ಚಿಂತಕ !

ಚಿಂತಕ !

ನಿಮಗನ್ನಿಸಬಹುದು. ಚಿಂತಕ ಅಂದತಾಕ್ಷಣ ಯಾರೋ ಚಿಂತಕ ಮಹಾಶಯ (ಮನುಷ್ಯ) ಇರಬೇಕೆಂದು. ಇದೇ ನಾನು ಮೊದಲು ಅಂದುಕೊಂಡಿದ್ದು. ಇಲ್ಲಿರುವ ಚಿಂತಕಯಾರು ಎಂದರೆ, ಒಂದು ಸುಸಜ್ಜಿತ, ವಸ್ತ್ರಾಲಂಕಾರಿಯಲ್ಲದ  ಮೊಲಎಂದರೆ ನಂಬುವಿರಾ ?!


ನಾನು ಮತ್ತು ನನ್ನ ಹೆಂಡತಿ ಮತ್ತು ತಮ್ಮನ ಪರಿವಾರ 'ಅಮೆರಿಕದ ವಾಶಿಂಗ್ಟನ್ ವಿಶ್ವವಿದ್ಯಾಲ' ಯಕ್ಕೆ ಭೇಟಿನೀಡಿದ್ದೆವು. ಅಂದರೆ ಅಲ್ಲಿ ನಮ್ಮ ತಮ್ಮನ ಮಗಳು 'ಇಂದು ಚಂದ್ರಶೇಖರ್' , ಜರ್ನಲಿಸಮ್ ನಲ್ಲಿ ವಿಶೇಷ ವಿದ್ಯಾಭ್ಯಾಸಮಾಡುತ್ತಿದ್ದಳು. ಅವಳ ಹಾಸ್ಟೆಲ್ ಗೆ ಸಾಗಿ ಮಾತಾಡಿಸಲು ಅವರ ಕಾಲೇಜ್ ನ ವಿಶಾಲ ಕ್ಯಾಂಪಸ್ ನಲ್ಲಿ ತಿರುಗಾಡುತ್ತಾ ಹೋದಾಗ ದಾರಿಯಲ್ಲಿ ಕಾಲೇಜಿನ ಉದ್ಯಾನದಲ್ಲಿ ಈ ಚಿಂತಕ ಮಹಾಶಯ ಪ್ರಾಣಿವರ್ಯರ ಭೇಟಿಯಾಯಿತು ! ಅದು ಒಂದು ಲಾಂಛನವಂತೆ. ಅದರ ವಿವರವೂ ನೆಟ್ ನಲ್ಲಿ ತಕ್ಷಣ ದೊರೆಯಲಿಲ್ಲ. ಒಮ್ಮೆ ಮತ್ತ್ಯಾವಾಗಲೋ ಪುನರಾವರ್ತನೆ ಮಾಡಿದಾಗ ಫಕ್ಕನೆ ಕಣ್ಣಿಗೆ ಬಿತ್ತು. ಅದನ್ನು ನಿಮ್ಮೆಲ್ಲರ ಮುಂದೆ ಇಟ್ಟಿದ್ದೇನೆ. ನಿಮಗೇನಾದರು ಹೆಚ್ಚು ಮಾಹಿತಿಯಿದ್ದರೆ ಕೊಡಿ !


-ವೆಂಕಟೇಶ್

Rating
No votes yet

Comments