ಚಲ್ತೇ...ಚಗ್ತೇ...ಮೆರೆ ಯೇ..

5

"ವ್ಹಾ ಕಿಂಗ್" ಅಂತಾರೆ ನನ್ನ! ಕ್ವೀನ್ ಜತೆ ಸಂಜೆ "ವಾಕಿಂಗ್" ಹೋಗುವಾಗ. ಸ್ಟೈಲಾಗಿ ಎದೆಯುಬ್ಬಿಸಿ ನಡೆಯುತ್ತಾ, ಪ್ಯಾಂಟಿನ ಹಿಂದಿನ ಕಿಸೆಯಲ್ಲಿ ಕ್ರೆಡಿಟ್ ಕಾರ್ಡ್ ಇದೆಯಾ ಎಂದು ಮೆಲ್ಲ ಮುಟ್ಟಿ ಕನ್‌ಫರ್ಮ್ ಮಾಡಿಕೊಂಡು, ಅಲ್ಲೇ ಇರುವ ಬಾಚಣಿಗೆ ತೆಗೆದು ಗಾಳಿಗೆ ಹಾರಾಡುವ ನಾಲ್ಕು ತಲೆಕೂದಲು ಬಾಚಿ ಪುನಃ ಕಿಸೆಯಲ್ಲಿ ಇಟ್ಟುಕೊಳ್ಳುವೆ.

ವಾಕಿಂಗ್ ಮುಗಿಸಿ ಹಿಂದೆ ಬರುವಾಗ...-೩ ತುಂಬಿದ ಚೀಲಗಳನ್ನು ಹೆಗಲಿಗೇರಿಸಿ "ವಾ ಸರ್ವೆಂಟ್" ಆಗಿರುವೆ :( ಎಲ್ಲರಂತೆ ಸಂಜೆ ತಡವಾಗಿ ಮನೆಗೆ ಬಂದು, "ಆಫೀಸಲ್ಲಿ ವಿಪರೀತ ಕೆಲಸ.." ಅನ್ನಬಹುದು. ಆದರೆ ಸಂಜೆಯ ಕಾಫಿ+ಸ್ಪೆಶಲ್ ತಿನಿಸುಗಳು ತಪ್ಪುತ್ತದೆ. ಅದಕ್ಕಾಗಿ ಕಾಫಿ- ತಿಂಡಿ ಮುಗಿಸಿ ಹೆಚ್ಚಾಗಿ "ಕಾರಲ್ಲೇ" ವಾಕಿಂಗ್ ಹೋಗುವೆ. ಕಾರಲ್ಲೇ ಹೋದರೆ ಉಳಿತಾಯ ಜಾಸ್ತಿ. "ಅಲ್ಲಿ ಪಾರ್ಕಿಂಗ್ ಸ್ಥಳವಿಲ್ಲ...ಇಲ್ಲಿ ನೋ ಎಂಟ್ರಿ" ಎಂದೆಲ್ಲಾ ಹೇಳಿ ತಪ್ಪಿಸಬಹುದು.

ವಾಕಿಂಗ್ ಹೋಗದೇ ಇದ್ದರೆ...? ಪಕ್ಕದ ಮನೆಯಮ್ಮನವರೊಂದಿಗೆ ಮಾತನಾಡುತ್ತಾ, "ಬಂದೇ ರೀ...ಬಂದೇ.." ಅನ್ನುತ್ತಾ, ಸಂಜೆ ಕಳೆದು ರಾತ್ರಿ ಆದರೂ.. ಕಾಫಿ ಬಿಡಿ, ಮುಖದರ್ಶನವೂ ಆಗುವುದಿಲ್ಲ.

