ಚಿಂತನ
ಈ ತಾಯಿಗೆ ಸಾವಿನಲ್ಲೂ ಕಾಡಿತು ಮಗನ ಚಿಂತೆ......!!!
ಈ ಘಟನೆ ನಡೆದು ಇಂದಿಗೆ ಹದಿನೈದು ದಿನಗಳಾದವು.ಪದೇಪದೇ ನನ್ನ ಮನಸ್ಸನ್ನು ಕೊರೆಯುತ್ತಾಇದೆ. ಕೊನೆಗೆ ಬರಹದರೂಪದಲ್ಲಿ ನಿವ್ಮೊಂದಿಗೆಲ್ಲಾ ಹಂಚಿಕೊಂಡು ಹಗುರಾಗೋಣ ಅನ್ನಿಸಿತು.ರಶೀದ್ ಅವರೂ ಮೇಲೆ ಮೇಲೆಲೇಖನ ಏನಾದರೂ ಬರೆದಿದ್ದೀರಾ ಅಂತ ಕೇಳ್ತಾಇದ್ದರು....
ಊಟಕ್ಕೆ ಕುಳಿತಾಗ ನಾನು ನಮ್ಮ ಯಜಮಾನರನ್ನು ಕೇಳಿದೆ..ನನ್ನ ಮೈದುನ ಮಣ್ಣಿಗೆ ಹೇಗಿ ಬಂದಿದ್ದರು.ಸತ್ತವಳು ನನಗೆ ದೂರದ ಸಂಬಂಧಿ..
ಆಕೆ ತುಂಬಾ ಒಳ್ಳೆಯವಳು..ನಾನು ಊರಿಗೆ ಓದಲಿಕ್ಕೆಂದು ಹೋದಾಗ,ಮನೆಗೆ ಕರೆದುಕೊಂದು ಹೋಗಿ ಎಷ್ತೇಲ್ಲಾ ಹೇಳಿಕೊಂಡಿದ್ದಳು..ಅಕ್ಕಪಕ್ಕದವರ ಮುಂದೆ, ಓರಗೆಯವರಮುಂದೆ..ನನ್ನ ತಮ್ಮ ಬಂದಿದ್ದಾನೆ..ಎಂದು.ಈ ಹಳ್ಳಿಯ ಜನ ಎಲ್ಲರೂಅಣ್ಣ,ಅಕ್ಕ,ತಮ್ಮ,ಅತ್ತೆ,ಮಾವ ಎನ್ನುವ ಸಂಬಂಧಹೆಣೆದುಕೊಂಡು ಆ ಇಡೀ ಹಳ್ಳಿಯನ್ನೆ ಮನೆ ಮಾಡಿಕೊಳ್ಳುವ ಕಕ್ಕುಲಾತಿ ನಗರಗಳಿಗೂ ಒಂಚೂರು ಹರಡಿದರೆ ಅವುಗಳಲ್ಲಿ ಜೀವಂತಿಕೆ ತುಂಬಿ ಬರಬಹುದೇನೋ...!
ಆಗೆಲ್ಲಾ ಆಕೆ ಆಕೆಯ ಗಂಡ ಹೊರಗೆ ಹತ್ತಿ ಕಾಖ್ರಾನೆಯಲಿ ದುಡಿಯುತ್ತಿದ್ದರು.ಅವಳೆಂದೂ ಮನೆಯಲ್ಲಿ ಕೂಡದ ಹೆಂಗಸು.ದಿನಾಲೂ ಕೂಲಿಗೆಲ್ಲಾ ಹೋಗುತ್ತಿದ್ದಳು.ಆಕೆಗೆ ಎರಡು ಹೆಣ್ಣು,ಒಂದೇಒಂದು ಗಂಡು ಮಕ್ಕಳಿದ್ದರು.ಹಗಲುರಾತ್ರಿ ದುಡಿದು,ಬೆವರಿಳಿಸಿ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಟ್ಟಿದ್ದಳು.ಅವಳಲ್ಲಿ ತುಂಬಿದ ಆ ಉತ್ಸಾದ ಚಿಲುಮೆ ಕಂಡಾಗೆಲ್ಲಾ ನನಗನಿಸುತ್ತಿದ್ದಿದ್ದು..ಜೀವನದ ಬಗೆಗೆ ಹೆಣ್ಣಿಗೆ ಎóಷ್ಟೆಲ್ಲಾ ಆಸೆ,ಬಯಕೆ,,ಕನಸುಗಳು..! ಗಂಡು ಮಗು ಮೂಕನಾಗಿದ್ದು ಅರೆಹುಚ್ಚನಂತಿತ್ತು.ನೋಡಿದವರೆಲಾ ್ಲಶ್ಚು...ಶ್ಚು..ಎಂದು ಲೊಚಗುಟ್ಟುತ್ತಾ ಒಂದರೆ ಕ್ಷಣ ನೋಡಿ ಮುಂದೆ ಸಾಗುತ್ತಿದ್ದರು..ಒಂದು ದಿನವೂ ಬೇಸರಗೊಳ್ಳದೆ ಎಲ್ಲವನ್ನು ಆತಾಯಿಯೇ ಮಾಡುತ್ತಿದ್ದಳು.ತಾಯಿಯ ಸೆರಗು ಹಿಡಿದುಕೊಂಡು ಮನೆತುಂಬ ಓಡಾಡುತಿತ್ತು.ತಂದೆಗೆಲ್ಲಿ ಸಮಯ ಸಿಗಬೇಕು ಇಂತಹ ಮಗುವಿನ ಬಗ್ಗೆ ಕಾಳಜಿ ವಹಿಸಲು...ಬಯಲಿಗೆ ಹೋಗುವಾಗ ಮಾತ್ರ ತಾಯಿ ಲೋಟ ತೋರಿಸಿದರೆ ಸಾಕು..ಮನೆಯಲ್ಲಿ ಉಳಿಯುತಿÀ್ತತ್ತು.
