ಚಿಟ್ಟಿ ನ ಕೊಯೀ ಸಂದೇಶ- ತನ್ನವರನ್ನು ನೆನೆಯುತ್ತ........
ಚಿಟ್ಟಿ ನ ಕೊಯೀ ಸಂದೇಶ- ತನ್ನವರನ್ನು ನೆನೆಯುತ್ತ........
-ಲಕ್ಷ್ಮೀಕಾಂತ ಇಟ್ನಾಳ
ಬದುಕಿನಲ್ಲಿ ಸಂಗಾತಿಗಳಾಗಿ ಮಗುವಿಗೆ, ತಾಯಿ ತಂದೆ, ಯುವ ಪ್ರೇಮಿಗಳಿಗೆ ಸಂಗಾತಿಗಳು ಪ್ರಿಯತಮೆ ಇಲ್ಲ ಪ್ರಿಯಕರ.. ಸತಿ ಪತಿ, ಗೆಳೆಯ ಗೆಳತಿಯರ ಸಾಂಗತ್ಯದಲ್ಲಿ,,,,, ಒಟ್ಟಿನಲ್ಲಿ ಪ್ರೇಮವಿರುವಲ್ಲಿ ಮನಸ್ಸು ಬಹಳ ಅನ್ಯೋನ್ಯ...... ಸಮರಸವಿರುವಲ್ಲಿ, ಪ್ರೀತಿ ವಾತ್ಸಲ್ಯಗಳ ಸಾಗರದಲ್ಲಿ ಮನಸು ತೇಲಿದಂತೆನಿಸುವ ಆ ಅಪರೂಪದ ಗಳಿಗೆಗಳು ಹೀಗೆಯೇ ನಿರಂತರವಿರುತ್ತವೇನೋ ಎಂದೆನಿಸಿ, ಇರುತ್ತಿದ್ದಂತೆಯೇ ಘಟಿಸುವ ಘಟಿಸಬಾರದ ಘಟನೆಗಳು, ಓ! ....ಅದೆಷ್ಟೋ ಕನಸುಗಳನ್ನು ಹೊಸಕಿ ಹಾಕುವ, ನೀಡುವ ನೋವು ಶಬ್ದಗಳಿಗೆ ನಿಲುಕದು. ನಿಶ್ಯಬ್ದವೂ ಕರ್ಕಶವಾಗುವ ಗಳಿಗೆ. ಮ್ಲಾನವದನದ ಕಣ್ಣುಗಳಿಂದ ಪ್ರಕೃತಿಗೆ... ನೋವಿನಿಂದ ಚೀರುತ್ತ ಕೇಳುವ .....ಉತ್ತರವಿಲ್ಲದ ಮೌನ ಪ್ರಶ್ನೆಗಳು. ನಂಬಿದ ನಂಬಿಕೆಯೂ ಕೈಚೆಲ್ಲಿದ ಅನುಭಾವ, ಅನುಭವ. ...ಜೀವ ಜಗತ್ತಿನ ಅಸಂಖ್ಯ ಹೃದಯಗಳ ಲೋಕದಲ್ಲಿ ನಾವಿದ್ದರೂ ನಮ್ಮ ಹೃದಯದ ಸಮೀಪ ನಮ್ಮವರಾಗಿ ಇರುವುದು ಕೆಲವೇ ಕೆಲವು ಆತ್ಮೀಯ ಜೀವಗಳು. ನಾವು ಪ್ರೀತಿಸುವ ಈ ಜೀವಗಳು ಅಕಸ್ಮಾತಾಗಿ ಇದ್ದಕ್ಕಿದ್ದ ಹಾಗೆ ನಮ್ಮಿಂದ ಮರಳಿ ಬಾರದ ದಾರಿಯಲ್ಲಿ ಮರೆಯಾದಾಗ ಆಗುವ ಆ ಅಗಲಿಕೆಯ ದು:ಖ, ಆ ಶೂನ್ಯ ಬಹುಶ: ಮಾನವನ ಅಷ್ಠೇ ಏಕೆ ಜಗತ್ತಿನ ಸಕಲ ಪ್ರಾಣಿ ಪಕ್ಷಿಗಳೂ ಕೂಡ ಅನುಭವಿಸುವ, ಪರಿತಪಿಸುವ ವಿಷಾದಕರ ಸನ್ನಿವೇಷಗಳು ಎಲ್ಲ ಜೀವಗಳಿಗೂ ಅವಿಭಾಜ್ಯ, ಅನಿವಾರ್ಯ. ಆತಂಕದ ಅನಿರ್ವಚನೀಯ ನೋವಿನ ಅಲೆಗಳು ತಲೆಯಲ್ಲಿ ಸೃಷ್ಟಿಸುವ ಸುನಾಮಿಗಳು ಮಾಡುವ ಘೋರ ಪರಿಣಾಮಗಳನ್ನು ಅಕ್ಷರಗಳು ಅದು ಹೇಗೆ ತಾನೆ ಹೇಳಿಯಾವು! ಇಂತಹ ವಿಘಟನೆಗಳು ಜೀವನವಿಡೀ ನೋವು ಸಂಕಟಗಳನ್ನು ನೀಡುತ್ತ, ಮನುಷ್ಯನನ್ನು ಹಿಂಡುವುದನ್ನು ಯಾರಿಂದಲೂ ತಪ್ಪಿಸಲಿಕ್ಕಾಗದು. ಪ್ರಕೃತಿಯ ಮುಂದೆ ನಾವೆಲ್ಲ ಎಷ್ಟೊಂದು ಅಲ್ಪರು ಎಂದು ಮನವರಿಕೆ ಆಗುವುದು ಆವಾಗಲೇ. ಸಂಯಮದ ಕಟ್ಟೆ ಒಡೆದು ಮನಸ್ಸು ಛಿದ್ರವಾಗುವುದು ಇಂತಹ ಕ್ಷಣಗಳ ಅನುಭವಗಳಿಂದಲೇ ಅಲ್ಲವೇ! ಬೇಂದ್ರೆಯವರ ಪರಿಭಾಷೆ ಇದನ್ನು ‘ಬೆಂದವ’ ನೆಂದು ಹೇಳುವುದು ಅದೆಷ್ಟು ಅರ್ಥಪೂರ್ಣ.
