ಚಿಂತೆಯ ಮರ್ಮ
ಏನೆಂದು ನಾ ಸಂತಸಪಡಲಿ
ಮನವ ತುಂಬಿದೆ ಬೇಸರ
ಮನವು ಆಗಿದೆ ಗ್ರಹಣದಿಂದ
ಬೆಳಕ ನೀಡದ ನೇಸರ
ಜಗಕೆ ಬೆಳಕ ನೀಡುವಾತನ
ಅಡಗಿಸುವನು ಚಂದಿರ
ಬೇಸರವಾಗದಿರೆ ನಾನಾಗ
ಇರುಳನರಿಯದ ನೇಸರ
ಗ್ರಹಣ ಕಳೆದ ಸೂರ್ಯ ದರ್ಶನ
ನೋಡಲೆಷ್ಟು ಸುಂದರ
ಚಿಂತೆ ಕಳೆಯೆ ಮನವು ಶುಭ್ರ
ಬಿಳಿಯ ಬಣ್ಣದ ಧೋತರ
ಗ್ರಹಣ ಮುಗಿದು ಬೆಳಕ ಕೊಡಲು
ಸೂರ್ಯ ಪಡುವನು ಕಾತರ
ನನ್ನ ಚಿಂತೆಯ ಮರ್ಮವರಿಯಲು
ನಿನಗೆ ಏನಿದು ಆತುರ.......
Rating