ಹೀಗೇ ಕಳೆದ ಸಂಜೆ ಎರಡು ಚೀಲ ಹೆಗಲಿಗೇರಿಸಿ, ನನ್ನ ಕ್ವೀನ್ ಹಿಂದೆ "ಚಲ್ತೇ..ಚಲ್ತೇ.." ಇದ್ದೆ. ಆಶ್ಚರ್ಯ! ರಸ್ತೆಬದಿಯಲ್ಲಿ ಚಗ್ತೆ ಸೊಪ್ಪಿನ ಗಿಡಗಳು ಇದ್ದವು! "ಸ್ವಲ್ಪ ಈ ಚೀಲ ಹಿಡಕೊಳ್ಳೆ. ನಮ್ಮ ಸಂಪದದ ಶೋಭಾ ಅವರುತಂಬುಳಿ ಮಾಡಲು ಹೇಳಿದ ಗಿಡ ಅಲ್ಲವೇ ಇದು..ಸ್ವಲ್ಪ ಸೊಪ್ಪು ತೆಗೆದುಕೊಳ್ಳುವೆ" ಎಂದೆ.

"ಥತ್..ನಿಮ್ಮ..ಮೋರಿಬದಿಯ ಗಿಡ..ಛೀsss" ಅಂದಳು.

"ಅಂಗಡಿಯಲ್ಲಿ, ಗಾಡಿಯಲ್ಲಿ ಪರ್ಚೇಸ್ ಮಾಡಿದ್ದು ಮೋರಿಬದಿಯಲ್ಲಿ ಬೆಳೆದದ್ದಲ್ಲ ಎಂಬುದಕ್ಕೆ ಏನು ಗ್ಯಾರಂಟಿ?" ಅಂದೆ. ವಾದ ಸಂಪದದಲ್ಲಿ ಮಾಡಬಹುದು,ಹೆಂಡತಿ ಬಳಿಯಲ್ಲ ಎಂದು ಗೊತ್ತಿದ್ದೂ ತಪ್ಪು ಮಾಡಿದೆ. "........" (ಎಡಿಟ್ ಮಾಡಲಾಗಿದೆ)

"ಹೋಗಲಿ ಬಿಡೆ. ಒಂದೆರಡು ಫೋಟೋ ಆದರೂ ತೆಗೆಯುತ್ತೇನೆ." ಅಂದೆ. ಕೋಪದಲ್ಲೂ ಸ್ಟೈಲಾಗಿ ಪೋಸ್ ಕೊಟ್ಟು ನಿಂತಳು. ಸುಮ್ಮನೆ ಒಂದೆರಡು ಕ್ಲಿಕ್ ಮಾಡಬಹುದಿತ್ತು. ಅದು ಬಿಟ್ಟು......"ನಿನ್ನದಲ್ವೇ.. ಗಿಡದ್ದು.." ಅಂದೆ. "............"(ಎಡಿಟೆಡ್).

ಬೇಗ ಬೇಗನೆ ಗಿಡದ ಕೆಲ ಫೋಟೋ ತೆಗೆದು, ಒಂದೆರಡು ಗಿಡವನ್ನು ಕಿತ್ತುಕೊಂಡು, ಹಿಂದೆ ಓಡಿಹೋಗಿ, ರಸ್ತೆಯ ಜನಗಳ ಬಗ್ಗೆ ಚಿಂತಿಸದೇ, "ಸ್ಸಾರಿ..ಕಣೇ.."ಅಂತ ಬಹಳ ರಮಿಸಿದರೂ, ಯಡ್ಡಿ ತರಹ ಮುಖ ಸಿಂಡರಿಸಿಕೊಂಡೇ ಹೋಗುತ್ತಿದ್ದಳು.

