ಚಳಿಗಾಲದ ಹನಿಗಳು

ಚಳಿಗಾಲದ ಹನಿಗಳು

ಚಿತ್ರ

ಚಳಿಗಾಲದ ಹನಿಗಳು

 

1.  ಏಕೀ ನಿಧಾನ?

 

ಎಲೆ ಎಳೆ ಬಿಸಿಲೆ

ತಡವಾಗಿ ಬರುವ

ಸೋಮಾರಿಯಾದೆಯೇಕೆ?

ಕಾವಳ ಹೊದ್ದ

ತಮದ ಮಾರಿಯ

ತಟ್ಟಿ ಅಟ್ಟಿಬಿಡು

ಸುರಿ ಬೆಳಕ ಭೇರಿ

ಸೋಂಭೇರಿ!

 

 

2.  ಚಳಿಯೋ ಛಳಿ

 

ಚಳಿ ಚಳಿ ಮಾಗಿ

ಈಗ ಛಳಿ ಛಳಿ

ಅಕಟಕಟಾ

ದಂತಗಳೇಕೋ

ಕಟಕಟಕಟಾ

ಮಸೆಯುತ್ತಿವೆಯಲ್ಲಾ

ನಕ್ಕರಂತೂ ವಿಕಟ!

 

 

3.  ಹೇಮಂತ - ಶಿಶಿರರಿಗೆ

 

ಹೇ

ಹೇಮಂತ

ಹೊರಟೆಯೇನು?

ಶಿರವಿಟ್ಟಿರುವ

ಶಿಶಿರನ

ಸಾವರಿಸುವ ಸಹನೆ

ನಮ್ಮೊಳಗಿಟ್ಟ ನಿನಗೆ

ಇದೋ, ಶೀತಲ ವಿದಾಯ!

Rating
Average: 4 (1 vote)