ಚಿಣ್ಣರ ಗ್ರಂಥಾಲಯ

ಚಿಣ್ಣರ ಗ್ರಂಥಾಲಯ

ಹೀಗೊಂದು ಚಿಣ್ಣರ ಗ್ರಂಥಾಲಯ - ಬರೀ ಮಕ್ಕಳದ್ದೇ ಕನ್ನಡದ ಸಿ.ಡಿ/ಪುಸ್ತಕಗಳು
-------------------------------------------------------

ಪುಟ್ಟ ಪುಟ್ಟ ಮಕ್ಕಳ ಬಾಯಲ್ಲಿ ಕಸ್ತೂರಿ ಕನ್ನಡದ ಚೆಂದದ ಪದಗಳನ್ನು ಕೇಳಲು ಖುಷಿಯಾಗುವುದಿಲ್ಲವೆ?

ನಮ್ಮ ಚಿಕ್ಕಮ್ಮಳ ೬ ವರ್ಷದ ಮಗು ೧೨ ಮಾಸಗಳ ಹೆಸರನ್ನೂ ಮುದ್ದುಮುದ್ದಾಗಿ ಕನ್ನಡದಲ್ಲೇ ಹೇಳುತ್ತದೆ. ಮತ್ತು ನಾಯಿಮರಿ-ನಾಯಿಮರಿ, ಮಳೆರಾಯ-ಮಳೆರಾಯ, ಬಣ್ಣದ ಬುಗುರಿ, ಒಂದು ಎರಡು - ಅಂಕಿಯ ಬಂಡಿ, ಅ ಆ ಇ ಈ - ಅಕ್ಷರಬಂಡಿ ಇತ್ಯಾದಿ ಮಕ್ಕಳ ಪದ್ಯಗಳನ್ನು ತನ್ನ ಪುಟ್ಟಪುಟ್ಟ ಕೈ-ಕಾಲು-ಸೊಂಟಗಳನ್ನು ಆಡಿಸುತ್ತಾ  ಹಾಡುತ್ತಿದ್ದರೆ ನೋಡುವವರೂ ಮಕ್ಕಳಂತೆ ಹಾಡಲಾರಂಭಿಸುತ್ತಾರೆ.

ಆ ಮಗುವಿನ ೫ನೇ ಹುಟ್ಟುಹಬ್ಬಕ್ಕೆ ನಾನೂ ಅಲ್ಲಿ ನೆರೆದವರೆಲ್ಲರಂತೆಯೇ ಆಠಿಕೆಗಳನ್ನು ಕೊಟ್ಟಿದ್ದೆ, ಆದರೆ ಪುಸ್ತಕಗಳ ರೂಪದಲ್ಲಿ. ಈ ಪುಸ್ತಕಗಳನ್ನು ಕೊಡುವ ಮೂಲಕ ಮಕ್ಕಳಿಗೆ ಓದಿಸುತ್ತಾ ಆಡಿಸುವ, ಆಡಿಸುತ್ತಾ ಕಲಿಸುವ ಒಂದು ಪ್ರಯತ್ನ ಸಫಲವಾಗುತ್ತದೆಂದು ನಾನು ನಂಬಿದ್ದೆ. ಆ ಮಗುವನ್ನು ೧ ವರ್ಷದ ನಂತರ ನೋಡಿದಾಗ ಆ ನಂಬಿಕೆ ನಿಜವಾಯಿತು !

ಸಣ್ಣ ಮಕ್ಕಳಿಗೆ TV Cartoon ಕಾರ್ಯಕ್ರಮಗಳೆಂದರೆ ಪ್ರಾಣ. ಹಾಗಾಗಿ Cartoon ಗಳ ಮೂಲಕವೇ ವಿವಿಧ ರೀತಿಯ ಜ್ಞಾನವನ್ನು ಮಕ್ಕಳಿಗೆ ತಲುಪಿಸುವುದು ಒಂದು ಸೂಕ್ತವಾದ ಪ್ರಯತ್ನ. ಇತಿಹಾಸ, ವಿಜ್ಞಾನ, ಗಣಿತ, ಪುರಾಣ, ನೀತಿಕಥೆ, ಗದ್ಯ-ಪದ್ಯಗಳು ಇತ್ಯಾದಿಗಳನ್ನು Cartoon ಚಿತ್ರಗಳ ಮೂಲಕ ತಿಳಿಸುವ ಅನೇಕ ಸಿ.ಡಿ ಮತ್ತು ಪುಸ್ತಕಗಳಲ್ಲಿ ಇಂದು ಮಾರುಕಟ್ಟೆಯಲ್ಲಿವೆ. ಜನಪ್ರಿಯ Prism ಮತ್ತು Sapna ಪುಸ್ತಕ ಅಂಗಡಿಗಳಲ್ಲಿ ದೊರೆಯುತ್ತವೆ.