ಮನೆಗೆ ಹೋಗಿ ಸಾಮಾನೆಲ್ಲಾ ಇಳಿಸಿ, " ಈ ಚಗ್ತೆ ಸೊಪ್ಪಿನ ಎಲೆಯನ್ನು ಕೈ ಮುಷ್ಠಿಯ ಮೇಲೆ ಇಟ್ಟು ಇನ್ನೊಂದು ಕೈಯಿಂದ ಹೊಡೆದಾಗ ಟಪ್ ಅಂತ ಸೌಂಡ್ ಆಗುತ್ತದೆ" ಎಂದು ಹೇಳಿ ಮಾಡಿ ತೋರಿಸಿದೆ. "ಟಪ್ ಟಪ್" ಅಂತ ಎರಡು ಶಬ್ದವಾಯಿತು! "ಈ ಕಸವನ್ನೆಲ್ಲಾ ಇಲ್ಲಿಗೂ ತಂದ್ರಾ..ಹೊರಗೆ ತೊಟ್ಟಿಗೆ ಬೇಗ ಎಸೆದು ಬನ್ನಿ" ಎಂದು ಆಜ್ಞಾಪಿಸಿದಳು. ನೋವಾಗಿದ್ದ ಬೆನ್ನನ್ನು ಉಜ್ಜುತ್ತಾ "ಕಸನಾ..ಇದು! ಔಷಧೀ ಗಿಡ ಕಣೇ ಇದು. ತುಳುವಿನಲ್ಲಿ ಸಜಂಕ್, ಸಂಸ್ಕೃತದಲ್ಲಿ ಚಕ್ರಮರ್ದ, ಲ್ಯಾಟಿನ್‌ನಲ್ಲಿ  (   http://www.oswaldasia.org/species/c/casto/casto_en.html )Cassia tora ಎನ್ನುತ್ತಾರೆ. ರಿಂಗ್ ವರ್ಮ್‌ಗೆ ಇದು ರಾಮಬಾಣ...." ಕಣ್ಣು ಗರಗರ ತಿರುಗುವುದನ್ನು ನೋಡಿ, ಇನ್ನು ಇದ್ದರೆ ಅಪಾಯ ಎಂದು ಚಗ್ತೆಸೊಪ್ಪನ್ನೆಲಾ ಹಿಡಕೊಂಡು ಹೊರಗೆ ಬಂದೆ.

ಚಿತ್ರ ಕೃಪೆ: http://ayurvedicmedicinalplants.com/index.php?option=com_zoom&Itemid=26&page=view&catid=32&key=0%3E%E0%B2%9A%E0%B2%95%E0%B3%8D%E0%B2%B0%E0%B2%AE%E0%B2%B0%E0%B3%8D%E0%B2%A6%3C/a

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಶೋಭಾ ಅವರು ಹೇಳಿದ ತಂಬುಳಿ ಮನೆಯಲ್ಲೂ ಮಾಡಲಾಗಲಿಲ್ಲ :( ಮೇಲೆ ಲೇಖನದಲ್ಲೂ ಕೊಂಡಿ ತಪ್ಪಿದೆ- http://sampada.net/%E0%B2%9A%E0%B2%97%E0%B3%8D%E0%B2%A4%E0%B3%86-%E0%B2%...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾಸ್ಯದೊಂದಿಗೆ "ಕೊಂಡಿ" ಯೊಡನೆ ಮಾಹಿತಿ ಚನ್ನಾಗಿದೆ ಗಣೇಶ್ ರವರೇ .....ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚಿದ ಸತೀಶರಿಗೂ ಕೊಂಡಿ ಸರಿಮಾಡಿದ ಗಣೇಶರಿಗೂ ಧನ್ಯವಾದಗಳು.:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:))

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಸಂಗ ಚೆನ್ನಾಗಿ ಎನೊ ಇದೆ ಆದರೆ ಆ ’.....’ ಎಡಿಟೆಡ್ ನಲ್ಲಿ ಏನಿತ್ತೊ ಅನ್ನುವ ಕುತೂಹಲ ಸಾರ್ !

