ಚಲೋ ಮಲ್ಲೇಶ್ವರ-೨

ಚಲೋ ಮಲ್ಲೇಶ್ವರ-೨

ಎಲ್ಲರಿಗೂ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬರಲು ಹೇಳಿದೆ. ಮಂತ್ರಿ ಮಾಲ್‌ನಿಂದಾಗಿ ಮಲ್ಲೇಶ್ವರದಲ್ಲಿ ಪಾರ್ಕಿಂಗ್ ಪ್ರಾಬ್ಲಂ ಇದೆ. ಕಾರು/ಬೈಕ್ ತರಬೇಡಿ. ಯಶವಂತಪುರ,ಪೀಣ್ಯ, ವಿದ್ಯಾರಣ್ಯಪುರ.. ಬೆಂಗಳೂರು ಉತ್ತರದ ಕಡೆಗೆ ಹೋಗುವ ಹೆಚ್ಚಿನ ಬಸ್ಸೆಲ್ಲಾ ಮಲ್ಲೇಶ್ವರಕ್ಕಾಗೇ ಹೋಗುವುದರಿಂದ ಬೇಕಾದಷ್ಟು ಬಸ್ ಇದೆ. ಬಸ್ಸಲ್ಲೇ ಹೋಗೋಣ. ನೇರ ಮಲ್ಲೇಶ್ವರಕ್ಕೆ ಬಂದವರು ಮಂತ್ರಿ ಮಾಲ್ ಎದುರು ನಿಲ್ಲಿ ಎಂದು ತಿಳಿಸಿದ್ದೆ. ಯಾರೂ ಬರದಿದ್ದರೂ ನನ್ನ ದೂರದೂರಿನ ಗೆಳೆಯ ಅಂತೂ ಬರುತ್ತಾನೆ. ಅವನೊಂದಿಗೆ ಮಲ್ಲೇಶ್ವರ ಸುತ್ತಿದರಾಯಿತು ಅಂದುಕೊಂಡೆ.


ರವಿವಾರ ಬೆಳಗ್ಗೆ ಆರು ಗಂಟೆಗೇ (!!!) ಎದ್ದು ಮೆಜೆಸ್ಟಿಕ್‌ಗೆ ಹೊರಟೆ. ಆವಾಗಲೇ ಜಯಂತ್‌ ಫೋನ್ ಬಂತು-" ಗಣೇಶಣ್ಣ, ನಾನೂ ಬರುತ್ತೇನೆ. ಶಾರ್ಪ್ ಎಷ್ಟು ಹೊತ್ತಿಗೆ ಮೆಜೆಸ್ಟಿಕ್‌ನಲ್ಲಿ ಇರಬೇಕು?" ಅಂದು ಕೇಳಿದರು. "ಜಯಂತ್, ಇದು ವಾಚ್‌ಪಥವಲ್ಲಾ, ಹಲೋ ಮಲ್ಲೇಶ್ವರ. ಆರಾಮ ಹೊರಟು ಬನ್ನಿ. ವಾಚ್ ಮನೆಯಲ್ಲೇ ಬಿಟ್ಟು ಬಂದರೂ ಪರವಾಗಿಲ್ಲ" ಎಂದೆ.


ಮೆಜೆಸ್ಟಿಕ್ ತಲುಪಿದಾಗ ಇನ್ನೊಂದು ಫೋನ್- ನನ್ನ ದೂರದೂರಿನ ಗೆಳೆಯನಿಂದ- "ಲೋ..ಬೇಗ ಬಾರೋ... ಮಂಜಣ್ಣ ನನ್ನನ್ನು ಅಪಹರಿಸಿದ್ದಾರೆ. ಸಂಜೆ ಬಸವನಗುಡಿಯ ಹತ್ತಿರದ ಕಾರ್ಯಕ್ರಮಕ್ಕೆ ಕರಕೊಂಡು ಹೋಗುವರಂತೆ. ಹೇಗಾದರೂ ರಕ್ಷಿಸು."


"ಅಲ್ವೋ.. ಆ ಹಕ್ಕಿ ಹೆಸರಿನ ವಿಮಾನದಲ್ಲಿ ಯಾಕೆ ಬಂದಿ. ಅದರ ಓನರ್ ಮತ್ತು ಮಂಜಣ್ಣ ಚಡ್ಡಿದೋಸ್ತ್ ಕಣೋ. ನಾನೇ ಮಂಜಣ್ಣನ ಕಣ್ಣಿಗೆ ಬೀಳದಂತೆ ಓಡಾಡುತ್ತಿದ್ದೇನೆ..ನಿನ್ನನ್ನು ಹೇಗೆ ರಕ್ಷಿಸಲಿ? ಮುಂದಿನ ಸಲ ಬೆಂಗಳೂರಿಗೆ ಬಂದಾಗ ಸಿಗೋಣ. ಬೈ" ಎಂದೆ.


ಪಾಪದ ಗೆಳೆಯ ಮೂಲೆಯಲ್ಲಿ ನಿಂತು ಹೆದರಿ ನಡುಗುತ್ತಿರುವ ಫೋಟೋ ಇಲ್ಲಿದೆ :)- http://sampada.net/blog/%E0%B2%B5%E0%B2%BE%E0%B2%95%E0%B3%8D%E0%B2%AA%E0%B2%A5%E0%B2%A6-%E0%B3%AC%E0%B2%A8%E0%B3%86%E0%B2%AF-%E0%B2%97%E0%B3%8B%E0%B2%B7%E0%B3%8D%E0%B2%A0%E0%B2%BF%E0%B2%97%E0%B3%86-%E0%B2%B8%E0%B2%AA%E0%B3%8D%E0%B2%A4-%E0%B2%B8%E0%B2%BE%E0%B2%97%E0%B2%B0%E0%B2%97%E0%B2%B3%E0%B2%A8%E0%B3%8D%E0%B2%A8%E0%B3%81-%E0%B2%A6%E0%B2%BE%E0%B2%9F%E0%B2%BF-%E0%B2%AC%E0%B3%A6%E0%B2%A6-%E0%B2%85%E0%B2%AA%E0%B2%B0%E0%B3%82%E0%B2%AA%E0%B2%A6-%E0%B2%85%E0%B2%A4%E0%B2%BF%E0%B2%A5%E0%B2%BF/22/08/2011/33016#comment-147995


ಚಿತ್ರದ ಕೆಳಗೆ ಪ್ರತಿಕ್ರಿಯೆಗಳಲ್ಲಿ ಮಂಜಣ್ಣನವರ ಪ್ರತಿಕ್ರಿಯೆ ನೋಡಿದರೆ ನಾನು ಯಾಕೆ ಅವರ ಕಣ್ಣುತಪ್ಪಿಸಿ ಓಡಾಡುತ್ತಿದ್ದೇನೆ ಅಂತ ಗೊತ್ತಾಗುವುದು. :)


-ಗಣೇಶ.


**********


ನಾಳೆ ಚಲೋ ಮಲ್ಲೇಶ್ವರ ಪಾದಯಾತ್ರೆ ಪ್ರಾರಂಭ...


 

Rating
No votes yet

Comments