ಚಾಮುಂಡಿ ಬೆಟ್ಟ ಹಿಮಾಲಯಕ್ಕಿಂತ ಹಳೆಯದೇ ?

ಚಾಮುಂಡಿ ಬೆಟ್ಟ ಹಿಮಾಲಯಕ್ಕಿಂತ ಹಳೆಯದೇ ?

ನಿನ್ನೆ ರಾತ್ರಿ ಮೂರು ಗಂಟೆಗೆ ಟೀವೀ ಚಾನೆಲ್ಲುಗಳನ್ನು ಬದಲಾಯಿಸುತ್ತಿದ್ದಾಗ ಮೈಸೂರಿನಲ್ಲಿ ’ಥಟ್ ಅಂತ ಹೇಳಿ’ ಕಾರ್ಯಕ್ರಮದ ಡಾ. ನಾ.ಸೋಮೇಶ್ವರ್ ಅವರು ತಮ್ಮ ಕಾರ್ಯಕ್ರಮವನ್ನು ಮೈಸೂರಿನ ಬೇರೆ ಬೇರೆ ಭಾಗಗಳಲ್ಲಿ ಜನ ಸಾಮಾನ್ಯರ ನಡುವೆ ಮೈಸೂರು ಇತಿಹಾಸ ಸಂಸ್ಕೃತಿ ಕುರಿತಾದ ಪ್ರಶ್ನೆಗಳನ್ನು ಕೇಳುತ್ತ ನಡೆಸುತ್ತಿದ್ದದ್ದು ಕಂಡು ಬಂದಿತು . ಇದು ದಸರಾಕ್ಕೆಂದೇ ವಿಶೇಷ ಕಾರ್ಯಕ್ರಮವಾಗಿತ್ತು.

ಅಲ್ಲಿ ಕೇಳಿದ ಪ್ರಶ್ನೆಗಳಲ್ಲಿ ’ ಚಾಮುಂಡಿ ಬೆಟ್ಟ ಮತ್ತು ಹಿಮಾಲಯಗಳಲ್ಲಿ ಯಾವದು ಹಳೆಯದು ? ’ ಎಂಬ ಪ್ರಶ್ನೆಯೂ ಇತ್ತು . ಎಲ್ಲರೂ ಹೇಳಬಹುದಾದ ಹಾಗೆ ಹಿಮಾಲಯ ಹಳೆಯದಲ್ಲ ! ಭೂಮಿ ಅಸ್ತಿತ್ವಕ್ಕೆ ಬಂದದ್ದು ಸುಮಾರು ೮೫ ಲಕ್ಷ ವರ್ಷಗಳ ಹಿಂದೆ . ಇವತ್ತಿನ ಆಸ್ಟ್ರೇಲಿಯಾ , ಆಫ್ರಿಕಾ , ಭಾರತ ಭೂಖಂಡಗಳು ಒಟ್ಟಿಗೆ ಇದ್ದವು . ಇಂದಿಗೂ ನಕಾಶೆಯಲ್ಲಿ ಈ ಭಾಗಗಳನ್ನು ಒಂದರ ಪಕ್ಕ ಒಂದು ಜೋಡಿಸಬಹುದಾಗಿದೆ. ಈ ಭೂಖಂಡಗಳು ಸರಿಯುತ್ತಾ ಇವೆ . ಭಾರತ ಭೂಖಂಡ ಚೀನಾ ಭಾಗದೊಂದಿಗೆ ಡಿಕ್ಕಿಯಾಗಿ , ಆ ಭಾಗದ ನೆಲ ಮೇಲಕ್ಕೇರಿತು . ಆಗ ರಚನೆ ಆದದ್ದೇ ಹಿಮಾಲಯ . ಇದು ಆದದ್ದು ೫-೬ ಲಕ್ಷ ವರ್ಷಗಳ ಹಿಂದೆ . ಹೀಗಾಗಿ ಚಾಮುಂಡಿ ಬೆಟ್ಟ ಹಿಮಾಲಯಕ್ಕಿಂತ ಹಳೆಯದು !.

ನಾವು ಮೈಸೂರಿನಲ್ಲಿರಲಿ ಅಥವಾ ಮೈಸೂರಿಗೆ ಹೋಗಿರಲಿ ( ಇದು ಎಲ್ಲ ಸ್ಥಳಕ್ಕೂ ಅನ್ವಯ ) ಎಷ್ಟು ಸ್ಥಳೀಯ ಇತಿಹಾಸ , ಸಂಸ್ಕೃತಿ ತಿಳಿದುಕೊಂಡಿರುತ್ತೇವೆ ? .

ಸೋಮೇಶ್ವರರು ಆರಿಸಿಕೊಂಡಿದ್ದ ಪ್ರಶ್ನೆಗಳೆಲ್ಲವೂ ತುಂಬ ಪ್ರಸ್ತುತವೂ ಮಾಹಿತಿದಾಯಕವೂ ಆಗಿದ್ದವು . ಯಾವುದೇ ಸ್ಥಳದ ಬಗ್ಗೆ ನಾವು ತಿಳಿದಿರಬೇಕಾದ ಮಾಹಿತಿಯ ಬಗ್ಗೆ ನಾವು ತಿಳಿಯದೇ ಇರುವದನ್ನು ಎತ್ತಿ ತೋರುವಂತಿತ್ತು .

Rating
No votes yet