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) ಚೆನ್ನಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>>ಆ ’.....’ ಎಡಿಟೆಡ್ ನಲ್ಲಿ ಏನಿತ್ತೊ ಅನ್ನುವ ಕುತೂಹಲ ಸಾರ್ !---"ಚಲ್ತೇ ಚಗ್ತೇ ಮೆರೆ ಯೇ" ಪಿರೇಟೆಡ್ ವರ್ಶನ್ .. ಸಿಕ್ಕಿದರೆ ನೋಡಿ ಸರ್..:) ಮೆಚ್ಚಿದ ಶೋಭಾ,ಪ್ರೇಮಾಶ್ರೀ ಹಾಗೂ ಪಾರ್ಥಸಾರಥಿಯವರಿಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಣೇಶ್ ಅಣ್ಣ-ಈ ಮಧ್ಯೆ ನಿಮ್ಮಿಂದ ಬರಹಗಳು ಕಡಿಮೆ ಆಗಿ ಪ್ರತಿಕ್ರಿಯೆಗಳೇ ಜಾಸ್ತಿ ಆದವು ಅನ್ಸಿತ್ತು..ಈಗೀಗ ಬರಹಗಳು ಜಾಸ್ತಿ ಆಗ್ತಿವೆ...!
ಮೊದಮೊದಲು ಬರಹ ಓದುತ್ತ-ಇನ್ನು ಯಾಕೆ ಪ್ರಾಣಿ ಪಕ್ಷಿ ಗಿಡ ಮರ ಬಗ್ಗೆ ಬರೆದಿಲ್ಲ ಚಿತ್ರ ಇಲ್ಲ ಎಂದು ನೋಡುತಿರುವಾಗ್ಲೆ ನೀವು ಚಗ್ತೆ ಸೊಪ್ಪು ಬಗ್ಗೆ ಬರೆದದ್ದು ಕಣ್ಣಿಗೆ ಬಿದ್ದು ..ತುಟಿ ಮೇಲೆ ನಗೆ ತಾನಾಗೆ ಬಂತು. ;())
ಗುರುಗಳ ಹಾಗೆ ನನಗೂ ಆ ಎಡಿಟೆಡ್ ಸಂಭಾಷಣೆ ಏನಿರಬಹುದು ಎಂದು ಕುತೂಹಲ...!!
ಕೆಟ್ಟ ಕುತೂಹಲ.....!!
ಆದ್ರೆ ನೀವ್ ಆ ಸಸ್ಯ ಗಿಡದ ಚಿತ್ರ ಹಾಕದೆ ಇದ್ದುದು ಯಾಕೆ?
ಕೊಂಡಿ ಮಾತ್ರ ಕೊಟ್ಟಿರುವಿರಿ..>!!
ಸಂ ಸುಮ್ನೆ ತಲೇಲಿ ಇರೋದೇ ೪ ಕೂದಲು ಎಂದು ನಮ್ಮನ್ನು ......ರಿ ..!!

ಹಿಂದೆ ಸಿಕ್ಸ್ ಪ್ಯಾಕ್ ಹಂದಿ -ಎಂದು ಜಾಗಿಂಗ್ ವಾಕಿಂಗ್ ಜಿಮ್ಮಿಂಗ್ ನಮಗಲ್ಲ ಎಂದವರು ಕಾಲಾಯ ತಸ್ಮೈ ನಮಃ ಆಗಿದ್ದು ಯಾಕೆ...!
ಶುಭವಾಗಲಿ..

\।/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>> ಆದ್ರೆ ನೀವ್ ಆ ಸಸ್ಯ ಗಿಡದ ಚಿತ್ರ ಹಾಕದೆ ಇದ್ದುದು ಯಾಕೆ? ಕೊಂಡಿ ಮಾತ್ರ ಕೊಟ್ಟಿರುವಿರಿ..>!--------- ಚಿತ್ರಗಳು ನನ್ನ ಸಂಗ್ರಹದಲ್ಲಿದೆ ಎಂದು ಲೇಖನ ಬರೆದೆ. ಯಾವುದೋ ಮೊಬೈಲ್/ಮೆಮರಿಕಾರ್ಡ್/ಪೆನ್ ಡ್ರೈವ್ ಅಲ್ಲಿ ಇದೆ..ಹುಡುಕಲು ಸಮಯ ಸಾಲದೇ ಕೊಂಡಿಯನ್ನೇ ಕೊಟ್ಟೆ.>>> ಜಾಗಿಂಗ್ ವಾಕಿಂಗ್ ಜಿಮ್ಮಿಂಗ್ ನಮಗಲ್ಲ ಎಂದವರು ಕಾಲಾಯ ತಸ್ಮೈ ನಮಃ ಆಗಿದ್ದು ಯಾಕೆ...! -----ಮದುವೆ ಆಗಲು ಹೊರಟಿದ್ದೀರಲ್ಲಾ..ನಿಮಗೇ ಗೊತ್ತಾಗುವುದು..:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

-ಮದುವೆ ಆಗಲು ಹೊರಟಿದ್ದೀರಲ್ಲಾ..ನಿಮಗೇ ಗೊತ್ತಾಗುವುದು..:) !!!!!!!