ಒಬ್ಬ ಶಾಯರ್ ನ ಧ್ವನಿ ಹೀಗೆ ಹೇಳುತ್ತದೆ,
‘ಪೆಹಲೇ ಆಂಸೂ ಆತೇ ಥೆ ಔರ್ ಆಪ್ ಯಾದ ಆತೀ ಥೀ
ಅಜ್ ತುಮ್ ಯಾದ್ ಆತೀ ಹೋ ಔರ್ ಆಂಸೂ ನಿಕಲ್ ಆತೇ ಹೈ’
ಅಂದು ದು:ಖದಿಂದ ಕಣ್ಣೀರು ಬಂದರೆ, ನಿನ್ನ ನೆನಪಾಗುತಿತ್ತು,
ಇಂದು ನೀನು ನೆನಪಾದರೆ, ಕಣ್ಣೀರು ತಾನೇ ತಾನಾಗಿ ಹರಿಯುತ್ತವೆ.
‘ಥಕ್ ಗಯೇ ಹೋಂಟ್ ಭೀ ತೇರಾ ನಾಮ್ ಲೇತೇ ಲೇತೇ
ಏಕ್ ಹೀ ಲಬ್ಜ್ ಕೀ ಎ ಟುಕ್ರಾರ್ ಕಹಾಂ ತಕ್ ಜಾತೀ’
ನಿನ್ನ ಹೆಸರು ಕೂಗಿ ಕೂಗಿ ತುಟಿಗಳು ಸೋತುಬಿಟ್ಟಿವೆ,
ಆದರೂ, ಈ ಒಂದು ಶಬ್ದದ ಕೂಗು ಅದೆಷ್ಟು ದೂರ ಕೇಳೀತು.
‘ತೂ ಬಹುತ್ ದೂರ್ ಬಹುತ್ ದೂರ್ ಗಯಾ ಹೈ ಮುಝಸೇ
ಮೇರೀ ಅವಾಜ್ ಮೇರೆ ಪ್ಯಾರ್ ಕಹಾಂ ತಕ್ ಜಾತೀ’
ನನ್ನಿಂದ ಬಹು ದೂರ ದೂರ ಹೋಗಿರುವ ನಿನಗೆ,
ನನ್ನ ಧ್ವನಿ ಅದೆಷ್ಟು ದೂರ ಕೇಳೀತು.
ತನ್ನವರನ್ನು ಕಳೆದುಕೊಂಡ ಜೀವಗಳು ಅನುಭವಿಸುವ ಆ ದು:ಖದಾಯಕ ನೋವನ್ನು ಶಬ್ದಗಳು ನಿಜವಾಗಿಯೂ ವರ್ಣಿಸಲಾರವು, ಅವು ಏನಿದ್ದರೂ ನಿಸ್ಸತ್ವ ಕಣವರಿಕೆಗಳು ಮಾತ್ರ, ಸತ್ವರಹಿತ ಮಾತಿನ ತರಹ.
ಇದೇ ನೋವಿನ ಆರ್ತತೆಯ ಅನುಭವವನ್ನು ನೀಡುವ ಜಗಜಿತ್ ಸಿಂಗಜಿಯವರ ಒಂದು ಗಜಲ್ ಬಹು ಸುಂದರವಾಗಿದೆ.
‘ಚಿಟ್ಟಿ ನ ಕೊಯೀ ಸಂದೇಶ’ ಕೇಳುಗರನ್ನು ಕ್ಷಣ ಹೊತ್ತು ಕಳೆದುಕೊಂಡವರೆಡೆಗೆ ಖಂಡಿತ ಕರೆದೊಯ್ಯುತ್ತದೆ. ಅದರ ಸಾಲುಗಳು ಹೀಗಿವೆ.