ಹದಿನಾರು-ಹದಿನೇಳು ವಷ್ರದವನಾಗಿರಬೇಕು ತಾಯಿ ಪ್ಯಾರಾಲಿಸಸ್ ಕಾಯಿಲೆಗೆ ತುತ್ತಾದಳು.ಹೆಣ್ಣು ಮಕ್ಕಳಿಬ್ಬರು ಧಾವಿಸಿಬಂದು ಹಾಗೆ,ಹೀಗೆ ಮಾಡಿ ಆಕೆ ಮತ್ತೆ ಓಡಾಡುವಂತೆ ಮಾಡಿದ್ದರು.ಆದರೆ ದ್ವನಿ ಮಾತ್ರ ಶಾಶ್ವತವಾಗಿ ಕಳೆದುಕೊಂಡು ಬಿಟ್ಟದ್ದಳು.ದೇವರಿಗೆ ಅದೇಕೊ ಅವಳ ಮೇಲೆ ಮುನಿಸು ಅಥ್ರವಾಗಲಿಲ್ಲ. ಹುಟ್ಟಿದ ತೌರುಮನೆಗೆ ತಂದೆ-ತಾಯಿಯರನ್ನು ಮಾತಾಡಿಸಿಕೊಂಡು ಹೋಗಲು ಬಂದಿದ್ದಳು.ಇಲ್ಲೇ ಇರು ಎಂದು ಒತ್ತಾಯಿಸಿದರೂ ಕೇಳಲಿಲ್ಲ..ಕೊನೆಯವರೆಗೂ
ಗಂಡನ ಮನೆಯಲ್ಲಿರುವುದೇ ಚೆಂದ ಎಂದು ಸನ್ನೆ ಮಾಡಿ ಹೇಳಿದ್ದಳು...ಇರಲಿ ಬಿಡು ಎಲ್ಲಾದರು ಇರು ಚೆಂದಾಗಿರು ಎಂದು ಎಂಟು ದಿನಗಳಹಿಂದೆ ಕಳುಹಿಸಿಕೊಟ್ಟಿದ್ದರು ತಂದೆ-ತಾಯಿ.
ಗಂಡ ಈಗೀಗ ತುಂಬಾ ಬದಲಾಗಿದ್ದ..ಕುಡಿದು ಬಂದು ಕಾಡಿಸುತಿದ್ದ...ಸುಮ್ಮಸುಮ್ಮನೆ ಹೊಡೆಯುತಿÀ್ತದ್ದ.ಅದೆಲಾ ್ಲಹೇಳಿಕೊಂಡು ತಾಯಿಯ ಮುಂದೆ ತುಂಬಾ ಅತ್ತಿದ್ದಳು.ಏನೂ ಮಾಡದ ವೃದ್ಧಾವಸ್ಥೆ..ಅವರಿಬ್ಬರೇ ಅಡಿಗೆ ಮಾಡಿಕೊಂಡು ಊಟ ಮಾಡಿಕೊಂಡು ಉಣ್ಣುವ ಪರಿಸ್ಥಿತಿ ಅವರದು.ಅವರಿಗೆ ಆರು ಜನ ಗಂಡುಮಕ್ಕಳಿದ್ದರು ಅದೂ ಆ ಹÀಳ್ಳಿಯಲ್ಲೆ..!ಊರಿನವರಿಗೆ ಅಂಜಿ ಬದುಕಲು ಅವರಿಗೆ ತಿಂಗಳಿಗಿಷ್ಟು ದುಡ್ಡು ಕೊಡುತ್ತಿದ್ದರು ಆ ಮಕ್ಕಳು.
