ಚಿಣ್ಣರ ಜಗಲಿ

ಚಿಣ್ಣರ ಜಗಲಿ

ಕಸ್ತೂರಿವಾಹಿನಿಗಾಗಿ ಖಾತ್ಯ ವಾಗ್ಪಟು ಸುಧಾಬರಗೂರ್‌ರವರು ಜಾಣರ ಜಗಲಿಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದು.ಈಗಾಗಲೇ ಬೆಂಗಳೂರು,ಹಾಸನ,ಚಿಕ್ಕಮಗಳೂರು,ಶಿವಮೊಗ್ಗ ಜಿಲ್ಲಾ ಕೇಂದ್ರಗಳಲ್ಲಿ ಇದುವರೆಗೆ ಚಿತ್ರೀಕರಣಗೊಂಡು ಅದ್ಬುತ ಮಾತುಗಾರರನ್ನು ಪರಿಚಯಿಸಿರುವುದು ಸರಿಯಷ್ಟೆ . ಚಿಣ್ಣರ ಜಗಲಿ-ಮಕ್ಕಳ ಕಾರ್ಯಕ್ರಮವು ಅಕ್ಟೋಬರ್ ೫ರಿಂದ ಪ್ರತಿ ಭಾನುವಾರ ಬೆಳ್ಳಿಗ್ಗೆ ೯ ಗಂಟೆಯಿಂದ ೧೦ ಗಂಟೆಯವರೆಗೆ ಕಸ್ತೂರಿ ವಾಹಿನಿಯಲ್ಲಿ ಪ್ರಸಾರವಾಗುವುದು.
ಈಗ ಜಾಣರ ಜಗಲಿ -ಮುಂದುವರೆದ ಭಾಗವಾಗಿ ಶಾಲಾ,ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಚಿಣ್ಣರ ಜಗಲಿಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು. ಮೊದಲಿಗೆ ಬೆಂಗಳೂರಿನ ಎಪ್ಪತ್ತು ವಿದ್ಯಾಸಂಸ್ಥೆಗಳ ನಾಲ್ಕು ನೂರುವಿದ್ಯಾರ್ಥಿಗಳಿಗೆ ನ್ಯಾಷನಲ್ ಹೈಸ್ಕೂಲ್, ಎ.ಪಿ.ಎಸ್.ಪದವಿ ಪೂರ್ವ ಕಾಲೇಜು, ವಿಜಯ ಪದವಿ ಪೂರ್ವ ಕಾಲೇಜು,ಕೇಂದ್ರಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಿ ನೂರಾ ಇಪ್ಪತ್ತು ವಿದ್ಯಾರ್ಥಿಗಳನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿದೆ.
ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ಹಾಗೂ ಮನೋವಿಕಾಸಕ್ಕೆ ಹೆಚ್ಚುಒತ್ತುಕೊಡುವಂತೆ ವಿಷಯಗಳನ್ನು ಆಯ್ಕೆ ಮಾಡಲಾಗಿದ್ದು, ಶ್ರೀಮತಿ ಸುಧಾ ಬರಗೂರ್‌ರವರ ನಿರೂಪಣೆ ಮತ್ತು ಮಾರ್ಗದರ್ಶನ ಹಾಗೂ ಜಯಪ್ರಕಾಶ್‌ಬರಗೂರ್‌ರವರ ನಿರ್ದೇಶನದಲ್ಲಿ -ಇದೇ ಸೆಪ್ಟೆಂಬರ್ ೨೪,೨೫,೨೭ ರಂದು ಸಂಜೆ ೬ರಿಂದ ೭:೩೦ರವರೆಗೆ, ಹಾಗೂ ೨೮, ರಂದು ಬೆಳ್ಳಿಗ್ಗೆ ೧೦:೩೦ ರಿಂದ ೧೨:೦೦ ರವರೆಗೂ ಹಾಗೂ ಸಂಜೆ ೬:೦೦ರಿಂದ ೭:೩೦ ಗಂಟೆವರೆಗೆ ಹಾಗೂ ೨೯ರಂದು ಸಂಜೆ ೬:೦೦ ರಿಂದ ೭:೩೦ಯವರೆಗೆ ಜೆ.ಪಿ.ನಗರದ ಆರ್.ವಿ.ಡೆಂಟಲ್ ಕಾಲೇಜು ಸಭಾಂಗಣದಲ್ಲಿ ಚಿತ್ರೀಕರಣವನ್ನು ನಡೆಸಲಾಗುವುದು.ಆಸಕ್ತರು ಪಾಲ್ಗೊಳ್ಳಬಹುದು ಪ್ರವೇಶ ಉಚಿತ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ ೯೯೪೫೩೬೭೭೮೭/೯೮೪೫೯೩೧೯೨೦.

Rating
No votes yet