ಕನ್ನಡವನ್ನು ನೀವು ನಿಜವಾಗಿಯೂ ಮನೆಯಂಗಳದಲ್ಲಿ, ಹಿತ್ತಲಿನಲ್ಲಿ, ಅಡುಗೆಮನೆಯಲ್ಲಿ ಬೆಳೆಸಬೇಕೆಂದರೆ ಈ ಕೆಲವು ಸಲಹೆಗಳು ನಿಮಗಾಗಿ:
ಅ) ನಿಮ್ಮ ಮಗು ಕನ್ನಡ ಓದುವುದಿಲ್ಲವೆಂಬ ಕಲ್ಪನೆಯನ್ನು ಮೊದಲು ಮನಸ್ಸಿನಿಂದ ತೆಗೆದೊಗೆಯಿರಿ.
ಆ) ಮಗುವಿಗೆ Cartoon ಮಾತಾಡುವ ರೀತಿ ಹಿಡಿಸುತ್ತದೆ. ಹಾಗಾಗಿ  ಇತಿಹಾಸ, ವಿಜ್ಞಾನ, ಗಣಿತ, ಪುರಾಣ, ನೀತಿಕಥೆ, ಗದ್ಯ-ಪದ್ಯಗಳನ್ನು ಆಟದ ಮೂಲಕ ಕಲಿಸುವ Cartoon ಸಿ.ಡಿಗಳನ್ನು ತಂದು ಮಕ್ಕಳಿಗೆ ಕಾಣಿಸುವಂತೆ ಜೋಡಿಸಿ ಇಡಿ.
ಇ) ಮಗುವಿಗೆ Cartoon ಚಿತ್ರಗಳು ಪಠ್ಯಪುಸ್ತಕಗಳಿಗಿಂತ ಆಕರ್ಷಕವಾಗಿ ಕಾಣಿಸುತ್ತವೆ. ಹಾಗಾಗಿ  ಇತಿಹಾಸ, ವಿಜ್ಞಾನ, ಗಣಿತ, ಪುರಾಣ, ನೀತಿಕಥೆ, ಗದ್ಯ-ಪದ್ಯಗಳನ್ನು ಆಟದ ಮೂಲಕ ಕಲಿಸುವ Cartoon ಪುಸ್ತಕಗಳನ್ನು ತಂದು ಮಕ್ಕಳಿಗೆ ಕಾಣಿಸುವಂತೆ ಜೋಡಿಸಿ ಇಡಿ.
ಈ) ನಿಮ್ಮ ಸ್ನೇಹಿತನ ಮಗುವಿನ ಹುಟ್ಟುಹಬ್ಬಕ್ಕೆ, ಬಂಧುಗಳ ಗೃಹಪ್ರವೇಶಕ್ಕೆ ಇಂಥಹ ಸಿಡಿ/ಪುಸ್ತಕಗಳನ್ನು ಉಡುಗೊರೆಯಾಗಿ ಕೊಡಿ.
ಉ) ಮನೆಯಲ್ಲಿ ಸಭೆ, ಸಮಾರಂಭಗಳಲ್ಲಿ ಜನಗಳು ನೆರೆದಾಗ ಇಂಥಹ ಸಿಡಿ/ಪುಸ್ತಕಗಳು ಕಾಣಿಸುವಂಥೆ ಜೋಡಿಸಿ ಇಡಿ.
ಊ) ಅತ್ಯುತ್ತಮವೆಂದರೆ ನಿಮ್ಮ ಮನೆಯಲ್ಲೊಂದು "ಚಿಣ್ಣರಿಗಾಗಿ-ಗ್ರಂಥಾಲಯ"ವನ್ನು ತೆರೆಯಿರಿ. ಮನೆಗೆ ಬಂದ ಮಕ್ಕಳಿಗೆ ಕಾಣಿಸುವಂತೆ ಬಣ್ಣಬಣ್ಣದ ಪುಸ್ತಕ/ಸಿ.ಡಿ ಗಳನ್ನು ಜೋಡಿಸಿ ಇಡಿ.

ನಾನು ಸದ್ಯದಲ್ಲೇ ಈ ಚಿಣ್ಣರ ಗ್ರಂಥಾಲಯವೊಂದನ್ನು ತೆರೆಯಬೇಕೆಂದಿದ್ದೇನೆ.

Rating
No votes yet

Comments