ಊರ ಜನರಿಗಂಜಿ ಹಬ್ಬ ಹುಣ್ಣÂಮೆಗೆಲ್ಲಾ ಬಟ್ಟೆಬರೆ ತರುತ್ತಿದ್ದರು. ನಾ ಹೋದಾಗೆಲ್ಲಾ.. ಅಕ್ಕಾ ಅಪ್ಪ-ಅವ್ವಂಗೆ ಈಸೀರೆ-ಧೋತಿ ತಂದಿದ್ದೀನಿ ನೋಡು’’ ಎಂದೆಲ್ಲಾತೋರಿಸುತ್ತಿದ್ದರು. ಅವರನ್ನು ಸಂತೋಷವಾಗಿಟ್ಟರೆ..ಮುಂದೆ ನೀವೂ ಸಂತೋಷದಿಂದಿರ್ತಿರಿ’’ ಎಂದೆನ್ನುತ್ತದೆ.ಹೌದಲ್ಲ ಮತ್ತೆ..ಊರ ಜನ ಉಗಿಯಾಕಿಲ್ವಾ..ಅವರೆದುರು ನೀವು ಹೊಸ ಬಟ್ಟೆ ಹಾಕ್ಕೊಂಡು ತಿರುಗಾಡಿದರೆ..’’ಎನ್ನುತ್ತಿದ್ದರು ನಮ್ಮ ಅತ್ತೆ.ಈವಿಷಯದಲ್ಲಿ ಹಳ್ಳಿಗಳ ಬಗೆಗೆ ನನಗೆ ತುಂಬಾ ಅಭಿಮಾನ ಮೂಡುತಿತು. ್ತಆ ಸಂಪ್ರÀದಾಯಗಳ ಬಗೆಗೆ,ಅಲ್ಲಿಯ ರೀತಿ-ನಡಾವಳಿಗಳ ಬಗೆಗೆ ನನಗೆ ತುಂಬಾ ಗೌರವ ಇದೆ...ಹಳ್ಳಿಗಳಿಂದಾವ ತಂದೆ-ತಾಯಿ ವೃದ್ಧಾಶ್ರಮಗಳಿಗೆ..ಸೇರಿಲ್ಲ..ಅದೇ ನನಗಿರುವ ದೊಡ್ಡ ಸಮಧಾನ...! ದೇವರೆ ಕೊನೆಯವರೆಗೂ ಈ ಆಶ್ರಮಗಳ ಬಗೆಗೆ ಈ ಜನರಿಗೆ ಗೊತ್ತಾಗದೇ ಇರಲಿ..ಎನ್ನುವ ಬೇಡಿಕೆ ನನ್ದು...!!
ಕುಡುಕ ಗಂಡನ ಕಿರುಕುಳಕ್ಕೆ ಬೇಸತ್ತ ಜೀವ.ಆ ಚಿತ್ರಹಿಂಸೆ ತಾಳದೆ ಕೂಗಿ ಯಾರನನ್ನಾದರು ಕರೆಯೋಣವೆಂದರೆ ದನಿ ಇಲ್ಲ..ಅಡಗಿಹೋಗಿತ್ತು...ಈಸ್ಥಿತಿಯಲ್ಲಿ ಆಕೆಗೆ .ಬದುಕೇ ಕೊನೆಗೊಳಿಸಿಕೊಳ್ಳಲು ತೋಚಿತೇನೋ...ಸಾವೇ ಸಮಂಜಸವೆನಿಸಿತೇನೋ...ನಾ ಸತ್ತರೆ ಮಗು..!”ನಡೆಯಪ್ಪಾ’’...ಎಂದು ಅವನನ್ನು ಮುಂದೆ ಹಾಕಿಕೊಂಡು ಹೊರಟ ಆ ಜೀವ.....ನಿಧಾನವಾಗಿ ಒಂದೊಂದೆ ಬದುಕಿನ ಮೆಟ್ಟಿಲÀನ್ನು ಇಳಿಯತೊಡಗಿತು.............!!!
ಪ್ರತಿಯೊಬ್ಬ ತಂದೆ-ತಾಯಿಗೆ
ಕ್ರಿಸ್ತನಾಗುವ ಬಯಕೆ,
ಯಾರನ್ನೂ ದೂರುವುದಿಲ್ಲ....!!
ಇಂಥಹ ತಾಯಿ-ತಂದೆಯವರನ್ನು ನಾವು ಅಕ್ಷರಸ್ಥರು ವೃದ್ಧಾಶ್ರಮಗಳಲ್ಲಿ ಬಿಟ್ಟು ಬಿಡುತ್ತೇವಲ್ಲಾ.........!!!
Rating
Comments
ಉ: ಚಿಂತನ
ಉ: ಚಿಂತನ
ಉ: ಚಿಂತನ