ಇ0ತಹ‌ ಗುಟ್ಟಿನ‌ ವಿಷಯ‌ ನಿಮಗೆ ತಿಳಿದಿದ್ದಾರು ಹೇಗೆ ???? ಸಪ್ತಗಿರಿಗಿ ನಿಮಗು ಕಾ0ಟ್ಯಾಕ್ಟ್ ಇದೆ ಅ0ತ‌ ಈಗ‌ ಗೊತ್ತಾಯ್ತು !
ಈಗ‌ ಗಣೇಷರಲ್ಲ ಉತ್ತರಕೊಡಬೇಕಾಗಿರುವುದು ಸಪ್ತಗಿರಿಯವರು !! ಅವರಿಗೆ ಗಣೇಷ‌ ಯಾರು ಎ0ದು ಗೊತ್ತು ಆದರು ನಮ್ಮಜೊತೆ ಸೇರಿ ತಮಾಷಿ ಮಾಡುತ್ತಿದ್ದಾರೆ , ಈಗ‌ ಗಣೇಷರ‌ ಏಜೆ0ಟ್ ಯಾರು ಎ0ದು ತಿಳಿಯಿತು ಬಿಡಿ ! ಇನ್ನು ಗಣೇಶರನ್ನು ಹಿಡಿಯುವ‌ ಪ್ರಯತ್ನ ಬ0ದ್ !

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>>ಇ0ತಹ‌ ಗುಟ್ಟಿನ‌ ವಿಷಯ‌ ನಿಮಗೆ ತಿಳಿದಿದ್ದಾರು ಹೇಗೆ?----ನನಗೂ ಗೊತ್ತಾಗಿದ್ದು ಮೂರ್ತಿಯವರು ಕೊಟ್ಟ ಕೊಂಡಿಯಿಂದಲೇ! ಸಪ್ತಗಿರಿ ಕಳೆದವಾರ ಸಿಕ್ಕಿದಾಗಲೂ, ನೀವು ನಾಟಕ ಮಾಡುತ್ತಿರುವ ವಿಷ್ಯ ಹೇಳಿದ ಹೊರತು ಮದುವೆ ವಿಷಯ ಹೇಳಲೇ ಇಲ್ಲ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

;()೦೦೦

ನಾನವನಲ್ಲ..ಅಲ್ಲ..ಅಲ್ಲ....ನನ್ನಂಬಿ ಪ್ಲೀಜ್...!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮ-ದು-ವೆ ...!!
ಎಂಬ ಮೂರಕ್ಷರದ ಪದ ಹೇಳಿ ಎಲ್ಲ ಸಂಪದಿಗರೂ ಕುತೂಹಲಿಗಳೂ ಆಗಿ ನನ್ನೆಡೆಗೆ ಸಂಶಯದ ನೋಟ ಹರಿಸುವ ಹಾಗೆಯೂ ಮಾಡಿರುವಿರಿ..!!
ಮದುವೆ ಆಗಲೇಬೇಕು-ಆದರೆ ಅದಕ್ಕಿನ್ನೂ ಸಮಯವಿದೆ..!
ಆದರೂ ನೀವ್ ಗುಟ್ಟನ್ನು ರಟ್ಟು.........ರಿ ..!!
ಗಣೇಶ ಜೀ ಅವರನ್ನ ಹುಡುಕುವ ಪ್ರಯತ್ನ ನಡಸಿ ನಾನೆಲ್ಲಿ ನಿಮ್ಮನ್ನು ಗುಟ್ಟಾಗಿ ಮೀಟ್ ಮಾಡಿದೆನೋ? ಎಂದು ಎಲ್ಲರೂ ಭಾವಿಸುತ್ತಿರುವರು..!!
ಆದ್ರೆ ದಿನ ನಿತ್ಯ ಅಕ್ಕ ಪಕ್ಕ ಎದುರು ಬದುರು ಬರುವವರನ್ನು ಹೋಗುವವರನ್ನು 'ಇವರೇನಾ'?ಅವರು ಎಂದು ನಾನು ಇನ್ನೂ ಹುಡುಕುತ್ತಿರುವೆ...!!
ಯಾರಿಗ್ಗೊತ್ತು ಒಂದೊಮ್ಮ್ಮೆ ನಾವಿಬ್ಬರು ಎದುರು ಬದುರಾಗಿ ಹಾಡು ಹೋದರೂ ಇರಬಹದು..!
ಈ ಬೆಂಗಳೂರ ಗಡಿಬಿಡಿ ಜೀವನದಲ್ಲಿ ಕ್ಷಣ ನಿಂತು ಧಿಟ್ಟಿಸಿ ನೋಡಲೂ ಸಮಯವಿಲ್ಲ..;(((

