ಆರೋಗ್ಯಕ್ಕೆ ಒಳ್ಳೆಯದು. ವಿಟಮಿನ್ ಬಿ೧,೨,೩,೫,೬., ವಿಟಮಿನ್ ಇ, ಕ್ಯಾಲ್ಸಿಯಂ, ಹೀಗೆ ೮-೧೦ ರೂ ಖರ್ಚು ಮಾಡಿ ಮಲ್ಟಿ ಮಿನರಲ್, ಮಲ್ಟಿ ವಿಟಮಿನ್ ಮಾತ್ರೆ ತಿನ್ನುತ್ತೀರಿ.. ಅದೆಲ್ಲಾ ಈ ನಾಲ್ಕು ಬಾದಾಮಿಯಲ್ಲಿ ಸಾಕಷ್ಟು ಇದೆ. ಅದಲ್ಲದೇ ನೀವು ತಿನ್ನುವ ಕುರ್‌ಕುರೆಗಿಂತ ಜಾಸ್ತಿ ಫಾಟ್ ಇದರಲ್ಲಿದ್ದರೂ, ಕೊಲೆಸ್ಟ್ರಾಲ್‌ ಕಮ್ಮಿ ಮಾಡುವುದು, ಹಾರ್ಟ್‌ಗೆ ಒಳ್ಳೆಯದು. ಚಾರಣ ಹೋಗುವವರು ನೆನಪಲ್ಲಿ ಇದನ್ನು ಕಿಸೆಯಲ್ಲಿ ಇಟ್ಟುಕೊಳ್ಳುವರು. ಎಲ್ಲಾದರೂ ದಾರಿ ತಪ್ಪಿ ತಿನ್ನಲು ಏನೂ ಸಿಗದಿದ್ದರೆ ದಿನದೂಡಲು ಸಹಾಯವಾಗುವುದು."


ಗಣೇಶ : ಹಾಗಿದ್ದರೆ ತಿನ್ನಲು ಏನೂ ಸಿಗದೇ ಒದ್ದಾಡುತ್ತಿದ್ದ ಪಾರ್ಥಸಾರಥಿಯವರಿಗೆ ಕೊಡಬಾರದಿತ್ತೇ?


ಶ್ರೀಧರ್ : "ಅವರಾ...ಮಂಜಣ್ಣನವರ ಕಿಸೆಯಿಂದ ಹುರಿದ ಗೋಡಂಬಿ ತೆಗೆದು ತೆಗೆದು ತಿನ್ನುತ್ತಾ ಇದ್ದರು..." ಪಾರ್ಥಸಾರಥಿಯವರು ಕೂಡಲೇ ವಿಷಯಾಂತರ ಮಾಡಿ " ಪಾಪ. ಸತ್ಯ ಅವರು ಅಷ್ಟು ದೂರದಿಂದ ನೀವು ಮಲ್ಲೇಶ್ವರ ತೋರಿಸುತ್ತೀರಿ ಅಂದು ಬಂದರೆ, ನೀವು ಇಲ್ಲಿಂದ ಮುಂದೆ ಹೋಗುತ್ತಲೇ ಇಲ್ಲಾ..?


ಆಗ ಜಯಂತ್ " ಇನ್ನು ಟೈಮ್ ವೇಸ್ಟ್ ಮಾಡುವುದು ಬೇಡ. ರಾಮಮೋಹನರೆ, ನಿಮ್ಮ ಕಾರು ಎಲ್ಲಿದೆ? ಅದರಲ್ಲಿ ೧೩ನೇ ಕ್ರಾಸ್‌ಗೆ ಹೋಗಿ, ಶಿರ್ಡಿ ಸಾಯಿ ದೇವಸ್ಥಾನ ನೋಡೋಣ."


ರಾಮಮೋಹನ್ : "ಫಾರ್ಮುಲಾ ಒನ್ ರೇಸ್‌ನಲ್ಲಿ ನನ್ನ ಕಾರು ಇಲ್ಲಾ ಎಂದಾದ ಮೇಲೆ ಮನೆಯಲ್ಲಿ ಬಿಟ್ಟು ಬಂದೆ." ಎಂದು ಹೇಳಿ ತಿರುಗಿ ನೋಡುತ್ತಾರೆ.................. ಅವರ ಕಾರು ದೂರದಲ್ಲಿ ಬರುತ್ತಲಿದೆ!!!! ಸತೀಶ್ ಕಡೆ ದುರುಗುಟ್ಟಿಕೊಂಡು ನೋಡಿದರು ರಾಮ್ ಮೋಹನರು.


ಸತೀಶ್ : " ಇಲ್ಲಾ ಸರ್. ನಾನೇನೂ ಮಾಡಿಲ್ಲಾ... ಬಹುಷಃ ಫಾರ್ಮುಲಾ ಒನ್ ಕಾರಿನ ಜಿ.ಪಿ.ಆರ್.ಎಸ್., ಯಸ್. ಟಿ.ಯು. ವಿ., ಎಲ್ಲಾ ನಿಮ್ಮ ಕಾರಿಗೆ ಹಾಕಿದ್ದೆವಲ್ಲಾ? ಅದನ್ನು ತೆಗೆದಿರಲಿಲ್ಲ. ಅದರ ಸಹಾಯದಿಂದ ಕಾರು ಈಗ ನೀವು ಎಲ್ಲಿದ್ದೀರೋ ಟ್ರಾಕ್ ಮಾಡಿಕೊಂಡು ಬರುತ್ತಲಿದೆ ಕಾಣುತ್ತದೆ!!?"


ಕಾರು ರಾಮಮೋಹನರ ಹತ್ತಿರ ಬಂದು ಹಾರ್ನ್ ಮಾಡುತ್ತಾ ನಿಂತಿತು!!!


"ನಾನು ರಾಮಮೋಹನರ ಮನೆಗೆ ಹೋಗಿದ್ದೆ. ಅವರು ಕೆಂಪು ಮಣ್ಣು ತರಲು ಹೋದವರು ಇನ್ನೂ ಬಂದಿಲ್ಲ ಎಂದರು. ೩-೪ sms ಕಳುಹಿಸಿದೆ. ಉತ್ತರವೂ ಇಲ್ಲಾ..ಅವರ ಕಾರು ಇತ್ತು. ಅದರಲ್ಲಿ ಎಮ್.ಜಿ.ರೋಡ್‌ಗೆ ಹೋಗಿ ಮೆಟ್ರೋ ರೈಲಲ್ಲಿ ಸುತ್ತಾಡಿ, ಇಲ್ಲಿದ್ದೀರಿ ಎಂದು ಗೊತ್ತಾದ ಮೇಲೆ ನೇರ ಇಲ್ಲಿಗೆ ಬಂದೆ" ಅಂದರು ನಾವಡರು.


"ನೀವು ಬಂದದ್ದು, ಕಾರು ತಂದದ್ದು ಒಳ್ಳೆಯದಾಯ್ತು. ಹೊರಡೋಣ ನಾವು ಸಾಯಿ ಮಂದಿರಕ್ಕೆ" ಎಂದಾಗ ಎಲ್ಲರೂ ಕಾರು ಹತ್ತಿದರು.


ಗಣೇಶ : "ನಾನೂ........."


ಎಲ್ಲರೂ :" ಬೇಗ ಬೇಗ ನಡಕೊಂಡು ೧೩ನೇ ಕ್ರಾಸ್‌ಗೆ ಬನ್ನಿ..ಟಾ..ಟಾ.." 

Rating
No votes yet

Comments