ಚಿತೆ ಸೌದೆ

ಚಿತೆ ಸೌದೆ


ಯಾರದೊ ಕೈ ಜಾರಿ ಬಿದ್ದ ಅರೆಬೆಂನ್ದ ಗಾಳಒಂದು
ಉರಿ ಬಿಸಿಲಲಿ ದಾರಿ ಬದಿಯಲಿ
ಮಳೆ ನೀರಲಿ ಬದುಕಿ ಬಂದು
ಮರವಾಗಿ ಬೆಳೆದಿತ್ತು ಗಗನ ತಾಕುವಂತಿತ್ತು
ಕೊಂಬೆಗಳ ಮೆಲಲ್ಲಿ ಹಕ್ಕಿ ಗೂಡುಗಳಿತ್ತು
ಸುಡು ಬಿಸಿಲಲಿ ತಾ ನಿಂತು ಇಳೆಗೆ ತಂಪನು ಕಾ‍ಯ್ದು
ಹಲಸು ತಾ ನಿತ್ತು
ಹಸಿದ ಹೊಟ್ಟೆಯ ಮುನಿಸು ತೀರಿಸುತಿತ್ತು
ಊರ ದನಗಳು ಬರದೆ ಹೊಗವು ಬುಡಕೆ
ಹಣ್ಣು ಹಲಸಿನ ಗಮಕೆ
ಶಾಲೆ ಮಕ್ಕಳು ಮನೆಗೆ ಸೇರುವದೆಂತು
ಮರಕೋತಿಯಾಟ ಮುಗಿಯದೆ ಕತ್ತಲೆ ಕವಿಯದೆ
ಹೀಗೆ ಕಳೆದಿದೆ ಕಾಲ ಸಾಗಿತ್ತು ಬದುಕು
ಊರ ದಣಿಗಳ ಮನೆಯ ಮೂಲೆ ಪಕಾಸಿಗೆಂದು
ಮಾರಮ್ಮನ ಗುಡಿಯ ಬಾಗಿಲಿಗೆಂನ್ದು
ಮೇಜು,ಮಂಚ,ಕುರ್ಚಿಗಳಿಗೆಂನ್ದು
ಹೀಗೆ ರೆಂಬೆ ಕೊಂಬೆಗಳೆಲ್ಲ ಮಾಯವಗಿ
ಕೈಗಳಿಲ್ಲದ ಹಲಸಮ್ಮ ಮಂನ್ಡುಮರವಗಿದೆ
ಪೇಟೆಯಲ್ಲಿ ಹಲಸಿನ ಮರಕೆ ಬಾರಿ ಬೇಡಿಕೆಯಂತೆ
ಇದ ತಿಳಿದು ಸುಮ್ಮನಿರುವರೆ ಜನ
ರಾತ್ರೊ ರಾತ್ರಿ ಕಡಿದು ಸಾಗಿಸಿಯಾಗಿದೆ ಮರವ
ಸೂರ್ಯ ಮೂಡಿದರು ಕಿವಿಗೆ ಕೇಳಿದಸುವಂತಿದೆ
ಕೊಡಲಿ ಏಟಿನ ದ್ವನಿಯು
ಆದರೇನು ಅದೊ ಅಲ್ಲಿ
ಪಟ್ಟಣದ ಯಂತ್ರಗಳ ಹರಿತ ಹಲ್ಲಿಗೆ
ಕೊಟ್ಟಗಿದೆ ಅವಳ ದೇಹವ
ಉಳಿದ ಭೇರುಗಳ ತಲೆದಿಂಬು ತಾಮಾದಡಿ
ಬುಡವ ಆಶ್ರಯಿಸಿ ಮಲಗಿರುವನೋರ್ವ ಮುದಿಯ
ಹಲವು ವರ್ಶಗಳ ನಂತರ
ದೇಶ ವಿದೇಶಗಳ ತಿರುಗಿ ವಿಲಾಸ ಜೀವನವ ಮುಗಿಸಿ
ಇಂದು ರೋಗಿಯಾಗಿ ಜಿಗುಪ್ಸೆಗೊನ್ಡ ತನ್ನ ಮನಕೆ
ಬಾಲ್ಯದ ಯೋಚನೆಗಳು ಬಂನ್ದೊಡನೆ ನೆನಪಯಿತು
ಇದೆ ಮರವಲ್ಲವೆ ಮರಕೋತಿ ಯಾಟದ್ದು
ಪಾಪ ಅವಗೇನು ಗೋತ್ತು ಮುಂನ್ದೆ ಅದೇ ಬುಡವು
ತನ್ನ ಚಿತೆಗೆ ಸೌದಿ ಆಗುವುದೆಂನ್ದು
- ವಿದ್ಯಕುಮಾರ್ ಜಿ ವಿ

Rating
No votes yet

Comments