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>>ಮದುವೆ ಆಗಲೇಬೇಕು-ಆದರೆ ಅದಕ್ಕಿನ್ನೂ ಸಮಯವಿದೆ..!--ಏನಿದು ಸಪ್ತಗಿರಿ? ಆಗಿನ ಕಾಲದಲ್ಲಿ(೨೫ವರ್ಷ ಹಿಂದೆ) ಹುಡುಗಿ ನೋಡಿದ ಕೂಡಲೇ ತಾಳಿ ಕಟ್ಟಲು ರೆಡಿಯಾಗಿದ್ದೆ! ಆದರೆ ಜ್ಯೋತಿಷಿಗಳು ಒಳ್ಳೇ ದಿನ ಎಂದು ಎಪ್ರಿಲ್‌ವರೆಗೆ ಮುಂದೂಡಿದರು.:( ಈಗ ಅದಕ್ಕಿನ್ನೂ ಸಮಯವಿದೆ ಅಂದದ್ದು ನೀವಾ ಜ್ಯೋತಿಷಿಗಳಾ? ಅಂ.ಭಂ.ರ ಬಳಿ ಕೇಳಿದರೆ ನಿಮಗೆ ಬೇಕಾದ ಹಾಗೆ ನಕ್ಷತ್ರಗಳನ್ನು ತಿರುಗಿಸಿ ಬೇಗನೆ ದಿನಾಂಕ ನಿಗದಿಮಾಡುವರು.:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

;())000000

"ಈಗ ಅದಕ್ಕಿನ್ನೂ ಸಮಯವಿದೆ ಅಂದದ್ದು ನೀವಾ ಜ್ಯೋತಿಷಿಗಳಾ?

ನಾನೇ ಹೇಳಿದ್ದು.....!

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಣೇಶ್ ಅವರೆ ನಿಮ್ಮ ಲೇಖನಕ್ಕೆ ಚಿತ್ರ ಸೇರಿಸಿದ್ದು, ಸಂಪದ ನಿರ್ವಹಣಾ ತಂಡ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಗ್ತೆ ಚಿತ್ರ ಸೇರಿಸಿದ ಸಂಪದ ನಿರ್ವಹಣಾ ತಂಡಕ್ಕೂ, ತಿಳಿಸಿದ ಮಮತಾ ಅವರಿಗೂ ತುಂಬಾ ಧನ್ಯವಾದಗಳು-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಡಿಟ್ ಆದ, ಕಟ್ ಆದ ವಿಶ್ವರೂಪಂನಂತೆ . . . ಎಡಿಟ್ ಮಾಡಿದ ಲೇಖನವೂ ಚೆನ್ನಾಗಿದೆ. ಎಡಿಟ್ ಆದ ಭಾಗದ ಕಲ್ಪನೆಯೇ ಸೊಗಸು! :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>>ಎಡಿಟ್ ಆದ ಭಾಗದ ಕಲ್ಪನೆಯೇ ಸೊಗಸು! -ಈ ಸೊಗಸಾದ ಕಲ್ಪನೆಯನ್ನು ಪಾರ್ಥರು ಮತ್ತು ಸಪ್ತಗಿರಿಗೆ ಹೇಳಬೇಡಿ. :) ಕವಿನಾಗರಾಜರಿಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

;())))000

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.