ಚಿಟ್ಟಿ ನ ಕೋಯೀ ಸಂದೇಶ, ಜಾನೇ ವೋ ಕೌನ್ ಸಾ ದೇಶ
ಜಹಾ ತುಮ್ ಚಲೇ ಗಯೇ
ಇಸ್ ದಿಲ್ ಪೆ ಲಗಾ ಕೆ ಠೇಸ್, ಜಾನೆ ವೋ ಕೌನ್ ಸಾ ದೇಶ ಠೇಸ್= ಪೆಟ್ಟು, ನೋವು, ಗಾಯ
ಜಹಾ ತುಮ್ ಚಲೇ ಗಯೇ
ಇಕ್ ಆಹ್ ಭರೀ ಹೋಗೀ, ಹಮ್ ನೆ ನ ಸುನೀ ಹೋಗೀ
ಜಾತೇ ಜಾತೇ ತುಮ್ ನೇ, ಆವಾಜ್ ತೊ ದೀ ಹೋಗೀ
ಹರ್ ವಖ್ತ್ ಯಹೀ ಹೈ ಗಮ್, ಉಸ್ ವಖ್ತ್ ಕಹಾ ಥೇ ಹಮ್
ಕಹಾಂ ತುಮ್ ಚಲೇ ಗಯೇ ಕಹಾ ತುಮ್ ಚಲೇ ಗಯೇ
ಹರ್ ಚೀಜ್ ಪೆ ಅಶ್ಕೋಂ ಸೇ ಲಿಖಾ ಹೈ ತುಮ್ಹಾರಾ ನಾಮ್
ಯೇ ರಾಸತೇ ಘರ್ ಗಲಿಯಾಂ ತುಮ್ ನೇ ಕರ್ ನಾ ಸಕೇ ಸಲಾಮ್
ಹೈ ದಿಲ್ ಮೆ ರೆಹ್ ಗಯೀ ಬಾತ್ ಜಲ್ದೀ ಸೆ ಛುಡಾ ಕರ್ ಹಾಥ್
ಕಹಾಂ ತುಮ್ ಚಲೇ ಗಯೇ ಕಹಾಂ ತುಮ್ ಚಲೇ ಗಯೇ
ಅಬ್ ಯಾದೋಂ ಕೆ ಕಾಟೇಂ ಇಸ್ ದಿಲ್ ಮೇ ಛುಬ್ತೇ ಹೈಂ
ನಾ ದರ್ದ ಠಹರ್ ತಾ ಹೈ ನಾ ಆಂಸೂ ರುಕ್ ತಾ ಹೈ
ತುಮ್ಹೇ ಢೂಂಢ ರಹಾ ಹೈ ಪ್ಯಾರ್, ಹಮ್ ಕೈಸೆ ಕರೆ ಇಕ್ರಾರ್
ಕಹಾ ತುಮ್ ಚಲೇ ಗಯೇ ಕಹಾ ತುಮ್ ಚಲೇ ಗಯೇ
Comments
ಉ: ಚಿಟ್ಟಿ ನ ಕೊಯೀ ಸಂದೇಶ
In reply to ಉ: ಚಿಟ್ಟಿ ನ ಕೊಯೀ ಸಂದೇಶ by ksraghavendranavada
ಉ: ಚಿಟ್ಟಿ ನ ಕೊಯೀ ಸಂದೇಶ
ಉ: ಚಿಟ್ಟಿ ನ ಕೊಯೀ ಸಂದೇಶ
In reply to ಉ: ಚಿಟ್ಟಿ ನ ಕೊಯೀ ಸಂದೇಶ by H A Patil
ಉ: ಚಿಟ್ಟಿ ನ ಕೊಯೀ ಸಂದೇಶ
ಉ: ಚಿಟ್ಟಿ ನ ಕೊಯೀ ಸಂದೇಶ
In reply to ಉ: ಚಿಟ್ಟಿ ನ ಕೊಯೀ ಸಂದೇಶ by ಶ್ರೀನಿವಾಸ.ಹುದ್…
ಉ: ಚಿಟ್ಟಿ ನ ಕೊಯೀ ಸಂದೇಶ
ಉ: ಚಿಟ್ಟಿ ನ ಕೊಯೀ ಸಂದೇಶ
In reply to ಉ: ಚಿಟ್ಟಿ ನ ಕೊಯೀ ಸಂದೇಶ by ಗಣೇಶ
ಉ: ಚಿಟ್ಟಿ ನ ಕೊಯೀ ಸಂದೇಶ
ಉ: ಚಿಟ್ಟಿ ನ ಕೊಯೀ ಸಂದೇಶ- ತನ್ನವರನ್ನು ನೆನೆಯುತ್ತ........
In reply to ಉ: ಚಿಟ್ಟಿ ನ ಕೊಯೀ ಸಂದೇಶ- ತನ್ನವರನ್ನು ನೆನೆಯುತ್ತ........ by gopaljsr
ಉ: ಚಿಟ್ಟಿ ನ ಕೊಯೀ ಸಂದೇಶ- ತನ್ನವರನ್ನು ನೆನೆಯುತ್ತ........